ಉಡುಪಿ : ಮನೆ ಕೆಲಸಕ್ಕಿದ್ದ ಮಹಿಳೆ ನಾಪತ್ತೆ!

ಉಡುಪಿ : ನಗರದ ಬಡನಿಡಿಯೂರಿನ ಮನೆಯೊಂದರಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ನಡೆದಿದೆ.

ನಾಪತ್ತೆಯಾದವರು ಸುಶೀಲ (27) ಎಂದು ತಿಳಿದು ಬಂದಿದೆ.

ಸುಶೀಲರವರು ಜೂನ್ 30 ರಂದು ಮನೆಯಿಂದ ಹೊರಗೆ ಹೋಗಿ ನಾಪತ್ತೆಯಾಗಿದ್ದಾರೆ. ಇವರು 5 ಅಡಿ ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ಕಿವಿ ಕೇಳುವುದಿಲ್ಲ, ಮಾತನಾಡಲು ಬರುವುದಿಲ್ಲ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್ ಠಾಣೆ ದೂ. ಸಂಖ್ಯೆ 0820-2537999, ಪಿಎಸ್ಐ ಮೊಬೈಲ್ ನಂಬರ್ 9480805447, ಉಡುಪಿ ವೃತ್ತ ನೀರಿಕ್ಷಕರು ಮೊ. ನಂ.9480805430 ಅನ್ನು ಸಂಪರ್ಕಿಸಬಹುದಗಿದೆ ಎಂದು ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.