Special News | ನೀವು ಕತ್ತಲಲ್ಲಿ ಮಲ್ಗೊದಾ ಇಲ್ಲಾ ಬೆಳಕಿನಲ್ಲಾ ?, ನಾಚಿಕೊಳ್ಳೋ ಮೊದಲು ಈ ಲೇಖನ ಓದಿ !

ನೀವು ಕತ್ತಲೆಯಲ್ಲಿ ಮಲಗಲು ಇಷ್ಟಪಡುತ್ತೀರಾ ಅಥವಾ ಬೆಳಕಿನಲ್ಲಾ ? ಯಾರಾದರೂ ನಿಮ್ಮನ್ನು ಈ ಪ್ರಶ್ನೆ ಕೇಳಿದರೆ,  ” ಕೊನೆ ಪಕ್ಷ ಬೇಡ ಬೆಡ್ ಶೀಟ್ ಆದರೂ ಬೇಕು” ಎಂದು ನಾಚಿಕೊಂಡು ಹೇಳುವ ಮೊದಲು ಈ ಪೋಸ್ಟ್ ಓದಿ ನೋಡಿ. ನೀವಂದುಕೊಳ್ಳುವ ಸೀನ್ ಬಗ್ಗೆ ಅಲ್ಲ ಈ ಲೇಖನ !

ಸಂಪೂರ್ಣ ಕತ್ತಲೆಯಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುವ ಅನೇಕ ಜನರಿದ್ದಾರೆ, ಆದರೆ ಅನೇಕ ಜನರು ಕತ್ತಲೆಗೆ ಹೆದರುತ್ತಾರೆ ಅಥವಾ ಮಂದ ಬೆಳಕಿನಲ್ಲಿ ಮಲಗುವ ಅಭ್ಯಾಸವನ್ನು ಅದ್ಹೇಗೋ ರೂಢಿ ಮಾಡಿಕೊಂಡಿರುತ್ತಾರೆ. ಕತ್ತಲಲ್ಲಿ ಮಲಗಿ ನಿದ್ರಿಸುವುದು ಒಳ್ಳೆಯದೋ, ಬೆಳಕಿನಲ್ಲಿ ನಿದ್ರೆಗೆ ಜಾರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆದೋ  ಎಂದು ಅಧ್ಯಯನವೊಂದು ನಡೆದಿದೆ.

ಚಿಕಾಗೋದಲ್ಲಿ ನಡೆಸಲಾದ ಒಂದು ಅಧ್ಯಯನವು ದೀಪಗಳನ್ನು ಬೆಳಗಿಸಿ ಮಲಗುವುದರಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಮತ್ತು ಅಪಾಯಗಳ ಬಗ್ಗೆ ಹೇಳಿದೆ. ಅಧ್ಯಯನದ ಪ್ರಕಾರ, ಯಾವುದೇ ರೀತಿಯ ಬೆಳಕು ಅಥವಾ ಮಂದ ಬೆಳಕಿನೊಂದಿಗೆ ಮಲಗುವುದರಿಂದ ಬೊಜ್ಜು, ರಕ್ತದೊತ್ತಡ ಮತ್ತು ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಚಿಕಾಗೋದಲ್ಲಿ ಅಧ್ಯಯನ ನಡೆಸಿದ ಆ ಲೇಖಕರು, ಸ್ವಲ್ಪವೇ ಸ್ವಲ್ಪ ಬೆಳಕು ಕೂಡಾ ನಮ್ಮ ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆಯಂತೆ. ಅವರ ಪ್ರಕಾರ, ಮಂದ ಬೆಳಕಿನಲ್ಲಿ ಮಲಗುವುದರಿಂದ ಹೃದಯ ಬಡಿತ ಮತ್ತು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಸಹ ಹೆಚ್ಚಿಸಬಹುದು ಎಂದು ಹೇಳಿದ್ದಾರೆ. ಅಂದರೆ ಅದೇ ಸಮಯದಲ್ಲಿ, ಸ್ವೀಡಿಷ್ ನಿದ್ರೆಯ ತಜ್ಞರು ದೀರ್ಘಕಾಲದವರೆಗೆ ದೀಪಗಳನ್ನು ಆನ್ ಮಾಡಿ ಮಲಗುವ ಜನರು ಭವಿಷ್ಯದಲ್ಲಿ ಹೃದ್ರೋಗಗಳಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ಹೇಳುತ್ತಾರೆ.

