ಮಂಗಳೂರು : ಮೊದಲ ಬಾರಿಗೆ ಮಳೆಯಬ್ಬರದಿಂದ ಮುಳುಗಿದ ಪಿಲಿಕುಳ, ಸಾರ್ವಜನಿಕರಿಗೆ ಪ್ರವೇಶ ನಿಷೇಧ!

ಮಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಪಿಲಿಕುಳಕ್ಕೆ ಈ ಬಾರಿಯ ಮಳೆಯ ನೀರು ನುಗ್ಗಿ ಬಹುತೇಕ ಮುಳುಗಡೆಯಾಗಿದೆ. ಅಷ್ಟು ಮಾತ್ರವಲ್ಲದೇ ನೆರೆ ಭೀತಿ ಉಂಟಾಗಿದೆ. 2004ರಲ್ಲಿ ಉದ್ಘಾಟನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಈ ಪರಿಸ್ಥಿತಿ ಉಂಟಾಗಿದೆ ಎಂದೇ ಹೇಳಬಹುದು.

ಭಾರೀ ಮಳೆಗೆ ಪಿಲಿಕುಳ ಮೃಗಾಲಯ ಜಲಾವೃತಗೊಂಡಿದೆ. ಮೃಗಾಲಯದ ಬಹುತೇಕ ಭಾಗ ಮುಳುಗಡೆಯಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಪಿಲಿಕುಳದಲ್ಲಿ ಭಾರೀ ನೆರೆ ಪರಿಸ್ಥಿತಿ ಎದುರಾಗಿದೆ. ಭಾರೀ ಪ್ರಮಾಣದ ನೀರು ಹರಿದು ಬಂದು ಪಿಲಿಕುಳದ ಪಾದಚಾರಿ ಮಾರ್ಗ ಬಂದ್ ಆಗಿದ್ದು, ಮೃಗಾಲಯಕ್ಕೆ ನೀರು ನುಗ್ಗಿ ಕೆಲ ಪ್ರಾಣಿಗಳ ವಾಸ್ತವ್ಯಕ್ಕೆ ಸಮಸ್ಯೆಯಾಗಿದೆ.

ಮೃಗಾಲಯದ ಒಳಗಡೆ ಮರಗಳು ಉರುಳಿ ಬೀಳುವ ಆತಂಕ ಎದುರಾಗಿದ್ದು, ಭಾರೀ ಗಾಳಿ ಮಳೆ ಮತ್ತು ನೀರು ನುಗ್ಗಿ ಮರಗಳು ಉರುಳಿ ಬಿದ್ದಿದೆ. ಮಳೆ ನೀರು ನುಗ್ಗಿ ನೀರು ನಿಂತ ಬೆನ್ನಲ್ಲೇ ಮೃಗಾಲಯ ಬಂದ್ ಆಗಿದೆ. ಮರಗಳ ತೆರವು ಕಾರ್ಯಕ್ಕೂ ಭಾರೀ ಮಳೆಯಿಂದ ಅಡ್ಡಿಯಾಗಿದೆ.

ಹಾಗಾಗಿ ಜುಲೈ 11ರವರೆಗೆ ಪಿಲಿಕುಳಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಉದ್ಯಾನವನದೊಳಗೆ ಭಾರೀ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನೆಲೆ ಮರಗಳು ಮುರಿದು ಬೀಳುವ ಅಪಾಯ ಸಾಧ್ಯತೆ ಹೆಚ್ಚಿರುವ ಕಾರಣ ಈ ಕ್ರಮ ವಹಿಸಲಾಗಿದೆ. ಜು.11ರ ಬಳಿಕ ಹವಾಮಾನ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು. ನೀರು ಭಾರೀ ಪ್ರಮಾಣದಲ್ಲಿ ಹರಿದು ಬರ್ತಾ ಇದ್ದು, ಪಿಲಿಕುಳದ ಕೆಲವೆಡೆ ಮುಳುಗಡೆ ಆಗಿದೆ ಪ್ರವಾಸಿಗರ ಪ್ರವೇಶ ನಿಷೇಧಿಸದೇ ಇದ್ದಲ್ಲಿ ಅಪಾಯ ಸಾಧ್ಯತೆ ಇತ್ತು. ಎಕರೆಗಟ್ಟಲೇ ಇರೋ ಮೃಗಾಲಯದಲ್ಲಿ ಅಲ್ಲಲ್ಲಿ ಮರಗಳು ತುಂಡಾಗಿ ಬಿದ್ದಿದೆ.

1 Comment
  1. Lancy correa says

    Thgggv

Leave A Reply

Your email address will not be published.