ಕಾಳಿ ಆಯ್ತು, ಈಗ ಶಿವ ಪಾರ್ವತಿಯವರ ವಿವಾದಾತ್ಮಕ ಫೋಟೋ ಹಂಚಿಕೊಂಡ ಲೀನಾ

ಇತ್ತೀಚೆಗೆ ಕಳೆದ ಕೆಲವು ದಿನಗಳಿಂದ ಫಿಲ್ಮ್ ಮೇಕರ್ ಲೀನಾ ಮಣಿಮೇಕಲೈ ಭಾರೀ ವಿವಾದ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಹೀಗಾಗಿ ಇವರನ್ನು ವಿವಾದದ ಕೇಂದ್ರಬಿಂದು ಎಂದು ತಪ್ಪಾಗಲಾರದು. ಇವರಿಗೆ ದೇವರನ್ನು ನಂಬುವುದಿಲ್ಲ ಅಥವಾ ಅವರು ಇರುವ ರೀತಿನೇ ಹೀಗೆ ಎಂಬ ಸ್ಪಷ್ಟತೆ ಈಗ ಎಲ್ಲರಿಗೂ ಆಗಿದೆ.

ಈ ಹಿಂದೆ ತಮ್ಮ ‘ಕಾಳಿ’ ಸಾಕ್ಷ್ಯಚಿತ್ರದ ಪೋಸ್ಟರ್ ಹಂಚಿಕೊಂಡು ವಿವಾದ ಸೃಷ್ಟಿಸಿದ್ದ ಲೀನಾ ಮಣಿಮೇಕಲೈ ಇದೀಗ ಮತ್ತೊಂದು ಫೋಟೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಶಿವ ಹಾಗೂ ಪಾರ್ವತಿ ದೇವಿಯ ವೇಷಧಾರಿಗಳು ಧೂಮಪಾನ ಮಾಡುತ್ತಿರುವುದು ಸೆರೆಯಾಗಿದೆ. ಇದನ್ನ ಕಂಡ ನೆಟ್ಟಿಗರು ಕೋಪಗೊಂಡಿದ್ದಾರೆ.

ಲೀನಾ ಮಣಿಮೇಕಲೈ ಅವರ ಟ್ವೀಟ್ ಹೀಗಿದೆ :
ಶಿವ ಹಾಗೂ ಪಾರ್ವತಿ ದೇವಿಯ ವೇಷಧಾರಿಗಳು
ಧೂಮಪಾನ ಮಾಡುತ್ತಿರುವ ಫೋಟೋವನ್ನು ಮಣಿಮೇಕಲೈ ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ. ಇದಕ್ಕೆ “ಬೇರೆ ಕಡೆ’ ಎಂದು ಲೀನಾ ಮಣಿಮೇಕಲೈ ಕ್ಯಾಪ್ಶನ್ ಕೊಟ್ಟಿದ್ದಾರೆ.

ಇದೊಂದು ಪಬ್ಲಿಸಿಟಿಗಾಗಿ ಮಾಡುತ್ತಿರುವ ತಂತ್ರ. ಅದು ಬಿಟ್ಟರೆ ಬೇರೆ ಯಾವ ಕಾರಣ ಕೂಡಾ ಇಲ್ಲ , ನಟನೆ ಮಾಡಲು ಎಂಥವರನ್ನು ಬೇಕಾದರೂ ಕರೆ ತರಬಹುದು. ಆದರೆ ನಿಮ್ಮ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಜನರ ಧಾರ್ಮಿಕ ಭಾವನೆಗಳಿಗೆ ಯಾಕೆ ಧಕ್ಕೆ ತರುತ್ತಿದ್ದೀರಾ?, ಇದು ಸ್ವಲ್ಪವೂ ಸರಿಯಿಲ್ಲ. ಇದಕ್ಕೆ ಜನ ನಿಮಗೆ ಸಪೋರ್ಟ್ ಮಾಡುತ್ತಾರೆ ಎಂದುಕೊಂಡಿದ್ದೀರಾ?, ಈ ಫೋಟೋ ಹಾಕಿರುವುದರ ಹಿಂದಿನ ಲಾಜಿಕ್ ಎಂಬುದಾಗಿ ವಿಧ ವಿಧದಲ್ಲಿ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲದೇ ಅವರನ್ನು ತರಾಟೆಗೆ ಕೂಡಾ ತಗೊಂಡಿದ್ದಾರೆ.

