ಕೊನೆಗೂ ತನ್ನ ಅಸಲಿ ಹೆಸರು ಬಿಚ್ಚಿಟ್ಟ ‘ ಹ್ಯಾಟ್ರಿಕ್ ಹೀರೋ’ ಶಿವರಾಜ್ ಕುಮಾರ್!!!

ನಟ ಶಿವರಾಜ್ ಕುಮಾರ್ ಕರ್ನಾಟಕದಲ್ಲಿ ಶಿವಣ್ಣ ಎಂದೇ ಫೇಮಸ್. ಹೋದಲ್ಲಿ, ಬಂದಲ್ಲಿ ಎಲ್ಲರೂ ಪ್ರೀತಿಯಿಂದ ಇವರನ್ನು ‘ಶಿವಣ್ಣ’ ಎಂದೇ ಕರೆಯುತ್ತಾರೆ. ಆದರೆ ಶಿವರಾಜ್ ಕುಮಾರ್ ಎಂಬುದು ಅಸಲಿ ಹೆಸರು ಅಲ್ಲ. ಶಿವರಾಜ್ ಕುಮಾರ್ ಅವರ ಪಾಸ್ ಪೋರ್ಟ್ ಸೇರಿ ಎಲ್ಲಾ ದಾಖಲೆಗಳಲ್ಲಿ ಅವರ ಅಸಲಿ ಹೆಸರು ಬೇರೆಯೇ ಇದೆ.

ಹಾಗಾದರೆ ಈ ಹೆಸರನ್ನು ಅವರು ಇಟ್ಟುಕೊಂಡಿದ್ದು ಯಾಕೆ ಅವರ ಮೂಲ ಹೆಸರು ಏನು? ಎಂಬ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ. ಮೈಸೂರಿನ ಆಂದೋಲನ ಪತ್ರಿಕೆ 40 ವರ್ಷ ಪೂರೈಸಿದ ನಿಟ್ಟಿನಲ್ಲಿ, ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಕೋತ್ಸವ ಭವನದಲ್ಲಿ ಈ ಪತ್ರಿಕೆಯ ಸುವರ್ಣ ಮಹೋತ್ಸವ ನಡೆದಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಆಗಮಿಸಿದ್ದರು. ಜೊತೆಗೆ ಶಿವರಾಜ್ ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಈ ವೇಳೆ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದಾಗ, ತಮ್ಮ ಅಸಲಿ ಹೆಸರು ಏನು ಎಂಬುದು ಹೇಳಿಕೊಂಡಿದ್ದಾರೆ. ‘ನನ್ನ ಮೂಲ ಹೆಸರು ನಾಗರಾಜ ಶಿವ ಪುಟ್ಟ ಸ್ವಾಮಿ ಎಂದು. ನನ್ನ ಪಾಸ್ ಪೋರ್ಟ್ ಮೊದಲಾದ ದಾಖಲೆಗಳಲ್ಲಿ ನನ್ನ ಹೆಸರು ಹೀಗೆ ಇದೆ. ನಾನು ಓದಿದ್ದು ಬೆಳೆದಿದ್ದು ಚೆನೈನಲ್ಲಿ. ಅಲ್ಲಿ ಗೆಳೆಯರು ಎಲ್ಲರೂ ಪುಟ್ಟು ಅಂತ ಕರೆಯುತ್ತಾರೆ. ಇಲ್ಲಿ ಸಿನಿಮಾಗೆ ಎಂಟ್ರಿ ಆಗಬೇಕಾದರೆ ಅಪ್ಪಾಜಿ ಅವರ ಫ್ರೆಂಡ್ ರಾಮಸ್ವಾಮಿ ಭೇಟಿ ಆದ್ರು. ರಾಜಕುಮಾರ್ ಫ್ಯಾಮಿಲಿಯವರು ನೀವು, ಈಗಾಗಿ ನಾನು ಶಿವರಾಜ್ ಕುಮಾರ್ ಆದೆ’ ಎಂದಿದ್ದಾರೆ ಶಿವಣ್ಣ.

ಶಿವರಾಜ್ ಕುಮಾರ್ ರ ಬೈರಾಗಿ ಸಿನಿಮಾ, ಕಳೆದವಾರ ತೆರೆಗೆ ಬಂದಿದ್ದು, ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಟಗರು ಬಳಿಕ ಧನಂಜಯ ಮತ್ತು ಶಿವರಾಜ್ ಕುಮಾರ್ ಮತ್ತೆ ಈ ಸಿನಿಮಾದಲ್ಲಿ ಒಂದಾಗಿದ್ದಾರೆ. ತಮಿಳು ನಿರ್ದೇಶಕ ವಿಜಯ್ ಮಿಲ್ವಾನ್ ಈ ಚಿತ್ರಕ್ಕೆ ಆಕ್ಷನ್ ಕಟ್ ನೀಡಿದ್ದಾರೆ. ಈ ಚಿತ್ರದ ಟಿವಿ ಹಕ್ಕು 10 ಕೋಟಿ ರೂಪಾಯಿಗೆ ಮಾರಾಟವಾದ ಬಗ್ಗೆ ನಿರ್ಮಾಪಕರು ಸಿನಿಮಾ ರಿಲೀಸ್ ಆಗುವ ಸಂದರ್ಭದಲ್ಲಿ ಹೇಳಿದ್ದಾರೆ.

Leave A Reply

Your email address will not be published.