‘CET’ ಫಲಿತಾಂಶದ ಕುರಿತಂತೆ ವಿದ್ಯಾರ್ಥಿಗಳಿಗೊಂದು ಮಹತ್ವದ ಮಾಹಿತಿ

ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ
ನಡೆಸಿದ್ದ 2022 ನೇ ಸಾಲಿನ ಕೆ-ಸಿಇಟಿ ಫಲಿತಾಂಶ ಜುಲೈ 17 ಕ್ಕೆ ಪ್ರಕಟವಾಗುವ ಸಾಧ್ಯತೆ ಕಡಿಮೆ ಇದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.

ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶದ ಜೊತೆಗೆ ಸಿಬಿಎಸ್ ಇ, ಐಸಿಎಸ್ ಇ 12 ನೇ ತರಗತಿ ಫಲಿತಾಂಶವು
ಜು. 17 ರೊಳಗೆ ಪ್ರಕಟವಾಗುವ ನಿರೀಕ್ಷೆ ಇತ್ತು. ಆದರೆ, ರಾಜ್ಯದ ಫಲಿತಾಂಶ ಮಾತ್ರ ಪ್ರಕಟವಾಗಿದೆ. ಕೇಂದ್ರೀಯ ಪಠ್ಯಕ್ರಮದ ಮಂಡಳಿಗಳು ಇನ್ನೂ ಫಲಿತಾಂಶ ಪ್ರಕಟಿಸಿಲ್ಲ. ಹೀಗಾಗಿ ಕೆ-ಸಿಇಟಿ ಫಲಿತಾಂಶ ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ರ್ಯಾಂಕ್ ಪಟ್ಟಿ ತಯಾರಿಸಲು ಕೆ-ಸಿಇಟಿ ಫಲಿತಾಂಶದ ಜೊತೆಗೆ ದ್ವಿತೀಯ ಪಿಯುಸಿಯ ಪಿಸಿಎಂ ವಿಷಯಗಳಿಂದ ಶೇ. 50 ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ.

Leave A Reply

Your email address will not be published.