ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ : ರೈತರಿಗೊಂದು ಮಹತ್ವದ ಮಾಹಿತಿ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಅಧಿಸೂಚಿತ ಬೆಳೆಗಳಿಗೆ ನೋಂದಣಿ ಮಾಡಿಸಲು ಸರಕಾರ ಅಧಿಸೂಚನೆ ಹೊರಡಿಸಿದ್ದು, ರೈತರು ತಾವು ಬೆಳೆದ ಬೆಳೆಗಳಿಗೆ ವಿಮೆಗೆ ಒಳಪಡಿಸುವಂತೆ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ ತಿಳಿಸಿದ್ದಾರೆ.

ಹೆಸರು, ಉದ್ದು (ಮ.ಆ), ಜೋಳ, ಸೋಯಾ ಅವರೆ (ನೀ) ಬೆಳೆಗಳಿಗೆ ವಿಮಾ ಕಂತು ಪಾವತಿಗೆ ಜುಲೈ 15 ಕೊನೆಯ ದಿನವಾದರೆ, ಕೆಂಪು ಮೆಣಸಿನಕಾಯಿ (ನೀ), ತೊಗರಿ (ನೀ, ಮ.ಆ), ಸೂರ್ಯಕ್ರಾಂತಿ (ಮ.ಆ), ಸಜ್ಜೆ (ಮ.ಆ, ನೀ), ಎಳ್ಳು (ಮ.ಆ), ನೆಲಗಡಲೆ (ನೀ, ಮ.ಆ), ಜೋಳ (ಮ.ಆ), ಹುರುಳಿ (ಮ.ಆ), ಅರಿಶಿಣ, ಮುಸುಕಿನ ಜೋಳ (ಮ.ಆ, ನೀ) ಬೆಳೆಗಳಿಗೆ ಜುಲೈ 31 ಹಾಗೂ ಕೆಂಪು ಮೆಣಸಿನಕಾಯಿ (ಮ.ಆ), ಸೂರ್ಯಕಾಂತಿ (ನೀ), ಈರುಳ್ಳಿ (ಮ.ಆ, ನೀ) ಬೆಳೆಗಳಿಗೆ ಆಗಸ್ಟ 16 ಕೊನೆಯ ದಿನವಾಗಿದೆ.

ಬೆಳೆ ಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಬೆಳೆಸಾಲ ಪಡೆಯದ ರೈತರಿಗೆ ಇದು ಐಚ್ಛಿಕವಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಬಜಾಜ್ ಅಲಿಯಾಂಜ ಜಿ.ಐಸಿ ವಿಮಾ ಕಂಪನಿ ಆಯ್ಕೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಮಾ ಸಂಸ್ಥೆಯ ಪ್ರತಿನಿಧಿಗಳಾದ ಬಾದಾಮಿಗೆ ಸಂತೋಷ ಕಮತಗಿ (8151074930), ಬಾಗಲಕೋಟೆ ಬಸವರಾಜ ದೂಪದ (9036620814), ಗುಳೇದಗುಡ್ಡಕ್ಕೆ ಮಲ್ಲಿಕಾರ್ಜುನ ಬ್ಯಾಳಿ (9009134063), ಬೀಳಗಿಗೆ ಅನೀಲ ರವಿಕಿರಣ (6360923667), ಹುನಗುಂದಕ್ಕೆ ನಿರಂಜನ ಕೋಟೂರ (8618685017), ಜಮಖಂಡಿಗೆ ರಾಜಶೇಖರ ಗಾಣಗೇರ (7829316745), ಮುಧೋಳಕ್ಕೆ ಮಹೇಶ ಮಣ್ಣನ್ನವರ (7846060071), ಇಲಕಲ್ಲಗೆ ಮಹಾಂತೇಶ ತೆಗ್ಗಿನಮಠ (9901259435), ರಬಕವಿ-ಬನಹಟ್ಟಿಗೆ ಮಹಾಂತೇಶ ನಾಗಠಾಣ (8971544829ಈ ಇವರನ್ನು ಸಂಪರ್ಕಿಸಬಹುದಾಗಿದೆ.

Leave A Reply

Your email address will not be published.