ಸರಳವಾಸ್ತು ಗುರೂಜಿ ಹತ್ಯಾ ಕಾರಣದ ಸತ್ಯ ಬಿಚ್ಚಿಟ್ಟ ಹಂತಕ ! ಫಸ್ಟ್ ಸ್ಕೆಚ್ ಮಿಸ್ ಆಗುವಂತೆ ಮಾಡಿದ ಆ ಪುಟ್ಟ ಹುಡುಗ ಯಾರು ?

ಹುಬ್ಬಳ್ಳಿ: ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಸರಳವಾಸ್ತು ಚಂದ್ರಶೇಖರ ಗುರೂಜಿಯನ್ನು ಹತ್ಯೆ ಮಾಡಿರುವ ಆರೋಪಿಗಳು ಇದೀಗ ತಾವು ಈ ರೀತಿ ಮಾಡಲು ಕಾರಣ ಏನು ಎಂಬ ಒಂದೊಂದೇ ಮಾಹಿತಿಯನ್ನು ಹೊರಕ್ಕೆ ಹಾಕುತ್ತಿದ್ದಾರೆ. ಪೊಲೀಸ್ ವಿಚಾರಣೆ ತೀವ್ರಗೊಳ್ಳುತ್ತಲೇ ಒಂದೊಂದೇ ಸ್ಫೋಟಕ ರಹಸ್ಯಗಳು ಹೊರ ಬರುತ್ತಿವೆ.

ಆರೋಪಿಗಳಲ್ಲಿ ಪ್ರಮುಖನಾಗಿರುವ ಮಹಾಂತೇಶ್ ನೇ ಕೊಲೆ ಮಾಡಿದ್ದು ತಾನು ಎಂದು ಒಪ್ಪಿಕೊಂಡಿದ್ದಾನೆ. ಕೊಲೆಗೆ ಪ್ಲಾನ್ ಮಾಡಿದ್ದು ಹೇಗೆ? ಏಕೆ ಎಂಬ ವಿಷಯಡಾ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾನೆ. ಒಂದು ಕಾಲದಲ್ಲಿ ಗುರೂಜಿಯ ಬಲಗೈ ಬಂಟನೆಂದೇ ಪ್ರಸಿದ್ಧನಾಗಿದ್ದ ಮಹಾಂತೇಶ್ ಇಂತಹಾ ಹೀನಾಯ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂಬ ಬಗ್ಗೆ ಸಾಕಷ್ಟು ಕುತೂಹಲ ಮತ್ತು ಇನ್ನಷ್ಟು ಊಹಾಪೋಹಗಳು ಬೆಳೆದಿದ್ದವು. ಇದೀಗ ಅವು ಒಂದೊಂದಾಗಿ ಗಂಟು ಬಿಚ್ಚಿಕೊಳ್ಳುತ್ತಿವೆ. ಆರೋಪಿಗಳ ಹೇಳಿಕೆಯನ್ನು ಪೊಲೀಸರು ತಾಳೆ ಹಾಕಿ ನೋಡುತ್ತಿದ್ದಾರೆ. ಹಾಗಾದರೆ, ಈಗ ಕೊಲೆ ಆರೋಪಿ ಮಹಾಂತೇಶ ಹೇಳುತ್ತಿರುವ ಮಾತೇನು ?

ಇದಕ್ಕೂ ಮುನ್ನ ಒಂದಷ್ಟು ಬೇರೆ ವಿಷಯಗಲನ್ನು ಇಲ್ಲಿ ಚರ್ಚೆ ಮಾಡಬೇಕಿದೆ. ಅವತ್ತು ಸರಳ ವಾಸ್ತು ಪಂಡಿತ, ಚಂದ್ರಶೇಖರ ಗುರೂಜಿಯನ್ನು ನಟ್ಟ ನಡು ಮಧ್ಯಾಹ್ನ, ಅಲ್ಲಿದ್ದ ಕನಿಷ್ಠ ಹತ್ತು ಮಂದಿಯ ಎದುರಿನಲ್ಲಿ ದೇಹದ ಎಲ್ಲಾ ಮೂಲೆಮೂಲೆಗೂ ಚುಚ್ಚಿ ತಿವಿದು, ಹೊರಳಿಸಿ ಅಡ್ಡಾದಿಡ್ಡಿ ತಿವಿದು ಅಷ್ಟೇನೂ ಅವಸರ ವಿಲ್ಲದಂತೆ ಆ ಥ್ರೀ ಸ್ಟಾರ್ ಹೋಟೆಲಿನಿಂದ ನಡೆದುಹೋದರಲ್ಲ ಆ ಆರೋಪಿಗಳು. ಆಗ ದೇಶವೇ ಬೆಚ್ಚಿ ಬಿದ್ದಿತ್ತು. ಕಾರಣ ದ್ವೇಷ ತೀರಿಸಿಕೊಂಡ ವಿಧಾನ ಮತ್ತು ಸರಿಸುಮಾರು ಮುಕ್ಕಾಲು ನಿಮಿಷಗಳ ಕಾಲ 42 ಡ್ರಾಗರ್ ಚುಚ್ಚಿ ಕೊಂದ ಆ ಅಪರಾಧಿಗಳ ಆಕ್ರೋಶ. ಅಷ್ಟು ನಿಚ್ಚಳ ಬೆಳಕಿನಲ್ಲಿ, ಹೋಟೆಲಿನ ರಿಸೆಪ್ಷನ್ ನಲ್ಲಿ ಹಾಗೆ ಅವರಿಬ್ಬರೂ ಗುರೂಜಿಯ ಮೇಲೆ ಗೀರುತ್ತಿದ್ದರೆ, ಅಲ್ಲಿದ್ದವರೆಲ್ಲ ಅಸಹಾಯಕರಾಗಿ ನೋಡುತ್ತಾ ನಿಲ್ಲಬೇಕಾಯಿತು. ಅವರೇ ಅಲ್ಲ, ಅಲ್ಲಿದ್ದ ಸಿಸಿ ಟಿವಿ ಆ ಎಲ್ಲಾ ಘಟನಾವಳಿಗಳನ್ನು ಒಂದಿಷ್ಟೂ ಮರೆಯದೆ ನೆನಪಿನಲ್ಲಿ ಇಟ್ಟುಕೊಳ್ಳುತ್ತಾ ಇತ್ತು. ಅದು ಆ ಆರೋಪಿಗಳಿಗೂ ತಿಳಿದಿತ್ತು. ಆದರೂ, ಕ್ಯಾರೇ ಇಲ್ಲದೆ ಕ್ರೈಮ್ ನಡೆಸುವ ಅವರ ಕ್ರೌರ್ಯಕ್ಕೆ ಪೊಲೀಸ್ ಅಧಿಕಾರಿಗಳೇ ಒಂದು ಕ್ಷಣ ವಿಚಲಿತರಾಗಿದ್ದರು. ಕೊಲೆಯ ವಿಡಿಯೋ ನೋಡಲಾರದೆ ನೋಡಿದಿದವರಿಗೆ ಅದರ ಬಗ್ಗೆ ಚೆನ್ನಾಗಿ ಗೊತ್ತು.

ಅಲ್ಲಿ ಕೊಲೆ ನಡೆದು ಅಪರಾಧಿಗಳು ಜಾಗ ಖಾಲಿಮಾಡುವ ಕೆಲವೇ ಹೊತ್ತಿನಲ್ಲಿ ಪೊಲೀಸರು ದಾಪುಗಾಲು ಹಾಕಿ ಬಂದಿದ್ದರು. ಕೆಲವೇ ನಿಮಿಷಗಳಲ್ಲಿ, ಅವರಿಗೆ ಅಪರಾಧಿಯ ಸುಳಿವು ಸಿಕ್ಕಿತ್ತು. ಹಾಗೆ ಸೀದಾ ಎದ್ದು ಹೋದ ಒಂದು ತಂಡ ಆರೋಪಿಯ ಮನೆ ತಲುಪಿದ್ದರು. ಅಲ್ಲಿ ಆತನ ಪತ್ನಿ ವನಜಾಕ್ಷಿ ಇದ್ದಳು. ಆಕೆಯನ್ನು ಅಲ್ಲೇ ಬಂಧಿಸಿ ಉಟ್ಟ ಬಟ್ಟೆಯಲ್ಲಿ ಸ್ಟೇಷನ್ ಗೆ ಎಳೆದು ತಂದಿದ್ದಾರೆ ಪೊಲೀಸರು. ಎಳೆದು ತಂದಿದ್ದಾರೆ ಅನ್ನುವುದಕ್ಕಿಂತ, ತಾನೇ ಮಾಮೂಲಾಗಿ ಏನೂ ತಕರಾರು ಮಾಡದೆ, ಇನ್ಸ್ಪೆಕ್ಟರ್ ಹೇಳಿದ ತಕ್ಷಣ ಬಂದು ವ್ಯಾನ್ ಹತ್ತಿದ್ದಾಳೆ. ಆಗ ಪೊಲೀಸರಿಗೆ ಆಕೆಯ ನಡೆ ಅಚ್ಚರಿ ಮೂಡಿಸಿತ್ತು. ಆಕೆಯ ವಿಚಾರಣೆಯ ಉದ್ದಕ್ಕೂ ಆಕೆ ಏನೂ ಸುಳ್ಳು ಹೇಳದೆ, ಗಂಡ ಮೂರ್ನಾಕು ದಿನಗಳಿಂದ ಮನೆಗೆ ಬಂದಿಲ್ಲವೆಂದೂ, ಅರ್ಜೆಂಟ್ ಕೆಲಸ ಇದೆ ಎಂದು ಎಲ್ಲೋ ಹೋಗಿದ್ದಾನೆಂದೂ ಹೇಳಿದ್ದಳು. ಅಷ್ಟರಲ್ಲಾಗ್ಲೇ, ಆಕೆಗೆ ಆಕೆಯ ಗಂಡ ಚಂದ್ರಶೇಖರ ಗುರೂಜಿಯನ್ನು ಕೊಂಡು ಮುಗಿಸಿದ ವಿಷ್ಯ ತಿಳಿದು ಬಂದಿತ್ತು. ” ತನ್ನ ಗಂಡ ಮಾಡಿದ್ದು ತಪ್ಪು, ತನಗೆ ಆದರೆ ಬಗ್ಗೆ ಏನೂ ಗೊತ್ತಿಲ್ಲ. ಗುರೂಜಿಯನ್ನು ಕೊಂಡದ್ದು ನೋವಾಗಿದೆ. ನನ್ನ ತಂದೆಯ ಥರ ಅವರಿದ್ದರು” ಅಂದಿದ್ದಳು ವನಜಾಕ್ಷಿ. ಆಗ ನಿಧಾನಕ್ಕೆ ಈ ಕೊಲೆಯಲ್ಲಿ ವನಜಾಕ್ಷಿಯ ಕೈ ಇಲ್ಲ ಅನ್ನುವುದು ಸಾಬೀತಾಗುತ್ತಾ ಹೋಗಿ, ಕೊನೆಗೆ ಅದೇ ದಿನ ಸಂಜೆಯ ಹೊತ್ತಿಗೆ ಆಕೆಯನ್ನು ಬಿಡುಗಡೆ ಗೊಳಿಸಿ, ತಾವೇ ಮನೆಗೆ ತಲುಪಿಸಿ ಬಂದಿದ್ದರು ಪೊಲೀಸರು.

ನಂತರ ಘಟನೆ ನಡೆದ ನಾಲ್ಕು ಗಂಟೆಗಳ ಒಳಗೇ, ಅಪರಾಧಿಗಳನ್ನು ಬೆಳಗಾವಿಯ ದಾರಿಯ ಮಧ್ಯೆ ಹಿಡಿದಿದ್ದರು ಪೊಲೀಸರು. ಆರೋಪಿ ಮಹಾಂತೇಶ್ ಶಿರೋಳ್ ಮತ್ತು ಮಂಜುನಾಥ್ ನ ಬಂಧನ ಆಗಿತ್ತು. ಆಗ ಶುರುವಾಗಿತ್ತು ವಿಚಾರಣೆ. ಹುಬ್ಬಳ್ಳಿ ಆಯುಕ್ತರಿಂದ ಹಿಡಿದು ಹಲವು ತನಿಖಾ ಅಧಿಕಾರಿಗಳು ವಿಷಯ ತೆಗೆಯಲು ವಿಚಾರಣೆ ಶುರುವಿಟ್ಟುಕೊಂಡರು. ಆಗ ಬಾಯಿ ಬಿಟ್ಟಿದ್ದಾನೆ ಮುಖ್ಯ ಆರೋಪಿ ಮಹಾಂತೇಶ್ ಶಿರೋಳ್. ಅದನ್ನು ಆತನ ಮಾತಿನಲ್ಲೇ ಕೇಳಿ.
“ನೋಡಿ ಸಾರ್, ಚಂದ್ರಶೇಖರ ಗುರೂಜಿಯ ಈ ಸಂಸ್ಥೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ಶ್ರಮಿಸಿದ್ದವ ನಾನು. ನನ್ನ ಕೆಲಸ ನೋಡಿ ನಂಗೆ ವೈಸ್ ಪ್ರೆಸಿಡೆಂಟ್ ಹುದ್ದೆ ಸಿಕ್ಕಿತ್ತು ಸಾರ್. ರಾತ್ರಿ ಹಗಲು ಕೆಲಸ ಮಾಡಿ, ಒಳ್ಳೆ ಕೆಲಸ ಮಾಡೋ ಯುವಕರ ತಂಡ ಕಟ್ಟಿ ಸಂಸ್ಥೆ ಬೆಳೆಸಿದ್ದೇನೆ. ಸಂಸ್ಥೆಯಲ್ಲಿ ಗುರೂಜಿ ಬಲಗೈ ಬಂಟನಾಗಿ ಕೆಲಸಮಾಡಿದ್ದೆ. ಚೆನ್ನಾಗೇ ಇದ್ದೆವು. ಕೊನೆಗೆ ನನ್ನನ್ನು ಸಂಸ್ಥೆಯಿಂದ ದೂರ ಮಾಡಿ ಒಬ್ರೇ ಲಾಭ ಮಾಡಿಕೊಳ್ಳುತ್ತಿದ್ದರು. ಇದು ನನ್ನಿಂದ ಸಹಿಸಲು ಆಗಲಿಲ್ಲ ಸಾರ್ ” ಎಂದು ಮಹಾಂತೇಶ್ ಹೇಳಿದ್ದಾನೆ.

ಈ ಮಧ್ಯೆ ಬೇನಾಮಿ ಆಸ್ತಿಗಳ ಕುರಿತಾಗಿಯೂ ಇನ್ನಷ್ಟು ಮಾಹಿತಿಗಳು ಹೊರಬಂದಿವೆ. ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಮಹಾಂತೇಶ್ ಸೂಚಿಸಿದ ವ್ಯಕ್ತಿಗಳ ಹೆಸರಲ್ಲಿ ಬೇನಾಮಿ ಆಸ್ತಿಯನ್ನು ಗುರೂಜಿ ಮಾಡಿದ್ದರು. ಈ ಆಸ್ತಿಗಳು ಸರಳವಾಸ್ತು ಸಂಸ್ಥೆಯ ನೌಕರರ ಹೆಸರಲ್ಲಿ ಮಾಡಲಾಗಿದೆ. ಮಹಾಂತೇಶ್ ಸೂಚಿಸಿರುವ ವ್ಯಕ್ತಿಗಳ ಹೆಸರಲ್ಲಿ ಆಸ್ತಿ ಮಾಡಲಾಗಿತ್ತು. ಕೊರೋನಾ ನಂತರ ಸಂಸ್ಥೆ ಆರ್ಥಿಕವಾಗಿ ಲಾಭ ಕಮ್ಮಿ ಮಾಡಲು ತೊಡಗಿತ್ತು. ಆಗ ತಾವು ಮಾಡಿಸಿಕೊಟ್ಟ ಆಸ್ತಿಯನ್ನು ತಮಗೆ ಮರಳಿ ಕೊಡಿಸುವಂತೆ ಗುರೂಜಿ ಮಹಾಂತೇಶ್‌ಗೆ ಹೇಳಿದ್ದರು. ಅದರಂತೆ ಒಂದೊಂದೇ ಆಸ್ತಿಯನ್ನು ಮರಳಿ ಕೊಡಿಸುವ ಕೆಲಸ ಕೂಡಾ ಮಹಾಂತೇಶ್ ಮಾಡಿದ್ದನಂತೆ. ಇದರ ಮಧ್ಯೆ ಒಂದೆರಡು ಆಸ್ತಿಗಳನ್ನು ಗುರೂಜಿ ಗೊತ್ತಾಗದ ಮಹಾಂತೇಶ್ ಮಾರಾಟ ಸಹ ಮಾಡಿದ್ದ ಎಂದು ಸ್ವತಃ ಆತ ಒಪ್ಪಿಕೊಂಡಿದ್ದಾನೆ.

ಬೇನಾಮಿ ಆಸ್ತಿ ಪಡೆದುಕೊಳ್ಳುವುದು ತುಸು ಕಷ್ಟ ಅನ್ನಿಸಿದಾಗ, ಈ ಬೇನಾಮಿ ಆಸ್ತಿಗಳನ್ನು ಮರಳಿ ಕೊಟ್ಟರೆ ಹಣ ನೀಡುವುದಾಗಿ ಗುರೂಜಿ ಮಹಾಂತೇಶ್‌ಗೆ ಭರವಸೆ ನೀಡಿದ್ದರು. ಪ್ರತಿ ತಿಂಗಳು 50 ಸಾವಿರ ರೂಪಾಯಿ ಹಾಗೂ ಒಂದೆರಡು ಆಸ್ತಿ ಕೊಡಿಸುವುದಾಗಿ ಹೇಳಿದ್ದರು. ಆದರೆ ಕೊನೆಗೆ ಚಿಲ್ಲರೆ ಹಣ ಕೊಟ್ಟು, ಇಷ್ಟೇ ಇರೋದು ಎಂದರು. ಮಾತಿನಂತೆ ಹಣ ಕೊಡಿ ಎಂದು ಹೇಳಿದಾಗ ಗುರೂಜಿ ನಿಂದಿಸಿದ್ದೂ ಅಲ್ಲದೇ, ಬೇನಾಮಿ ಆಸ್ತಿ ಮರಳಿ ಕೊಡಿಸದಿದ್ದರೆ ಸುಮ್ಮನೆ ಬಿಡುವುದಿಲ್ಲ. ನಾನು ಇನ್ಫ್ಲುಯೆನ್ಸ್ ಬಳಸಿಕೊಲ್ಲಬಲ್ಲೆ ಎಂದು ಗದರಿಸಿ ಕಳಿಸಿದ್ದಾರೆ ಎಂದಿದ್ದಾನೆ ಮಹಾಂತೇಶ್.

ಕೊಲೆಗೆ ಹಾಕಿದ್ದ ಮೊದಲ ಸ್ಕೆಚ್ ಆ ಬಾಲಕನಿಂದಾಗಿ ಮಿಸ್ !

ಸರಳ ವಾಸ್ತು ಚಂದ್ರಶೇಖರ ಗುರೂಜಿ ಅವರ ಹತ್ಯೆ ಮಾಡಿರುವ ಆರೋಪಿಗಳನ್ನು ಪೊಲೀಸರು ತೀವ್ರವಾಗಿ ವಿಚಾರಿಸುತ್ತಿದ್ದು, ಒಂದೊಂದೇ ಸ್ಫೋಟಕ ಮಾಹಿತಿಗಳು ಬಿಚ್ಚಿಕೊಳ್ಳುತ್ತಿವೆ. ಗುರೂಜಿ ಅವರನ್ನು ಬೆಂಗಳೂರಿನಲ್ಲಿಯೇ ಮುಗಿಸಲು ಆರೋಪಿ ಮಹಾಂತೇಶ್ ಟೀಂ ಫ್ಲ್ಯಾನ್ ಮಾಡಿಕೊಂಡಿದ್ದರು. ಇದೇ ತಿಂಗಳು 3ನೇ ತಾರೀಖಿನಂದು ಅವರ ಕೊಲೆಗೆ ಸ್ಕೆಚ್ ರೆಡಿಯಾಗಿತ್ತು. ಆದರೆ ಅಂದು ಗುರೂಜಿ ಅಂದು ತಪ್ಪಿಸಿಕೊಂಡಿದ್ದರು. ಕಾರಣ ಓರ್ವ ಪುಟ್ಟ ಹುಡುಗ ಅಡ್ಡ ಬಂದಿದ್ದ. ಆತ ಯಾರೂ ಅಲ್ಲ, ಗುರೂಜಿಯ ಮೊಮ್ಮಗ.

