ಕೋಟಿ ಗೆದ್ದರೂ ಆಟೋ ಚಾಲಕನಾಗಿಯೇ ದುಡಿಯುವ ಸರಳ ವ್ಯಕ್ತಿ

ಶ್ರೀಮಂತಿಕೆ ಎಂಬುದು ನಮ್ಮ ಹೃದಯದಲ್ಲಿ ಇರಬೇಕೆ ಹೊರತು ಆಸ್ತಿ ಅಂತಸ್ತಿನಲ್ಲಿ ಅಲ್ಲ. ಅದೆಷ್ಟು ದೊಡ್ಡ ಕೋಟ್ಯಾಧಿಪತಿಯಾದರೂ ಬಡವನಂತೆ ಸರಳ ಜೀವನ ನಡೆಸುವವನು ನಿಜವಾದ ಶ್ರೀಮಂತ.

ಕೆಲವೊಂದು ಬಾರಿ ಅದೃಷ್ಟ ಎಂಬುದು ಬಡವನ ಕೈ ಹಿಡಿಯುತ್ತದೆ. ಆದರೆ ಕೆಲವೊಂದಷ್ಟು ಜನ ತಾವು ಒಮ್ಮೆಗೆ ಶ್ರೀಮಂತರಾದದನ್ನು ಕಂಡು, ಸಾಮಾನ್ಯನಂತೆ ಇದ್ದವ ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಿಸಲು ಪ್ರಾರಂಭಿಸುತ್ತಾನೆ. ತಾವು ನಡೆದುಬಂದ ಹಾದಿಯನ್ನು ಎಂದೂ ಮರೆಯಬಾರದು ಎಂಬ ಮಾತಿದೆ. ಬಹುತೇಕರು ಇದಕ್ಕೆ ತದ್ವಿರುದ್ಧವಾಗಿಯೇ ನಡೆದುಕೊಂಳ್ಳುತ್ತಾರೆ. ಆದರೆ, ಈ ಮಾತಿಗೆ ನಿದರ್ಶನವಾಗಿದ್ದಾರೆ ಕಳೆದ ವರ್ಷ ಓನಂ ಬಂಪರ್ ಲಾಟರಿ ಗೆದ್ದವರು.


Ad Widget

Ad Widget

Ad Widget

Ad Widget

Ad Widget

Ad Widget

ಹೌದು. ಇವರೇ ಪಿ.ಆರ್. ಜಯಪಲಾನ್. ಕಳೆದ ಬಾರಿ ಲಾಟರಿ ಗೆದ್ದ ಇವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಲಾಟರಿಯಲ್ಲಿ 12 ಕೋಟಿ ರೂ. ಗೆದ್ದಿರುವ ಪಿ. ಆರ್. ಜಯಪಾಲನ್ ಓರ್ವ ಸಾಮಾನ್ಯ ಆಟೋ ಚಾಲಕ. ಅಷ್ಟು ಕೋಟಿ ಹಣ ಗೆದ್ದವರು ಇಂದಿಗೂ ಮೊದಲಿನಂತೆಯೇ ಆಟೋ ಚಲಾಯಿಸುತ್ತಿದ್ದಾರೆ ಅಂದರೆ ಅಚ್ಚರಿಯ ವಿಷಯವೇ ಸರಿ.