ಲೀನಾ ಮಣಿಮೇಕಲೈ ಹೇಳಿದ್ದೇನು?
ಶಿವ ಹಾಗೂ ಪಾರ್ವತಿ ದೇವಿಯ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೋದ ಬಗ್ಗೆ ಲೀನಾ ಮಣಿಮೇಕಲೈ, ‘ಜನಪದ ರಂಗಭೂಮಿಯ ಕಲಾವಿದರು ತಮ್ಮ ಪ್ರದರ್ಶನದ ನಂತರ ಹೇಗಿರುತ್ತಾರೆ ಎಂಬುದರ ಬಗ್ಗೆ ಬಿಜೆಪಿಯ ಪೇರೋಲ್ಡ್ ಟ್ರೋಲ್ಡ್ ಆರ್ಮಿಗೆ ಗೊತ್ತಿಲ್ಲ. ಈ ಫೋಟೋ ನನ್ನ ಚಲನಚಿತ್ರದ್ದಲ್ಲ. ಇದು ಗ್ರಾಮೀಣ ಭಾರತದಲ್ಲಿ ಕಂಡುಬರುವ ದೈನಂದಿನ ದೃಶ್ಯ. ಈ ಸಂಘ ಪರಿವಾರಗಳು ತಮ್ಮ ನಿರಂತರ ದ್ವೇಷ ಮತ್ತು ಧಾರ್ಮಿಕ ಮತಾಂಧತೆಯಿಂದ ಎಲ್ಲವನ್ನೂ ನಾಶ ಮಾಡಲು ಬಯಸುತ್ತಿದೆ. ಹಿಂದುತ್ವ ಎಂದಿಗೂ ಭಾರತವಾಗಲಾರದು” ಎಂಬುದಾಗಿ ಟ್ವೀಟ್ ಮಾಡಿದ್ದಾರೆ.

ಕಾಳಿ ದೇವಿಯ ಪೋಸ್ಟರ್ ಆಕ್ಷೇಪಾರ್ಹ ರೀತಿಯಲ್ಲಿ ಹಾಕಿದ್ದರಿಂದ ಹಲವರು ವಿರೋಧ ಮಾಡಿದ್ದರಿಂದ ಪೋಸ್ಟರ್ ತಡೆ ಹಿಡಿಯುವಂತೆ ಟ್ವಿಟರ್ ಸಂಸ್ಥೆಗೆ ಸರ್ಕಾರದಿಂದ ಸೂಚನೆ ನೀಡಿತ್ತು. ಈಗ ಅದನ್ನು ಟ್ವಿಟರ್ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಿಂದ ತೆಗೆದಿದೆ. ಅದರ ಪರಿಣಾಮವಾಗಿ ಜುಲೈ 5ರಿಂದ ಭಾರತದಲ್ಲಿರುವ ಟ್ವಿಟರ್ ಬಳಕೆದಾರರಿಗೆ ಆ ಪೋಸ್ಟರ್ ಕಾಣಿಸುತ್ತಿಲ್ಲ. ಅದು ತಣ್ಣಗಾಗಿಲ್ಲ ಈಗ ಅದರ ಬೆನ್ನಲ್ಲೇ ಲೀನಾ ಅವರು ಶಿವ-ಪಾರ್ವತಿ ವೇಷಧಾರಿಗಳ ಈ ಫೋಟೋ ಹಂಚಿಕೊಂಡು ಮತ್ತೆ ಸುದ್ದಿ ಆಗುತ್ತಿದ್ದಾರೆ.

ಲೀನಾ ಮಣಿಮೇಕಲೈ ಅವರು ಕೆನಡಾದಲ್ಲಿ ವಾಸವಾಗಿದ್ದಾರೆ. ಆದರೆ ಅವರು ಮೂಲತಃ ಭಾರತದವರು. ತಮಿಳುನಾಡಿನವರಾದ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅದರ ಮೂಲಕ ಹಲವು ಪ್ರಯೋಗಗಳನ್ನು ಅವರು ಮಾಡಿದ್ದಾರೆ. ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿ ಅವರು ಗುರುತಿಸಿಕೊಂಡಿದ್ದಾರೆ. ಹಲವಾರು ಚಿತ್ರೋತ್ಸವಗಳಲ್ಲಿ ಅವರ ಡಾಕ್ಯುಮೆಂಟರಿಗಳು ಪ್ರದರ್ಶನ ಆಗಿದ್ದೂ ಅಲ್ಲದೇ ಒಂದಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿವೆ.

Leave A Reply

Your email address will not be published.