ಈತ 11 ಹೆಂಡತಿಯರ ಮುದ್ದಿನ ಗಂಡ, ಕಂಡವರ ಹೆಂಡತಿಯರ ಮೇಲೆಯೇ ಈ ಮನ್ಮಥನಿಗೆ ಕಣ್ಣು!

ಕೆಲವರು ಸುಳ್ಳು ಹೇಳಿ ಎಷ್ಟು ಮದುವೆಯಾಗುತ್ತಾರೆ. ಆದರೂ ಎಷ್ಟು ಮದುವೆಯಾಗಬಹುದು ಹೇಳಿ? ಅಬ್ಬಬ್ಬಾ ಎಂದರೆ 2 ಅಥವಾ ಮೂರು. ಅಲ್ವಾ? ಆದರೆ ಇಲ್ಲೊಬ್ಬ ಮಹಾಶಯ ಬರೋಬ್ಬರಿ 11 ಮದುವೆಯಾಗಿದ್ದಾನೆ. ಅಷ್ಟು ಮಾತ್ರವಲ್ಲ ಈತ 8 ಜನ ಪತ್ನಿಯರನ್ನು ಒಂದೇ ಏರಿಯಾದಲ್ಲಿ ಇಟ್ಟು ಸಂಸಾರ ಬೇರೆ ಮಾಡಿದ್ದಾನೆ. ಈತನ ಧೈರ್ಯ ನಿಜಕ್ಕೂ ಮೆಚ್ಚಲೇಬೇಕು. ಎಂಟೆದೆಯ ಭಂಟ ಎಂದರೆ ಇವನೇ ಏನೋ?

ಈ ತರಹ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿ ಇವರುಗಳೆಲ್ಲಾ ಅದು ಹೇಗೆ ಬದುಕುತ್ತಾರೋ ದೇವರೇ ಬಲ್ಲ. ಈ ವ್ಯಕ್ತಿಗೆ ಮದುವೆಯಾಗುವುದು ಒಂದು ಹುಚ್ಚು. ಪದೇ ಪದೇ ಮದುವೆಯಾಗಿದ್ದಲ್ಲದೆ ಅವೆಲ್ಲವನ್ನೂ ಸೀಕ್ರೆಟ್ ಆಗಿಟ್ಟಿದ್ದಾನೆ. ಇಷ್ಟೂ ಸಾಲದ್ದಕ್ಕೆ ತನ್ನ ಪತ್ನಿಯರನ್ನು ಒಂದೇ ಊರಿನಲ್ಲಿ ಅಕ್ಕಪಕ್ಕದ ಮನೆಯಲ್ಲಿಟ್ಟು ನಾಟಕವಾಡಿದ್ದಾನೆ.


Ad Widget

Ad Widget

Ad Widget

Ad Widget

Ad Widget

Ad Widget

ಆದರೆ ಒಂದು ವಿಶೇಷ ಏನೆಂದರೆ, ಇಷ್ಟೆಲ್ಲ ನಡೆದರೂ ಅಲ್ಲಿಯವರೆಗೂ ಯಾರಿಗೂ ಸಂಶಯ ಕೂಡಾ ಬಂದಿರಲಿಲ್ಲ. ಸಿನಿಮಾಗಳಲ್ಲಿ ಗೊಂದಲವಾಗಿ ಕಾಣುವ ಇಂತಹ ಮದುವೆ ಸಾಮಾನ್ಯವಾಗಿ ಒಬ್ಬ ಗಂಡಸು ಇಬ್ಬರು ಅಥವಾ ಮೂರು ಹೆಂಗಸರನ್ನು ಮದುವೆಯಾಗಿ ಅಲ್ಲಿ ಇಲ್ಲಿ ಓಡುತ್ತಾ ಅವರನ್ನು ಕಾಪಾಡಿಕೊಳ್ಳುವುದು.

ಈ ಘಟನೆ ಗುಂಟೂರು ಜಿಲ್ಲೆ ಬೇತಪುಡಿ ಎಂಬಲ್ಲಿ ನಡೆದಿದೆ. ವ್ಯಕ್ತಿಯೊಬ್ಬ 11 ಮಹಿಳೆಯರನ್ನು ಮದುವೆಯಾಗಿದ್ದಾನೆ. ಅಡಪ ಶಿವಶಂಕರ್ ಬಾಬು ಎಂಬಾತನಿಗೆ 11 ಪತ್ನಿಯರು. ವಿಷಯ ಏನೆಂದರೆ, ಏಳು ಮಹಿಳೆಯರು ಹೈದರಾಬಾದ್‌ನ ಕೊಂಡಾಪುರದ ಅಕ್ಕಪಕ್ಕದಲ್ಲಿಯೇ ಇದ್ದಾರೆ.

ಶಿವಶಂಕರ್ ಖಯಾಲಿ ಏನೆಂದರೆ ಈತ ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಅವರ ಜೊತೆ ಸಂಸಾರ ನಡೆಸುತ್ತಾನೆ. ಹಗಲು ರಾತ್ರಿ ಪಾಳಿಗಳ ಕೆಲಸವಿರುವಂತಹ ದೊಡ್ಡ ಸಂಸ್ಥೆಯಲ್ಲಿ ತನಗೆ ಕೆಲಸವಿದೆ ಎಂದು ಹೇಳಿ ಮದುವೆಗೆ ಒಪ್ಪಿಸುತ್ತಾನೆ. ಆಘಾತಕಾರಿ ಸಂಗತಿಯೆಂದರೆ, ಹೆಚ್ಚಿನ ಮಹಿಳೆಯರು ಓದಿದವರಾಗಿದ್ದಾರೆ.

ಆದರೆ ಈತನ ಇಬ್ಬರು ಪತ್ನಿಯರಿಗೆ ಈಗ ವಂಚನೆ ಪ್ರಕರಣ ಗೊತ್ತಾಗಿದೆ. ಈ ಅಸಾಮಿ ಶಿವಶಂಕರ್ ಮಹಿಳೆಯರನ್ನು ಮದುವೆಯಾಗಿ ಲಕ್ಷಗಟ್ಟಲೆ ಹಣ ಪಡೆದು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನವನ್ನು ಅವರಿಗೆ ನೀಡಿರುವುದಾಗಿ ಮಹಿಳೆಯರು ಬಹಿರಂಗಪಡಿಸಿದ್ದಾರೆ.

error: Content is protected !!
Scroll to Top
%d bloggers like this: