ದ.ಕ.: ನಾಳೆ ( ಜುಲೈ 11) ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಸೇರಿ ಕರಾವಳಿ ಜಿಲ್ಲೆಯಾದ್ಯಂತ ನಿರಂತರ ವರ್ಷಘೋಷವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ದಕ್ಸಿಣಕನ್ನಡದಲ್ಲಿ ನಿರಂತರ ವರ್ಷಘೋಷಗಳು ಮೊಳಗುತ್ತಿರುವ ಕಾರಣ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ಹಳ್ಳ ಕೊಳ್ಳಗಳಲ್ಲಿ ಕೆಂಪು ಮಣ್ಣು ಮಿಶ್ರಿತ ನೀರು ಹರಿಯುತ್ತಿದೆ. ನದಿಗಳು ಉತ್ತುಂಗ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಇಂತಹಾ ಸಂದರ್ಭದಲ್ಲಿ, ಸಣ್ಣ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಜಿಲ್ಲೆಯ ಪ್ರಮುಖರ ಸಭೆ ಕರೆದಿದ್ದರು. ಅದರಂತೆ ಶಾಲೆಗಳಿಗೆ ನಾಳೆ ಜುಲೈ 11 ರಂದು ರಜೆ ಘೋಷಿಸಲಾಗಿದೆ.

ಶಾಲಾ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 11/07/2022 ರಂದು ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಸಾರಲಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ, ಏಡೆಡ್ ಮತ್ತು ಖಾಸಗಿ ಪ್ರೌಢ ಶಾಲಾವರೆಗಿನ ಎಲ್ಲಾ ಮಕ್ಕಳಿಗೆ ನಾಳೆ ಮಳೆಯ ನಿಮಿತ್ತ ರಜೆ ಸಾರಲಾಗಿದೆ. ಆದರೆ ಪಿಯುಸಿ ಮತ್ತು ಮೇಲ್ಪಟ್ಟ ಎಲ್ಲಾ ಶಿಕ್ಷಣ ಸಂಸ್ಥೆಗಳು ಎಂದಿನಂತೆ ಕಾರ್ಯಾಚರಿಸಲಿವೆ. ಕಾಲೇಜು, ಡಿಪ್ಲೋಮ ಗಳಿಗೆ ರಜೆ ಇರುವುದಿಲ್ಲ. ಐಟಿಐ ಗಳಿಗೆ ರಜೆ ಇರುವುದಿಲ್ಲ.

ರಜಾದಿನಗಳ ಪಠ್ಯವನ್ನು ಸರಿ ತೂಗಿಸಲು ಶಾರಿವಾರ ಫುಲ್ ಡೇ ಶಾಲೆಗಳು ತೆರೆದಿರಲಿವೆ. ಅಲ್ಲದೆ, ದಸರಾ ರಜೆಗಳಿಗೆ ಕತ್ತರಿ ಬೀಳಲಿದೆ. ಯಾವ ಪ್ರದೇಶದಲ್ಲಿ ಮಳೆಯ ಪ್ರಮಾಣ ತೀರಾ ಹೆಚ್ಚಾಗುತ್ತದೆಯೋ, ಆ ಪ್ರದೇಶದಲ್ಲಿ ಶಾಲಾ ಹಂತದಲ್ಲಿಯೇ ರಜೆ ಘೋಷಿಸಲು ಅನುಮತಿ ನೀಡಲಾಗಿದೆ.

ನಿರೀಕ್ಷಿಸಿ: ಉಡುಪಿಯ ಶಾಲಾ ರಜೆಯ ಅಪ್ಡೇಟ್ಸ್ ಬರುತ್ತಿದೆ……!

ಉಳಿದಂತೆ ಕಾರವಾರದಲ್ಲಿ ಶಾಲಾಕಾಲೇಜುಗಳಿಗೆ ರಜೆ ಇರೋದಿಲ್ಲ. ನಾಳೆಯಿಂದ ಅಲ್ಲಿ ಎಂದಿನಂತೆ ತರಗತಿಗಳು ಶುರುವಾಗಲಿವೆ. ಕೊಡಗು ಜಿಲ್ಲೆಯಲ್ಲಿ ರಜೆ ಘೋಷಿಸಿಲ್ಲ. ಕೊಡಗು ಮತ್ತು ಕಾರವಾರ ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ ಎಂದು ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್. ಆರ್. ಪುರ, ಮೂಡಿಗೆರೆ, ಕಳಸ ಮತ್ತು ಚಿಕ್ಕಮಗಳೂರು ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ಜುಲೈ 11 ಮತ್ತು 12 ರಂದು ರಜೆ ಘೋಷಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಆದೇಶ ಹೊರಡಿಸಿದ್ದಾರೆ.


Leave A Reply

Your email address will not be published.