ಜಿಯೋ ಗ್ರಾಹಕರಿಗೆ ದೊರೆಯಲಿದೆ ಉಚಿತ ನೆಟ್ ಫ್ಲಿಕ್ಸ್ ಚಂದಾದಾರಿಕೆ!!

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಉತ್ತಮವಾದ ನೆಟ್ವರ್ಕ್ ನೊಂದಿಗೆ ಅಗ್ಗದ ರಿಚಾರ್ಜ್ ಪ್ಲಾನ್ ಕೂಡ ಜಾರಿಗೊಳಿಸುತ್ತಿದ್ದು, ಇದೀಗ ಜಿಯೋ ಉಚಿತ ನೆಟ್ ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡಿದೆ.

ಜಿಯೋ ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ+ಹಾಟ್‌ಸ್ಟಾರ್ ಪ್ಯಾಕೇಜ್‌ಗಳೊಂದಿಗೆ ಡೇಟಾವನ್ನು ನೀಡುವ ಅಗ್ಗದ ಯೋಜನೆಗಳಿವೆ. ಪ್ರಿಪೇಯ್ಡ್ ಯೋಜನೆಗಳಿಗೆ ಹೋಲಿಸಿಕೊಂಡರೆ ಪೋಸ್ಟ್‌ಪೇಯ್ಡ್ ಚಂದಾದಾರರಿಗೆ ಅತ್ಯುತ್ತಮ ಕೊಡುಗೆಗಳನ್ನು ಜಿಯೋ ಒದಗಿಸುತ್ತಿದೆ. ಈ ಪ್ರಯೋಜನಗಳು ಹೆಚ್ಚಿನ ವೇಗದ ಡೇಟಾ ಮತ್ತು ವಿವಿಧ ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಒಳಗೊಂಡಿದ್ದು, ಈ ಜನಪ್ರಿಯ ಜಿಯೋ ಪೋಸ್ಟ್‌ಪೇಯ್ಡ್ ಯೋಜನೆಗಳ ಪಟ್ಟಿ ಇಲ್ಲಿದೆ.

ಜಿಯೋ ಪೋಸ್ಟ್ ಪೇಯ್ಡ್ ಪ್ಲಾನ್​ನಲ್ಲಿ 399 ರೂಪಾಯಿ: ಇದು ಅಗ್ಗದ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ಎಲ್ಲಾ ಮೂರು ನೆಟ್​​ಫ್ಲಿಕ್ಸ್, ಅಮೆಜಾನ್ ಪ್ರೈಂ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಉಚಿತವಾಗಿ ಸಿಗುತ್ತದೆ. ಈ ಯೋಜನೆಯು 75GB ಡೇಟಾದೊಂದಿಗೆ 200GB ಗರಿಷ್ಠ ಡೇಟಾ ರೋಲ್ಓವರ್ ನೀಡುತ್ತದೆ. 75GB ಡೇಟಾ ಮಿತಿ ದಾಟಿದ ನಂತರ, ಬಳಕೆದಾರರು 10 ರೂಪಾಯಿ GB ದರದಲ್ಲಿ ಡೇಟಾವನ್ನು ಖರೀದಿಸಬೇಕಾಗುತ್ತದೆ. ಅಲ್ಲದೆ ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್ ನೀಡುತ್ತದೆ.

599 ರೂ. ಪೋಸ್ಟ್ ಪೇಯ್ಡ್ ಯೋಜನೆ :
ಈ ಯೋಜನೆ ಬಿಲ್ಲಿಂಗ್ ಸೈಕಲ್‌ನಲ್ಲಿ ಗರಿಷ್ಠ 100GB ಡೇಟಾವನ್ನು ಮತ್ತು 200GB ಯ ಗರಿಷ್ಠ ಡೇಟಾ ರೋಲ್‌ಓವರ್ ಅನ್ನು ನೀಡುತ್ತದೆ. ನೀಡಿರುವ ಮಿತಿಯು ಮುಗಿದ ನಂತರ ಬಳಕೆದಾರರಿಗೆ ಪ್ರತಿ GB ಗೆ 10 ರೂ. ಶುಲ್ಕ ವಿಧಿಸಲಾಗುತ್ತದೆ. ಇದಲ್ಲದೆ, JioPostpaid ಸಂಪರ್ಕವನ್ನು ಬಳಸಿಕೊಂಡು ಹೆಚ್ಚುವರಿ ಕುಟುಂಬದ ಸದಸ್ಯರೊಂದಿಗೆ (ಒಬ್ಬರು) ಯೋಜನೆಯನ್ನು ಹಂಚಿಕೊಳ್ಳಬಹುದು. ಈ ಯೋಜನೆ ಕೂಡ ನೆಟ್​​ಫ್ಲಿಕ್ಸ್, ಅಮೆಜಾನ್ ಪ್ರೈಂ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಎಲ್ಲಾ ಮೂರು ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ.

799 ರೂ. ಯೋಜನೆ:
ಪ್ರತಿ ಬಿಲ್ಲಿಂಗ್ ಸೈಕಲ್‌ಗೆ ಗರಿಷ್ಠ 150GB ಡೇಟಾವನ್ನು ಒದಗಿಸುತ್ತದೆ ಮತ್ತು 200GB ಡೇಟಾ ರೋಲ್‌ಓವರ್ ಅನ್ನು ಸಹ ಒದಗಿಸುತ್ತದೆ. ಯೋಜನೆಯ ಪ್ರಯೋಜನಗಳನ್ನು ಕುಟುಂಬ ಯೋಜನೆಯ ಅಡಿಯಲ್ಲಿ 2 ಹೆಚ್ಚುವರಿ ಪೋಸ್ಟ್‌ಪೇಯ್ಡ್ ಸಂಪರ್ಕಗಳೊಂದಿಗೆ ಹಂಚಿಕೊಳ್ಳಬಹುದು. ಈ ಯೋಜನೆ ಕೂಡ ನೆಟ್​​ಫ್ಲಿಕ್ಸ್, ಅಮೆಜಾನ್ ಪ್ರೈಂ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಎಲ್ಲಾ ಮೂರು ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ.

999 ರೂ. ಯೋಜನೆ:
ಪ್ರತಿ ಬಿಲ್ಲಿಂಗ್ ಸೈಕಲ್‌ಗೆ ಗರಿಷ್ಠ 200GB ನೀಡುತ್ತದೆ ಮತ್ತು ಕುಟುಂಬ ಯೋಜನೆಯಡಿಯಲ್ಲಿ 3 ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ನೀಡುತ್ತದೆ. ಗರಿಷ್ಠ ಡೇಟಾ ರೋಲ್‌ಓವರ್ 500GB ಆಗಿದೆ. ಈ ಯೋಜನೆ ಕೂಡ ನೆಟ್​​ಫ್ಲಿಕ್ಸ್, ಅಮೆಜಾನ್ ಪ್ರೈಂ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಎಲ್ಲಾ ಮೂರು ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ನೀಡುತ್ತದೆ.

Leave A Reply