ನಾಯಿಯ ಬಳಿ ಕಚ್ಚಿಸಿಕೊಳ್ಳಬೇಡಿ, ಒಂದು ವೇಳೆ ಕಚ್ಚಿಸಿಕೊಂಡರೆ ಹೀಗೆ ಮಾಡಿ!

ಸಣ್ಣ ಮಕ್ಕಳು ಅಥವಾ ಮನೆ ಮಂದಿಗೆ ಸಾಕು ನಾಯಿ ಇರಬಹುದು ಅಥವಾ ಬೀದಿ ನಾಯಿ ಇರಬಹುದು ಕಚ್ಚಿದರೆ ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂಬ ವಿಷಯದ ಬಗ್ಗೆ ನಾವು ಇಲ್ಲಿ ಹೇಳುತ್ತೇವೆ. ನಾಯಿ ಕಚ್ಚಿದಾಗ ಯಾರೇ ಆದರೂ ದೇಹದಲ್ಲಿ ಸೋಂಕು ಹರಡದ ರೀತಿಯಲ್ಲಿ ಎಚ್ಚರಿಕೆ ವಹಿಸಿಕೊಂಡರೆ ಉತ್ತಮ. ಹಾಗೂ ಮುಂಜಾಗ್ರತಾ ಕ್ರಮ ವಹಿಸಿಕೊಂಡರೆ ಟೆನ್ಶನ್ ಮಾಡೋ ಅವಶ್ಯಕತೆ ಇಲ್ಲ.

ಅನೇಕ ಬಾರಿ, ಸಾಕು ನಾಯಿಗಳು ಬೀದಿಯಲ್ಲಿ ಹೋಗುವ ಜನರ ಮೇಲೆ ದಾಳಿ ಮಾಡುತ್ತವೆ. ಈ ಕಾರಣದಿಂದಾಗಿ, ಕೆಲವು ಜನರಿಗೆ ಜೋರಾಗಿ ಗಾಯವಾಗುತ್ತೆ ಅಥವಾ ಉಗುರುಗಳ ಗೀರು ಮೂಡುತ್ತದೆ. ಹೀಗಾದಾಗ, ಸೋಂಕು ಹರಡುವುದನ್ನು ತಡೆಗಟ್ಟಲು ತಕ್ಷಣವೇ ಪ್ರಥಮ ಚಿಕಿತ್ಸೆ ಮಾಡೋಕು. ನಾಯಿ ಕಡಿತಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇಲ್ಲಿದೆ ಉತ್ತರ.

ನಾಯಿ ಕಚ್ಚಿದಾಗ ಮಾಡಬೇಕಾದ ಕೆಲಸ ಏನು ? ನಾಯಿ ಕಚ್ಚಿದ ಜಾಗದಲ್ಲಿ ಉಂಟಾದ ಗಾಯವನ್ನು ಅನೇಕ ಜನರು ಸ್ವಚ್ಛಗೊಳಿಸುವುದಿಲ್ಲ ಅದು ವಿವಿಧ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.
ನಾಯಿ ಕಚ್ಚಿದ ನಂತರ ಬಾಧಿತ ಪ್ರದೇಶವನ್ನು ನೀರು ಮತ್ತು ಸಾಬೂನಿನಿಂದ ಸ್ವಚ್ಛಗೊಳಿಸಿ.

ಕೂಡಲೇ, ಉತ್ತಮ ವೈದ್ಯರನ್ನು ಸಂಪರ್ಕಿಸಿದರೆ ಬಲು ಉತ್ತಮ. ಗಾಯವನ್ನು ತೊಳೆದ ನಂತರ, ಪೀಡಿತ ಪ್ರದೇಶದ ಮೇಲೆ ನೀವು ಬೀಟಾಡಿನ್ ಅಥವಾ ಆಂಟಿ ಸೆಪ್ಟಿಕ್ ಕ್ರೀಮ್ ಸಹ ಹಚ್ಚಬಹುದು.

ನಾಯಿ ಕಚ್ಚಿದಾಗ ಇದನ್ನು ಮಾಡಬೇಡಿ :
ನಾಯಿ ಕಚ್ಚಿದ ನಂತರ ಗಾಯಕ್ಕೆ ಬ್ಯಾಂಡೇಜ್ ಹಾಕಬಾರದು. ಇದು ಬಹಳ ಮುಖ್ಯ. ಗಾಯವನ್ನು ತೊಳೆದ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇದರಿಂದ ವೈದ್ಯರು ಅದರ ತೀವ್ರತೆಯ ಆಧಾರದ ಮೇಲೆ ಅದಕ್ಕೆ ಚಿಕಿತ್ಸೆ ನೀಡಬಹುದು.

ನಾಯಿ ಕಚ್ಚಿದಾಗ, ಅದು ವಿವಿಧ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಸ್ಯೆಗಳಲ್ಲಿ ಸೋಂಕು ಪ್ರಮುಖವಾಗಿದೆ. ನಾಯಿಯ ಬಾಯಲ್ಲಿ ಬ್ಯಾಕ್ಟಿರಿಯಾ ಹೆಚ್ಚಾಗಿರುತ್ತೆ. ಅದು ಕಚ್ಚಿದಾಗ ಪೀಡಿತ ವ್ಯಕ್ತಿಯ ದೇಹವನ್ನು ಪ್ರವೇಶಿಸಬಹುದು.

ನಾಯಿ ಕಚ್ಚಿದಾಗ ಕೇವಲ ಸೋಂಕು ಮಾತ್ರವಲ್ಲ, ಇನ್ನು ಹಲವು ಸಮಸ್ಯೆಗಳು ಸಹ ಉಂಟಾಗುತ್ತವೆ, ಅವುಗಳೆಂದರೆ ನರಗಳು ಅಥವಾ ಸ್ನಾಯುಗಳಲ್ಲಿನ ಸಮಸ್ಯೆಗಳು ಮೂಳೆ ಮುರಿಯುತ್ತದೆ. ಗಾಯವು ಆಳದವರೆಗೂ ಬಾಧಿಸುತ್ತೆ.

Leave A Reply

Your email address will not be published.