ಹತ್ತು ಸಾವಿರ ಮನೆಗಳ ವಿದ್ಯುತ್ ಸ್ಥಗಿತಗೊಳಿಸಿದ ಒಂದು ಸಣ್ಣ ಹಾವು!!

ಒಂದು ಸಣ್ಣ ಹಾವಿನಿಂದಾಗಿ ಸುಮಾರು 10,000 ಮನೆಯ ಜನರು ಕತ್ತಲಲ್ಲಿ ಕೂರುವಂತೆ ಆಗಿದೆ ಎಂದರೆ ನೀವು ನಂಬಬಹುದೇ?. ಆದರೆ, ಇದು ಸತ್ಯವಾಗಿದ್ದು ನೀವು ನಂಬಲೇಬೇಕಾಗಿದೆ. ಹೌದು. ಕೇವಲ ಸಣ್ಣ ಹಾವಿನಿಂದಾಗಿ 10 ಸಾವಿರ ಮನೆಗಳ ಕರೆಂಟ್ ಕಟ್ ಆಗಿದೆ. ಅಷ್ಟಕ್ಕೂ ಆ ಹಾವು ಮಾಡಿದ್ದೇನು ಎಂಬುದನ್ನು ಮುಂದೆ ಓದಿ..

ಜಪಾನ್‌ನ ಫುಕುಶಿಮಾ ಪ್ರಿಫೆಕ್ಚರ್‌ನಲ್ಲಿರುವ ಕೊರಿಯಾಮಾ ನಗರದ ನಿವಾಸಿಗಳು ವಿದ್ಯುತ್ ಸಮಸ್ಯೆ ಎದುರಿಸಿದರು. ವಿದ್ಯುತ್ ಕಡಿತದ ಸಮಸ್ಯೆಗೆ ಕಾರಣವೇನೆಂದು ಪವರ್ ಮ್ಯಾನ್ ಗಳು ಅದೆಷ್ಟೇ ಪತ್ತೆ ಹಚ್ಚಲು ಪ್ರಯತ್ನಿಸಿದರೂ ತಿಳಿಯಲೇ ಇಲ್ಲ. ಬಳಿಕ ತೊಹೊಕು ಎಲೆಕ್ಟ್ರಿಕ್ ಪವರ್ ಕಂಪನಿಯ ತನಿಖಾಧಿಕಾರಿಗಳು ವಿದ್ಯುತ್‌ ಸ್ಥಗಿತಕ್ಕೆ ಕಾರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಅಧಿಕಾರಿಗಳು ವಿದ್ಯುತ್‌ ಸ್ಟೇಷನ್‌ಗೆ ಭೇಟಿ ಕೊಟ್ಟಾಗ, ಇದರ ಹಿಂದಿರುವ ಕಾರಣ ಕೇವಲ ಒಂದು ‘ಹಾವು’ ಎಂದು ತಿಳಿದುಬಂದಿದೆ. ಯಾಕೆಂದರೆ ವಿದ್ಯುತ್‌ ಸ್ಟೇಷನ್‌ ನಲ್ಲಿ ಕೆಲವು ಯಂತ್ರೋಪಕರಣಗಳಲ್ಲಿ ಹಾವಿನ ಸುಟ್ಟ ಅವಶೇಷಗಳು ಪತ್ತೆಯಾಗದ್ದು, ವಿದ್ಯುತ್‌ ತಂತಿ ತಗುಲಿ ಹಾವು ಸುಟ್ಟುಹೋಗಿದೆ. ಪರಿಣಾಮವಾಗಿ ಸ್ಟೇಷನ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿದೆ. ಇದರಿಂದಾಗಿ ಸುಮಾರು 10 ಸಾವಿರ ಮನೆಗಳ ನಿವಾಸಿಗಳು ವಿದ್ಯುತ್‌ ಕಡಿತದಿಂದ ಸಮಸ್ಯೆ ಎದುರಿಸಬೇಕಾಯಿತು.

ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ಸತತ ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಜನರಿಗೆ ಕರೆಂಟ್ ಭಾಗ್ಯ ಲಭ್ಯವಾಗಿದೆ. ಹಾವಿನ ಕುರಿತಾದ ಸುದ್ದಿಯು ನಿವಾಸಿಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದ್ದು, ನಗರದ ವಿದ್ಯುತ್ ಸೌಲಭ್ಯಗಳನ್ನು ಹಾವು ಎಷ್ಟು ಸುಲಭವಾಗಿ ನಿಷ್ಕ್ರಿಯಗೊಳಿಸಿದೆ ಎಂಬುದೇ ಜನರಲ್ಲಿ ಅಚ್ಚರಿಯ ಪ್ರಶ್ನೆಯಾಗಿಯೇ ಉಳಿದಿದೆ.

Leave A Reply

Your email address will not be published.