ಚಿಕಾಗೋದಲ್ಲಿ ನಡೆಸಿದ ಈ ಅಧ್ಯಯನದಲ್ಲಿ, ಸಂಶೋಧಕರು 552 ವಯಸ್ಕ ಮಹಿಳೆಯರು ಮತ್ತು ಪುರುಷರ ನಿದ್ರೆಯನ್ನು 7 ದಿನಗಳ ಕಾಲ ಟ್ರ್ಯಾಕ್ ಮಾಡಿದ್ದಾರೆ. ಈ ಅಧ್ಯಯನವನ್ನು ಯಾವುದೇ ಪ್ರಯೋಗಾಲಯದಲ್ಲಿ ಮಾಡಲಾಗಿಲ್ಲ, ಬದಲಿಗೆ ಜನರ ದೈನಂದಿನ ವಾಸ ಸ್ಥಳಗಳಲ್ಲಿ ಮಾಡಲಾಗಿದೆ.

ಈ ಅಧ್ಯಯನದಲ್ಲಿ ಅರ್ಧಕ್ಕಿಂತ ಕಡಿಮೆ ಜನರು ಸುಮಾರು 5 ಗಂಟೆಗಳ ಕಾಲ ಕತ್ತಲೆ ಕೋಣೆಯಲ್ಲಿ ಮಲಗಲು ಬಿಟ್ಟಿದ್ದಾರೆ. ಮತ್ತು ಹೆಚ್ಚಿನ ಜನರು ಮಂದ ಬೆಳಕಿನೊಂದಿಗೆ ಮಲಗಲು ಹೇಳಿದ್ದಾರೆ. ದೀಪಗಳನ್ನು ಆನ್ ಮಾಡಿ ಮಲಗುವ ಜನರು ತಮ್ಮ ಅಧಿಕ ರಕ್ತದೊತ್ತಡದ ಅಪಾಯವನ್ನು 74 ಪ್ರತಿಶತ ಹೆಚ್ಚು, ಸ್ಥೂಲಕಾಯತೆಯ 82 ಪ್ರತಿಶತ ಹೆಚ್ಚು ಅಪಾಯವನ್ನು ಮತ್ತು 100 ಪ್ರತಿಶತದಷ್ಟು ಮಧುಮೇಹದ ಅಪಾಯವನ್ನು ಹೊಂದಿರುವುದು ಕಂಡುಬಂದಿದೆ. ಎಂದು ಅಧ್ಯಯನವು ಬಹಿರಂಗಪಡಿಸಿದೆ.

ಮಾನವರು ಸಾಧ್ಯವಾದಷ್ಟು ಕತ್ತಲೆಯಲ್ಲಿ ಮಲಗಲು ಪ್ರಯತ್ನಿಸಬೇಕು ಎಂದು ಸಂಶೋಧಕರು ಹೇಳಿದ್ದಾರೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಮಲಗುವಾಗ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳದಿರುವುದು ಮತ್ತು ಮಲಗುವ ಮಾಸ್ಕ್ ಅನ್ನು ಬಳಸುವುದು ಇವಿಷ್ಟು ಅಧ್ಯಯನದಲ್ಲಿ ಬಹಿರಂಗಪಡಿಸಿದ್ದಾರೆ. ಕೊನೆಯ ಹನಿ : ಎಲ್ಲಿ ಬೇಕಾದರೂ ಮಲಗಿ, ಕತ್ತಲಲ್ಲೇ ನಿದ್ರಿಸಿ.

Leave A Reply

Your email address will not be published.