ಅಮರನಾಥ ಗುಹೆ ಬಳಿ ಮೇಘ ಸ್ಫೋಟ | 5 ಮಂದಿ ಸಾವು

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪ್ರಸಕ್ತ ಸಾಲಿನ ಮುಂಗಾರಿನ ವಿಕೋಪ ಬಿರುಸಾಗಿಯೇ
ಮುಂದುವರಿದಿದೆ. ಇದರ ಪರಿಣಾಮ ಅಮರನಾಥ್ ಗುಹೆ ಹಠಾತ್ ಮೇಘ ಸ್ಫೋಟ ಸಂಭವಿಸಿದೆ. ಈ ಸ್ಫೋಟಕ್ಕೆ ಬರೋಬ್ಬರಿ 12-13 ಸಾವಿರ ಜನ ಸಿಲುಕಿರೋ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಗುಹೆ ಬಳಿಯಿರೋ ಟೆಂಟ್‌ಗಳು ಕೂಡ ಕೊಚ್ಚಿ ಹೋಗಿವೆ.

ದಕ್ಷಿಣ ಕಾಶ್ಮೀರದ ಹಿಮಾಲಯ ಪರ್ವತ ಪ್ರದೇಶದಲ್ಲಿರೋ ಪವಿತ್ರ ಅಮರನಾಥ ಗುಹಾ ದೇವಾಲಯದ ಸಮೀಪ ಮೇಘ ಸ್ಫೋಟ ಉಂಟಾಗಿದೆ. ಈ ಘಟನೆಯಲ್ಲಿ ಇದುವರೆಗೂ ಎರಡು ಮೃತ ದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಐವರು ಮೃತಪಟ್ಟ ಶಂಕೆ ವ್ಯಕ್ತವಾಗಿದೆ.

ಮೇಘಸ್ಫೋಟವು ಸಂಜೆ 5:30 ರ ಸುಮಾರಿಗೆ ಸಂಭವಿಸಿದ್ದು, ಇದರ ಪರಿಣಾಮವಾಗಿ ಗುಹಾ ದೇಗುಲದ ಬಳಿ ಭಾರೀ ಪ್ರಮಾಣದ ನೀರು ಹೊರಸೂಸಲ್ಪಟ್ಟಿದೆ.
ಇನ್ನು, ಭಾರೀ ಮಳೆಯಿಂದ ಉಂಟಾದ ಮೇಘ ಸ್ಫೋಟದಿಂದ ಪರ್ವತದ ಮೇಲ್ಬಾಗದಿಂದ ಬಂಡೆಕಲ್ಲುಗಳು ಸಿಡಿದು ನೀರು ನುಗ್ಗಿದೆ.

Leave A Reply

Your email address will not be published.