ವಿಧಾನ ಸಭಾ ಚುನಾವಣೆ : ಶಶಿಕಾಂತ್ ಸೆಂಥಿಲ್ ರಾಜ್ಯ ಕಾಂಗ್ರೆಸ್ ವಾರ್ ರೂಮ್ ಮುಖ್ಯಸ್ಥ

ಮುಂಬರುವ ವಿಧಾನ ಸಭಾ ಚುನಾವಣೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಾರ್ ರೂಮ್ ಮುಖ್ಯಸ್ಥರಾಗಿ ಶಶಿಕಾಂತ್ ಸೆಂಥಿಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಐಸಿಸಿ ನೇಮಿಸಿದೆ.


Ad Widget

ಸುನೀಲ್ ಕಾನುಗೌಳಿ ಅವರು ಒಟ್ಟು ಉಸ್ತುವಾರಿಯಾಗಿ ಮುಂದುವರಿಯಲಿದ್ದಾರೆ. ಕೆಪಿಸಿಸಿ ಉಸ್ತುವಾರಿ ಸೂರಜ್ ಹೆಗಡೆ ಹಾಗೂ ಪ್ರಧಾನ ಕಾರ್ಯದರ್ಶಿ ಮೆಹರೋಝ್ ಖಾನ್ ವಾರ್ ರೂಮ್ ನ ಪ್ರತಿದಿನದ ಚಟುವಟಿಕೆಗಳನ್ನು ನೋಡಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮುಂಬರುವ ಚುನಾವಣೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಾರ್ ರೂಂ ಅಧ್ಯಕ್ಷರಾಗಿ ಶಶಿಕಾಂತ್ ಸೆಂಥಿಲ್ ಅವರನ್ನು ನೇಮಕ ಮಾಡಲು ಎಐಸಿಸಿ ಅನುಮೋದನೆ ನೀಡಿದೆ. ಒಟ್ಟಾರೆ ಉಸ್ತುವಾರಿಯಾಗಿ ಸುನೀಲ್ ಕಾನುಗೌಳಿ ಉಳಿಯಲಿದ್ದು, ರಾಜ್ಯ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರಾಗಿ ಸೂರಜ್ ಹೆಗ್ಡೆ ಅವರನ್ನು ನೇಮಕ ಮಾಡಲಾಗಿದೆ.


Ad Widget

ಶಶಿಕಾಂತ್ ಕರ್ನಾಟಕ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ. ಸೆಪ್ಟೆಂಬರ್ 2019 ರವರೆಗೆ ಕರ್ನಾಟಕದಲ್ಲಿ ಡೆಪ್ಯುಟಿ ಕಮಿಷನರ್ ಆಗಿ ಕೆಲಸ ಮಾಡಿದ್ದಾರೆ.


Ad Widget
error: Content is protected !!
Scroll to Top
%d bloggers like this: