ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ನಿಷೇಧ ಆದೇಶ ವಾಪಸ್ : ರಾತ್ರೋರಾತ್ರಿ ಯೂಟರ್ನ್ ಹೊಡೆದ ಸರಕಾರ

ನಿನ್ನೆ ರಾಜ್ಯ ಸರಕಾರ ಎಲ್ಲಾ ಸರ್ಕಾರಿ ಇಲಾಖೆಗಳ
ಕಚೇರಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ, ವಿಡಿಯೋ ತೆಗೆಯುವುದನ್ನು ಸರ್ಕಾರ ನಿಷೇಧಿಸಿ ಆದೇಶವೊಂದನ್ನು ಹೊರಡಿಸಿತ್ತು. ಈ ಆದೇಶ ಹೊರಡಿಸಿದ ಬೆನ್ನಲ್ಲೇ ವಿವಾದ ಶುರುವಾಗಿತ್ತು, ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ತೀವ್ರ ಪ್ರತಿರೋಧದ ಕಾರಣ ರಾತ್ರೋರಾತ್ರಿ ಈ ಆದೇಶವನ್ನು ಹಿಂಪಡೆದುಕೊಳ್ಳಲಾಗಿದೆ.

ಸರಕಾರದ ಈ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ತೆಗೆಯಬಾರದು ಎನ್ನುವ ಆದೇಶವನ್ನು ತಡರಾತ್ರಿ ಹಿಂಪಡೆಯಲಾಗಿದೆ.

Leave A Reply

Your email address will not be published.