ಹೌದು. ಓಣಂ ಲಾಟರಿಯಲ್ಲಿ ಅದೃಷ್ಟ ಕೈಹಿಡಿದರೂ ಜಯಪಾಲನ್ ಅವರ ಹವ್ಯಾಸದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಈಗಾಲೂ ಎಂದಿನಂತೆಯೇ ತಮ್ಮ ಸರಳ ಜೀವನವನ್ನು ನಡೆಸುತ್ತಿದ್ದಾರೆ.ಅಲ್ಲದೆ, ಆಟೋಗಾಗಿ ತೆಗೆದುಕೊಂಡಿದ್ದ ಸಾಲವನ್ನು ಜಯಪಾಲನ್ ಇನ್ನೂ ಪಾವತಿಸಬೇಕಿದೆ. ಈ ಬಗ್ಗೆ ಮಾತನಾಡಿರುವ ಜಯಪಾಲನ್, ಲಾಟರಿಯಲ್ಲಿ ಬಂದ ಹಣದಿಂದ ಒಂದು ಕಾರು ಮತ್ತು ತ್ರಿಪುಣಿತುರಾ ಹಾಗೂ ಪಚಲತ್‌ನಲ್ಲಿ 11 ಸೆಂಟ್ ಜಮೀನು ಖರೀದಿಸಿದ್ದೇನೆ. ಕೆಲವೊಂದಿಷ್ಟು ಸಾಲ ಇತ್ತು. ಅದನ್ನು ತೀರಿಸಿದ್ದೇನೆ. ಒಂದಿಷ್ಟು ಹಣವನ್ನು ಒಡಹುಟ್ಟಿದವರು ಮತ್ತು ಆಪ್ತ ಸಂಬಂಧಿಕರಿಗೆ ನೀಡಿದ್ದೇನೆ. ಒಂದು ಭಾಗದ ಹಣದಲ್ಲಿ ಬಡವರಿಗೆ ಸಹಾಯ ಮಾಡಿದ್ದೇನೆ. ಉಳಿದ ಹಣವನ್ನು ನನ್ನ ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದೇನೆ. ಆ ಹಣವನ್ನು ಕುಟುಂಬದ ವೆಚ್ಚಕ್ಕಾಗಿ ಬಳಸುತ್ತಿಲ್ಲ ಎಂದು ಜಯಪಾಲನ್ ಹೇಳಿದ್ದಾರೆ.

ಜಯಪಾಲನ್ ಪತ್ನಿ ಮಿನಿ ಅವರು ಛೋಟನಿಕರಾದಲ್ಲಿರುವ ಡಾ. ಪಡಿಯ್ಯಾರ್ ಮೊಮೆರಿಯಲ್ ಮೆಡಿಕಲ್ ಕಾಲೇಜಿನಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಿರಿಯ ಮಗ ವೈಶಾಕ್ ಎಲೆಕ್ನಿಷಿಯನ್, ಸೊಸೆ ಕಾರ್ತಿಕಾ ಪೋಸ್ಟ್ ವುಮನ್. ಕಿರಿಯ ಮಗ ವಿಷ್ಣು ಹೋಮಿಯೋ ಡಾಕ್ಟರ್. ಈಗ ಎಂಬಿಬಿಎಸ್‌ಗೆ ಸೇರಿದ್ದಾನೆ.

ಕೇರಳದ ಅತಿ ದೊಡ್ಡ ಹಬ್ಬ ಓಣಂ ವಿಶೇಷವಾಗಿ ಪ್ರತಿ ವರ್ಷ ಸರ್ಕಾರ ಬಂಪರ್ ಲಾಟರಿಯನ್ನು ಆಯೋಜಿಸುತ್ತದೆ. ಈ ಬಾರಿ ಬಂಪರ್ ಲಾಟರಿಯ ಬಹುಮಾನ ಮೊತ್ತವಾಗಿ 25 ಕೋಟಿ ರೂಪಾಯಿಯನ್ನು ಸರ್ಕಾರ ನಿಗದಿ ಮಾಡಿದೆ. ಇದರಲ್ಲಿ ವಿಜೇತರಾಗುವವರಿಗೆ ಜಯಪಾಲನ್ ಅವರು ಸಂದೇಶವನ್ನು ರವಾನಿಸಿದ್ದು, ‘ಹಣ ವ್ಯರ್ಥ ಮಾಡಬೇಡಿ. ಎಲ್ಲವೂ ಕೂಡ ವಿಷ್ಣುವಿನ ಮಹಿಮೆ. ನಾನು ಒಂದು ತೋಟವನ್ನು ಖರೀದಿ ಮಾಡಿ 10 ಮಂದಿಗೆ ಉದ್ಯೋಗ ನೀಡಲು ಬಯಸಿದ್ದೇನೆ’ ಎಂದು ಜಯಪಾಲನ್ ಹೇಳಿದ್ದಾರೆ.

error: Content is protected !!
Scroll to Top
%d bloggers like this: