ಸುಮಾರು ಮೂರು ವರ್ಷಗಳ ತನ್ನ ಸಂಬಳವನ್ನು ಕಾಲೇಜಿಗೆ ಹಿಂದಿರುಗಿಸಿದ ಶಿಕ್ಷಕ, ಕಾರಣ?

ವಿದ್ಯಾರ್ಥಿಗಳ ಪಾಲಿಗೆ ದೇವರಾಗಿರುವವರೇ ಶಿಕ್ಷಕರು. ಆದರೆ ಅದೆಷ್ಟೋ ಶಿಕ್ಷಕರು ಕೇವಲ ಸಂಬಳಕ್ಕಾಗಿ ದುಡಿದು, ವಿದ್ಯಾರ್ಥಿಗಳಿಗೆ ಸರಿಯಾದ ಪಾಠಗಳನ್ನು ಹೇಳಿಕೊಡದೆ ವಂಚಿಸುತ್ತಾರೆ. ಇಂತಹ ಜನರ ನಡುವೆ ಇಲ್ಲೊಬ್ಬ ಶಿಕ್ಷಕ ವಿದ್ಯಾರ್ಥಿಗಳು ತನ್ನ ವಿಭಾಗಕ್ಕೆ ಸೇರ್ಪಡೆಗೊಳ್ಳಲಿಲ್ಲವೆಂದು ಸುಮಾರು ಮೂರು ವರ್ಷಗಳ ತನ್ನ ಸಂಬಳವನ್ನು ಕಾಲೇಜಿಗೆ ಹಿಂದಿರುಗಿಸಿದ ಘಟನೆ ನಡೆದಿದೆ.

ಹೌದು, ಬಿಹಾರದ ಕಾಲೇಜಿನ ಹಿಂದಿ ಶಿಕ್ಷಕರೊಬ್ಬರು 2009 ರಲ್ಲಿ ತಾವು ಕಾಲೇಜಿಗೆ ಸೇರಿದಾಗಿನಿಂದಲೂ 2022ರ ಮೇ ತಿಂಗಳವರೆಗೆ ತಮ್ಮ ವಿಭಾಗಕ್ಕೆ ಯಾವುದೇ ವಿದ್ಯಾರ್ಥಿ ಹಾಜರಾಗದ ಕಾರಣ ಒಟ್ಟು 33 ತಿಂಗಳ ಸಂಬಳವಾದ 23.82 ಲಕ್ಷ ರೂಪಾಯಿಗಳನ್ನು ನೈತಿಕ ನೆಲೆಗಟ್ಟಿನ ಮೇಲೆ ಕಾಲೇಜಿಗೆ ಮರಳಿಸಿದ್ದಾರೆ.

ಇವರ ಕ್ಲಾಸ್​ಗೆ 33 ತಿಂಗಳಲ್ಲಿ ಬೆರಳೆಣಿಕೆ ವಿದ್ಯಾರ್ಥಿಗಳು ಹಾಜರು ಆಗಿರುವುದಂತೆ, ಆನ್​ಲೈನ್​ ಕ್ಲಾಸ್​ ಇದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೇ ಬಾರದಿದ್ದಾಗ ವೇತನವನ್ನು ಸ್ವೀಕರಿಸಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಅದಕ್ಕಾಗಿಯೇ ಸಂಬಳವನ್ನು ವಾಪಸ್​ ನೀಡುತ್ತಿರುವುದಾಗಿ ಲಾಲನ್​ ಕುಮಾರ್​ ಹೇಳಿದ್ದಾರೆ. ಅವರಿಗೆ 23,82,228 ರೂ.ಗಳ ಚೆಕ್ ನೀಡಿದರು. ‘ಬೋಧನೆ ಮಾಡದೆ ಸಂಬಳ ತೆಗೆದುಕೊಳ್ಳಲು ನನ್ನ ಆತ್ಮಸಾಕ್ಷಿಯು ಒಪ್ಪತ್ತಿಲ್ಲ’ ಎಂದು ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಲಲನ್​ ಕುಮಾರ್ ಅವರಿಗೆ ಇದು ಮೊದಲ ಉದ್ಯೋಗವಾಗಿದೆ. ನಿತೀಶ್ವರ ಕಾಲೇಜಿನಲ್ಲಿ ಸುಮಾರು 3,000 ವಿದ್ಯಾರ್ಥಿಗಳಿದ್ದು, ಅವರಲ್ಲಿ ಸರಿಸುಮಾರು 1,100 ಪದವಿಪೂರ್ವ ವಿದ್ಯಾರ್ಥಿಗಳು ಹಿಂದಿಯನ್ನು ಕಲಿಯಬೇಕಾಗಿದೆ. ಈ ವಿಷಯಕ್ಕೆ ಅತಿಥಿ ಶಿಕ್ಷಕರನ್ನು ಬಿಟ್ಟರೆ, ಕುಮಾರ್ ಮಾತ್ರ ಕಾಲೇಜಿನಲ್ಲಿ ನಿಯಮಿತ ಹಿಂದಿ ಶಿಕ್ಷಕರಾಗಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಡಾ. ಲಲನ್ ಕುಮಾರ್ ಪ್ರಾಮಾಣಿಕತೆ ತೋರಿದ ಉಪನ್ಯಾಸಕರಾಗಿದ್ದು, ಇವರು ಬಳಿಕ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಎಂಫಿಲ್ ಮತ್ತು ಪಿಎಚ್ಡಿ ಕೂಡಾ ಮಾಡಿದ್ದಾರೆ. ತಮ್ಮ ಸಂಬಳವನ್ನು ಮರಳಿಸಿರುವ ಅವರು ಈಗ ತಮ್ಮನ್ನು ಬೇರೆ ಯಾವುದಾದರೂ ಒಂದು ಕಾಲೇಜಿಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದಾರೆ.

Leave A Reply

Your email address will not be published.