Day: July 10, 2022

ಕಾಣಿಯೂರು: ನದಿಗೆ ಬಿದ್ದ ಕಾರು ಪ್ರಕರಣ ! ತಡರಾತ್ರಿ ಮನೆಗೆ ಕರೆ ಮಾಡಿದ್ದ ಆ ಇಬ್ಬರು ಯುವಕರು ಗಾಬರಿಯಿಂದ ಹೇಳಿದ್ದೇನು ?!

ಕಾಣಿಯೂರು: ಇಲ್ಲಿನ ಬೈತ್ತಡ್ಕ ಮಸೀದಿ ಸಮೀಪವೇ ಹರಿಯುತ್ತಿರುವ ನದಿಯೊಂದರ ಸೇತುವೆಗೆ ಡಿಕ್ಕಿ ಹೊಡೆದು ಕಾರೊಂದು ಹೊಳೆಗೆ ಬಿದ್ದ ಘಟನೆ ಜುಲೈ 09 ರ ಮಧ್ಯರಾತ್ರಿ ನಡೆದಿದ್ದು, ಮಾರನೇ ದಿನ ಘಟನೆ ಬೆಳಕಿಗೆ ಬಂದ ಕೂಡಲೇ ಮುಳುಗಡೆಯಾದ ಕಾರಿನ ಪತ್ತೆಗಾಗಿ ಪೊಲೀಸ್, ಅಗ್ನಿಶಾಮಕ ಹಾಗೂ ಸ್ಥಳೀಯ ನುರಿತ ಈಜುಗಾರರ ತಂಡ ಕಾರ್ಯಾಚರಣೆ ಆರಂಭಿಸಿತ್ತು.ಅಂತೆಯೇ ಕಾರು ನದಿ ನೀರಿನಲ್ಲಿ ಪತ್ತೆಯಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸುಳಿವು ಈ ವರೆಗೆ ಪತ್ತೆಯಾಗದೆ ಇರುವುದರಿಂದ ಶೋಧ ಕಾರ್ಯ ಮುಂದುವರಿದಿದೆ. ಕಳೆದ ರಾತ್ರಿ ನಡೆದ …

ಕಾಣಿಯೂರು: ನದಿಗೆ ಬಿದ್ದ ಕಾರು ಪ್ರಕರಣ ! ತಡರಾತ್ರಿ ಮನೆಗೆ ಕರೆ ಮಾಡಿದ್ದ ಆ ಇಬ್ಬರು ಯುವಕರು ಗಾಬರಿಯಿಂದ ಹೇಳಿದ್ದೇನು ?! Read More »

ಮಂಗಳೂರು : ಮೊದಲ ಬಾರಿಗೆ ಮಳೆಯಬ್ಬರದಿಂದ ಮುಳುಗಿದ ಪಿಲಿಕುಳ, ಸಾರ್ವಜನಿಕರಿಗೆ ಪ್ರವೇಶ ನಿಷೇಧ!

ಮಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಪಿಲಿಕುಳಕ್ಕೆ ಈ ಬಾರಿಯ ಮಳೆಯ ನೀರು ನುಗ್ಗಿ ಬಹುತೇಕ ಮುಳುಗಡೆಯಾಗಿದೆ. ಅಷ್ಟು ಮಾತ್ರವಲ್ಲದೇ ನೆರೆ ಭೀತಿ ಉಂಟಾಗಿದೆ. 2004ರಲ್ಲಿ ಉದ್ಘಾಟನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಈ ಪರಿಸ್ಥಿತಿ ಉಂಟಾಗಿದೆ ಎಂದೇ ಹೇಳಬಹುದು. ಭಾರೀ ಮಳೆಗೆ ಪಿಲಿಕುಳ ಮೃಗಾಲಯ ಜಲಾವೃತಗೊಂಡಿದೆ. ಮೃಗಾಲಯದ ಬಹುತೇಕ ಭಾಗ ಮುಳುಗಡೆಯಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಪಿಲಿಕುಳದಲ್ಲಿ ಭಾರೀ ನೆರೆ ಪರಿಸ್ಥಿತಿ ಎದುರಾಗಿದೆ. ಭಾರೀ ಪ್ರಮಾಣದ ನೀರು ಹರಿದು ಬಂದು ಪಿಲಿಕುಳದ ಪಾದಚಾರಿ ಮಾರ್ಗ ಬಂದ್ ಆಗಿದ್ದು, …

ಮಂಗಳೂರು : ಮೊದಲ ಬಾರಿಗೆ ಮಳೆಯಬ್ಬರದಿಂದ ಮುಳುಗಿದ ಪಿಲಿಕುಳ, ಸಾರ್ವಜನಿಕರಿಗೆ ಪ್ರವೇಶ ನಿಷೇಧ! Read More »

