ಮಾಣಿ:ಗ್ಯಾಸ್ ಟ್ಯಾಂಕರ್ ಹಾಗೂ ತೂಫಾನ್ ವಾಹನ ನಡುವೆ ಅಪಘಾತ!! ಚಾಲಕನ ಸ್ಥಿತಿ ಗಂಭೀರ
ಮಾಣಿ: ಗ್ಯಾಸ್ ಟ್ಯಾಂಕರ್ ಹಾಗೂ ತೂಫಾನ್ ವಾಹನದ ನಡುವೆ ಅಪಘಾತ ಸಂಭವಿಸಿ, ತೂಫಾನ್ ವಾಹನದ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟೀಯ ಹೆದ್ದಾರಿಯ ಮಾಣಿ ಸಮೀಪ ನಡೆದಿದೆ.
ಸ್ಥಳೀಯ ಸಂಸ್ಥೆಯೊಂದಕ್ಕೆ ಸೇರಿದ ವಾಹನ ಇದಾಗಿದ್ದು, ಅಲ್ಲಿನ ಕಾರ್ಮಿಕರನ್ನು ಬಿಟ್ಟು ವಾಪಸ್ಸು ಬರುತ್ತಿರುವ ಸಂದರ್ಭ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಘಟನೆಯಲ್ಲಿ ತೂಫಾನ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಯಗೊಂಡಿದ್ದ ಚಾಲಕ ಸುರೇಂದ್ರ ಎಂಬವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ರಾಷ್ಟೀಯ ಹೆದ್ದಾರಿಯ ಚತುಷ್ಪತ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮಳೆಯ ಕಾರಣದಿಂದ ಕಾಮಗಾರಿಗೆ ಅಡ್ಡಿಯಾಗಿದೆ. ಈ ನಡುವೆ ರಸ್ತೆ ಅಗೆದಲ್ಲೆಲ್ಲಾ ಕೆಸರುಮಯವಾಗಿದ್ದು ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿದೆ. ಪ್ರತೀ ದಿನವೂ ಈ ರಸ್ತೆಯಲ್ಲಿ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಲೇ ಇದ್ದು, ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಪ್ರಯಾಣಿಕರು ಜಾಗರೂಕತೆಯಿಂದ ಪ್ರಯಾಣಿಸಬೇಕಾಗಿದೆ.