ಏಕೆಂದರೆ ಅವರ ಮೊಮ್ಮಗ ಅವತ್ತು ತೀರಿಕೊಂಡಿದ್ದ. ಮೊಮ್ಮದ ತೀರಿಕೊಂಡು, ತನ್ನ ತಾತನ ಪ್ರಾಣವನ್ನು ಅಂದು ರಕ್ಷಿಸಿದ್ದ. ಇದರಿಂದ ಸಾವಿನ ಮನೆಗೆ ಹೋಗಬೇಕಿರುವ ಹಿನ್ನೆಲೆಯಲ್ಲಿ ಗುರೂಜಿ ಕಾರ್ಯಕ್ರಮವನ್ನು ರದ್ದು ಮಾಡಿದ್ದರು. ನಂತರ ಮೊಮ್ಮಗನ ಅಂತ್ಯಸಂಸ್ಕಾರ ಮುಗಿಸಿದ ಬಳಿಕ ಹುಬ್ಬಳ್ಳಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಬೆಂಗಳೂರಿನಲ್ಲಿ ಆಗದ್ದನ್ನು ಹುಬ್ಬಳ್ಳಿಯಲ್ಲಿ ಮಾಡಿ ಮುಗಿಸುವ ಪ್ಲಾನ್ ಮಾಡಿದ್ದ ಆರೋಪಿಗಳು ಬೆಂಗಳೂರಿನಿಂದ ನೇರವಾಗಿ ಹುಬ್ಬಳ್ಳಿಗೆ ಬಂದು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಕೊಲೆಗೂ ಮುನ್ನ ಗುರೂಜಿಯನ್ನು ಎರಡು ಬಾರಿ ಭೇಟಿಯಾಗಿದ್ದ ಮಹಾಂತೇಶ್, ಜುಲೈ 3 ರಂದು ಗೋಕುಲ ರಸ್ತೆಯ ಗುರೂಜಿ ಅಪಾರ್ಟ್‌ಮೆಂಟ್ ನಲ್ಲಿ ಮೊದಲು ಭೇಟಿಯಾಗಿದ್ದ. ಹಾಗೆ ಗುರೂಜಿ ಕುಟುಂಬಸ್ಥರ ಸಮ್ಮುಖದಲ್ಲಿ ಭೇಟಿಯಾಗಿ ಸುಮಾರು 20 ನಿಮಿಷ ಮಾತುಕತೆ ನಡೆಸಿದ್ದ. ಆದರೆ ಯಾರಿಗೂ ಹತ್ಯೆಯ ಸುಳಿವು ಒಂದಿಷ್ಟೂ ಬಿಟ್ಟುಕೊಟ್ಟಿರಲಿಲ್ಲ ಆತ.

ನಂತರ ಕೊಲೆಯಾಗುವ ಒಂದು ದಿನ ಮುಂಚೆ ಅಂದರೆ, ಜುಲೈ 4 ರಂದು ಗುರೂಜಿ ಕೊಲೆಯಾದ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಲಾಂಜ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಾಗಿತ್ತು. ಕೊಲೆ ನಡುವೆ ಹಿಂದಿನ ದಿನದವರೆಗೆ ಮಹಾಂತೇಶ್ ಗುರೂಜಿಯ ಬಳಿ ದುಡ್ಡು ವಶೀಲಿ ಮಾಡಿಕೊಂಡು ಸೆಟಲ್ ಆಗುವ ಪ್ಲಾನ್ ನಲ್ಲಿದ್ದ. ತನಗೆ ಕೊಡುವುದಾಗಿ ಹೇಳಿದ್ದ 60 ಲಕ್ಷ ರೂಪಾಯಿ ಹಣ, ಹಾಗೂ ಫ್ಲ್ಯಾ ಟ್ ಕೊಡಿ ಎಂದು ಮಹಾಂತೇಶ್ ಕೇಳಿದ್ದ. ಆಗ, ‘ ಯಾವ ಹಣ ? ಕೊಡಲ್ಲ ಹೋಗೋ ‘ ಎಂದು ಏಕವಚನದಲ್ಲಿ ಗುರೂಜಿ ನಿಂದಿಸಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡು ತಾನು ಈ ಕೃತ್ಯ ಎಸಗಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ. ತನಿಖೆ ಪ್ರಗತಿಯಲ್ಲಿದ್ದು, ಈಗ ಹತ್ತಕ್ಕೂ ಅಧಿಕ ಜನರ ಬಂಧನ ಆಗಲಿದೆ. ಹೆಚ್ಚಿನವರು ಚಂದ್ರಶೇಖರ ಗುರೂಜಿಯ ಮಾಜಿ ಉದ್ಯೋಗಿಗಳು.

Leave A Reply

Your email address will not be published.