ಉಡುಪಿ: ಮಳೆ ನೀರು ತುಂಬಿದ್ದ ಗುಂಡಿಗೆ ಬಿದ್ದು ಸ್ಕೂಟರ್ ಸವಾರ ಸಾವು

ಉಡುಪಿ : ಸ್ಕೂಟರ್ ಸವಾರರೊಬ್ಬರು ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಬೊಮ್ಮರಬೆಟ್ಟು ಗ್ರಾಮದ ಸಾಧನಾ ಕಾಂಪೌಂಡ್‌ನಲ್ಲಿ ನಡೆದಿದೆ. ಮೃತರು ಶರತ್ ಶೆಟ್ಟಿ (55). ಮಳೆ ನೀರು ರಸ್ತೆಯಿಡಿ ತುಂಬಿದ್ದರಿಂದ ಗುಂಡಿಯಾವುದು ರಸ್ತೆ ಯಾವುದು ಎಂದು ತಿಳಿಯದೇ, ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಗುಂಡಿಗೆ ಬಿದ್ದಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ನಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ- 37, ಅರ್ಜಿ ಸಲ್ಲಿಸಲು ಕೊನೆ ದಿನ- ಆಗಸ್ಟ್ 14

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್​ನಲ್ಲಿ 37 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, 10ನೇ ತರಗತಿ ಹಾಗೂ ಪದವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 37 ಹುದ್ದೆಗಳಲ್ಲಿ 30 ಹುದ್ದೆಗಳನ್ನು ಪುರಷರು ಮತ್ತು 7 ಹುದ್ದೆಗಳು ಮಹಿಳೆಯರಿಗೆ ಮೀಸಲಾಗಿದೆ. ಸಂಸ್ಥೆ : ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP)ಹುದ್ದೆ : ಸಬ್ ಇನ್ಸ್‌ಪೆಕ್ಟರ್ಹುದ್ದೆಗಳ ಸಂಖ್ಯೆ : 37ಉದ್ಯೋಗ ಸ್ಥಳ : ಅಖಿಲ ಭಾರತವೇತನ : 35400-112400 ರೂ. ಪ್ರತಿ ತಿಂಗಳು ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 10 ನೇ, …

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ನಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ- 37, ಅರ್ಜಿ ಸಲ್ಲಿಸಲು ಕೊನೆ ದಿನ- ಆಗಸ್ಟ್ 14 Read More »

IAS ಆಫೀಸರ್ ನಿಂದ ಐಐಟಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ | ಸರಕಾರ ತಗೊಂಡ ತೀರ್ಮಾನವೇನು?

ಐಐಟಿ ವಿದ್ಯಾರ್ಥಿಗಳಿಗೆ ಐಎಎಸ್ ಆಫೀಸರ್ ಓರ್ವ ಲೈಂಗಿಕ ಕಿರುಕುಳ ನೀಡಿದ ಅಮಾನವೀಯ ಘಟನೆಯೊಂದು ನಡೆದಿದೆ. ಉನ್ನತ ಹುದ್ದೆಯ ಸ್ಥಾನ ಅಲಂಕರಿಸಿಕೊಂಡಿದ್ದ ವ್ಯಕ್ತಿಯೇ ಈ ರೀತಿ ಮಾಡಿರುವುದು ಖೇದಕರ ಎಂದೇ ಹೇಳಬಹುದು. ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿದ್ದ ಐಎಎಸ್ ಅಧಿಕಾರಿ ಸಯ್ಯದ್ ರಿಯಾಜ್ ಅಹ್ಮದ್‌ನ್ನು ಜಾರ್ಖಂಡ್ ಸರಕಾರ ಶುಕ್ರವಾರ ಅಮಾನತು ಮಾಡಿದೆ. ಗುರುವಾರ ಐಎಎಸ್ ಆಫೀಸರನ್ನು ಬಂಧಿಸಲಾಗಿದ್ದು, ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಖುಂಟಿ ಎಂ ಸಬ್ ಡಿವಿಷನಲ್ …

IAS ಆಫೀಸರ್ ನಿಂದ ಐಐಟಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ | ಸರಕಾರ ತಗೊಂಡ ತೀರ್ಮಾನವೇನು? Read More »

ನಾಯಿಯ ಬಳಿ ಕಚ್ಚಿಸಿಕೊಳ್ಳಬೇಡಿ, ಒಂದು ವೇಳೆ ಕಚ್ಚಿಸಿಕೊಂಡರೆ ಹೀಗೆ ಮಾಡಿ!

