ಬಂಟ್ವಾಳ : ದ್ವಿಚಕ್ರ ಸವಾರನೋರ್ವನಿಂದ ಕ್ಷುಲ್ಲಕ ಕಾರಣಕ್ಕೆ ಸರಕಾರಿ ಅಧಿಕಾರಿಗಳ ಜೊತೆ ಗಲಾಟೆ, ವಾಹನ ಜಖಂ| ದೂರು ದಾಖಲು

ಬಂಟ್ವಾಳ : ದ್ವಿಚಕ್ರ ವಾಹನ ಸವಾರನೋರರ್ವ ಕ್ಷುಲ್ಲಕ ಕಾರಣಕ್ಕಾಗಿ ಸರಕಾರಿ ವಾಹನವೊಂದರ ಮಿರರ್ ಪುಡಿ ಮಾಡಿದ್ದಲ್ಲದೆ, ಸರಕಾರಿ ಅಧಿಕಾರಿಗಳಿಗೆ ಹಲ್ಲೆ ಮಾಡಲು ಮುಂದಾಗಿದ್ದು, ಅಷ್ಟು ಮಾತ್ರವಲ್ಲದೇ ಅವ್ಯಾಚ್ಯ ಶಬ್ದಗಳಿಂದ ಬೈದಿರುವ ಘಟನೆ ಇಂದು ಬೆಳಿಗ್ಗೆ ತುಂಬಿ ಎಂಬಲ್ಲಿ ನಡೆದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಿ.ಪಂ.ಕಚೇರಿಯ ವಾಹನವೊಂದರ ಚಾಲಕ ದೇವದಾಸ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಕಾರಿನಲ್ಲಿ ಮೂವರು ಸರಕಾರಿ ಅಧಿಕಾರಿಗಳು ಪುತ್ತೂರಿನಲ್ಲಿ ನಡೆಯುವ ಅಗತ್ಯ ಮೀಟಿಂಗ್ ನಲ್ಲಿ ಭಾಗವಹಿಸಲು ಹೋಗುವ ವೇಳೆ ತುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಎದುರಿನಿಂದ ಬರುತ್ತಿದ್ದ ವಾಹನವೊಂದು ಬ್ರೇಕ್ ಹಾಕಿದ್ದಕ್ಕೆ ಜಿ.ಪಂ.ಇಲಾಖೆಯ ವಾಹನ ಚಾಲಕ ಜಗದೀಶ್ ಅವರು ಕೂಡ ಬ್ರೇಕ್ ಹಾಕಿದ್ದಾರೆ. ವೇಗವಾಗಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಯುವಕ ಕಾರಿನ ಹಿಂಬದಿಯಲ್ಲಿದ್ದು ಆತ ಕೂಡ ಬ್ರೇಕ್ ಹಾಕಿದಾಗ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ರಸ್ತೆ ಬಿದ್ದಿದ್ದಾನೆ ಎಂದು ಹೇಳಲಾಗಿದೆ.

ಈ ಕಾರಣಕ್ಕಾಗಿ ಆತ ಕಾರಿಗೆ ದ್ವಿಚಕ್ರವಾಹನವನ್ನು ಅಡ್ಡ ಇಟ್ಟು ತಡೆಒಡ್ಡಿ ಬಳಿಕ ಕಾರಿನ ಮಿರರ್ ಅನ್ನು ಪುಡಿ ಮಾಡಿ ಆ ಬಳಿಕ ಚಾಲಕ ಸಹಿತ ಕಾರಿನಲ್ಲಿದ್ದ ಅಧಿಕಾರಿಗಳಿಗೆ ಅವ್ಯಾಚ್ಚ ಶಬ್ದಗಳಿಂದ ಬೈದಿರುವ ಘಟನೆ ನಡೆದಿದೆ.

ಈ ಬಗ್ಗೆ ಬಂಟ್ವಾಳ, ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.