ಸಣ್ಣ ಮಕ್ಕಳು ಅಥವಾ ಮನೆ ಮಂದಿಗೆ ಸಾಕು ನಾಯಿ ಇರಬಹುದು ಅಥವಾ ಬೀದಿ ನಾಯಿ ಇರಬಹುದು ಕಚ್ಚಿದರೆ ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂಬ ವಿಷಯದ ಬಗ್ಗೆ ನಾವು ಇಲ್ಲಿ ಹೇಳುತ್ತೇವೆ. ನಾಯಿ ಕಚ್ಚಿದಾಗ ಯಾರೇ ಆದರೂ ದೇಹದಲ್ಲಿ ಸೋಂಕು ಹರಡದ ರೀತಿಯಲ್ಲಿ ಎಚ್ಚರಿಕೆ ವಹಿಸಿಕೊಂಡರೆ ಉತ್ತಮ. ಹಾಗೂ ಮುಂಜಾಗ್ರತಾ ಕ್ರಮ ವಹಿಸಿಕೊಂಡರೆ ಟೆನ್ಶನ್ ಮಾಡೋ ಅವಶ್ಯಕತೆ ಇಲ್ಲ. ಅನೇಕ ಬಾರಿ, ಸಾಕು ನಾಯಿಗಳು ಬೀದಿಯಲ್ಲಿ ಹೋಗುವ ಜನರ ಮೇಲೆ ದಾಳಿ ಮಾಡುತ್ತವೆ. ಈ ಕಾರಣದಿಂದಾಗಿ, …

ನಾಯಿಯ ಬಳಿ ಕಚ್ಚಿಸಿಕೊಳ್ಳಬೇಡಿ, ಒಂದು ವೇಳೆ ಕಚ್ಚಿಸಿಕೊಂಡರೆ ಹೀಗೆ ಮಾಡಿ! Read More »

ಸ್ಮಶಾನದಲ್ಲಿ ಹೂತಿದ್ದ ಶವದ ಮೇಲೆ ನೀರು ಹಾಕಿ‌ದ ಜನ, ಕಾರಣ ಮಾತ್ರ ವಿಚಿತ್ರ!!

ಮಳೆಯ ಅಬ್ಬರಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ಜನರು ಕಂಗಾಲಾಗಿದ್ದು, ಎಂದು ಮಳೆ ಕಡಿಮೆಯಾಗುತ್ತದೆ ಎಂದು ಕಾದು ಕೂತಿದ್ದಾರೆ. ಆದರೆ ಇಲ್ಲೊಂದು ಕಡೆ ಮಳೆಗಾಗಿ ವಿಶೇಷ ಪೂಜೆಯೊಂದನ್ನು ಮಾಡಿದ್ದಾರೆ. ಒಂಚೂರು ಬಿಡದೆ ಸುರಿಯುತ್ತಿರುವ ಮಳೆಯ ನಡುವೆ, ವಿಜಯಪುರ ನಗರದ ಈ ಗ್ರಾಮದಲ್ಲಿ ಒಂದು ಹನಿ ಮಳೆ ಕೂಡ ಆಗದ ಕಾರಣ, ಮಳೆಯಿಲ್ಲದೆ ಜನರು ಕಂಗಾಲಾಗಿದ್ದಾರೆ. ಹೀಗಾಗಿ, ಈ ವಿಶಿಷ್ಟ ಆಚರಣೆ ಮೂಲಕ ದೇವರ ಮೊರೆ ಹೋಗುತ್ತಿದ್ದಾರೆ. ಆದರೆ ಈ ಆಚರಣೆ ಮಾತ್ರ ಆಶ್ಚರ್ಯವಾಗುವಂತೆ ಇದೆ ಎಂದರೆ ತಪ್ಪಾಗಲಾರದು. ಅದೇನು …

ಸ್ಮಶಾನದಲ್ಲಿ ಹೂತಿದ್ದ ಶವದ ಮೇಲೆ ನೀರು ಹಾಕಿ‌ದ ಜನ, ಕಾರಣ ಮಾತ್ರ ವಿಚಿತ್ರ!! Read More »

ಧಾರಾಕಾರ ಮಳೆ ಪರಿಣಾಮ : ಮಳೆಗಾಲ ಮುಗಿಯುವವರೆಗೆ ಕೊಡಗು ಜಿಲ್ಲೆಗೆ ವಾಹನ ಪ್ರವೇಶ ನಿಷೇಧ : ಜಿಲ್ಲಾಡಳಿತ ಆದೇಶ

ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ  ಅನೇಕ ರಸ್ತೆಗಳು ಜಲಾವೃತಗೊಂಡಿದೆ. ಹಾಗಾಗಿ ಇದರ ಪರಿಣಾಮ, ಕೆಲ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ನಡುವೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗ ಆದೇಶ ಹೊರಡಿಸಿದ್ದು, ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಹೆಚ್ಚಾಗುವ ದಿನಗಳಲ್ಲಿ ರಸ್ತೆಯ ಪರಿಸ್ಥಿತಿ ಹದಗೆಡುತ್ತಿದೆಯಲ್ಲದೇ ಅಧಿಕ ಭಾರ ತುಂಬಿದ ಸರಕು ಸಾಗಾಣೆ ವಾಹನಗಳು ದಿನನಿತ್ಯ ಸಂಚರಿಸುವುದರಿಂದ ರಸ್ತೆಯ ಬದಿಗಳ ಮಣ್ಣು …

ಧಾರಾಕಾರ ಮಳೆ ಪರಿಣಾಮ : ಮಳೆಗಾಲ ಮುಗಿಯುವವರೆಗೆ ಕೊಡಗು ಜಿಲ್ಲೆಗೆ ವಾಹನ ಪ್ರವೇಶ ನಿಷೇಧ : ಜಿಲ್ಲಾಡಳಿತ ಆದೇಶ Read More »

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ತಮ್ಮನನ್ನು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಹೇಳಿದ್ದೆ : ಡಿಕೆಶಿ

ಬೆಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ತಮ್ಮನಿಗೆ ನಾನು ‘ಬನ್ನಿ, ಬಂದು ಕ್ಷೇತ್ರಕ್ಕೆ ನಿಲ್ಲಿ ಅಂತ ಹಿಂದೆಯೇ ಹೇಳಿದ್ದೆ. ಆದರೆ ಅವರು ತಮ್ಮ ಸೇವೆಗಳನ್ನ ಹಾಳು ಮಾಡಲು ಇಚ್ಚಿಸುವುದಿಲ್ಲ. ಹೀಗಾಗಿ ಅವರು ತಿರಸ್ಕರಿಸಿದರು’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇಂದು ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ನನಗೂ ವೀರೇಂದ್ರ ಹೆಗ್ಗಡೆಯವರಿಗೂ, ಮಂಜುನಾಥನಿಗೂ ಭಕ್ತರಿಗೂ ಇರುವ ಸಂಬಂಧ. ಭಕ್ತನಿಗೂ, ಭಗವಂತನಿಗೂ ಇರುವ ಪ್ರೀತಿ, ಗೌರವ, ವಿಶ್ವಾಸ ಅವರ ಮೇಲಿದೆ. …

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ತಮ್ಮನನ್ನು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಹೇಳಿದ್ದೆ : ಡಿಕೆಶಿ Read More »

ಕೇಂದ್ರಾಡಳಿತ ಪ್ರದೇಶ ಡಿಯು ದಾಮನ್ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್, 13 ರಲ್ಲಿ 13 ಬಿಜೆಪಿ ಜೇಬಿಗೆ !

ದಿಯು ಮತ್ತು ದಮನ್‌ಗಳ ಪೈಕಿ ದಿಯು ಮುನ್ಸಿಪಲ್ ಚುನಾವಣೆಯಲ್ಲಿ ಭರ್ಜರಿ ಸಕ್ಸಸ್ ಪಡೆದಿದೆ ಬಿಜೆಪಿ. ಕೌನ್ಸಿಲ್‌ಗೆ ಇದೇ 7ರಂದು ಚುನಾವಣೆ ನಡೆದಿತ್ತು. ಅಚ್ಚರಿಯ ರೀತಿಯಲ್ಲಿ ಚುನಾವಣೆ ನಡೆದ ಒಟ್ಟೂ 13 ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕಗೆ ಹಾಕಿಕೊಂಡು, ಕ್ಲೀನ್ ಸ್ವೀಪ್ ಮಾಡಿದೆ. ಒಂದೇ ಒಂದು ಕ್ಷೇತ್ರವನ್ನೂ ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವಾಗದೇ ಭಾರಿ ಮುಖಭಂಗ ಅನುಭವಿಸಿದೆ. ಚುನಾವಣೆ ಇಲ್ಲದೆಯೇ ಬಿಜೆಪಿ 6 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿತ್ತು. ಆದರೆ, ಉಳಿದ ಏಳು ಸ್ಥಾನಕ್ಕೆ ಜುಲೈ 7 ರಂದು ಚುನಾವಣೆ ನಡೆದು, …

ಕೇಂದ್ರಾಡಳಿತ ಪ್ರದೇಶ ಡಿಯು ದಾಮನ್ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್, 13 ರಲ್ಲಿ 13 ಬಿಜೆಪಿ ಜೇಬಿಗೆ ! Read More »

error: Content is protected !!
Scroll to Top