ಮಂಗಳೂರು: ಕಳೆದ ಏಳು ವರ್ಷಗಳಲ್ಲಿ ಕುವೈತ್ ನಲ್ಲಿ 342 ಮಂದಿ ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುವೈತ್ ಸರ್ಕಾರ ಅಂಕಿ ಅಂಶ ಬಿಡುಗಡೆ ಮಾಡಿದೆ.
ಕುವೈತ್ ನ ಆಂತರಿಕ ಸಚಿವಲಾಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 2015 ರಿಂದ 2021 ರ ನವೆಂಬರ್ 18 ವರೆಗೆ ಕಳೆದ ಏಳು ವರ್ಷಗಳಲ್ಲಿ ಸ್ಥಳೀಯರು ಮತ್ತು ವಿದೇಶಿಯರು ಸೇರಿದಂತೆ 620 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 342 ಮಂದಿ ಅಂದರೆ, ಶೇಕಡಾ 55% ಮಂದಿ ಭಾರತೀಯರು ಕಳೆದ ಆರು ವರ್ಷದಲ್ಲಿ ದೇಶದಲ್ಲಿ 132 ಕೊಲೆಗಳು ನಡೆದಿವೆ. ಈ ಅವಧಿಯಲ್ಲಿ 54 ಸ್ಥಳೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಇತರೆ ದೇಶಗಳ ಸಂಖ್ಯೆ ಈ ಕೆಳಗಿನಂತಿವೆ:
ಬಾಂಗ್ಲಾದೇಶ. 53
ನೇಪಾಳ 45
ಶ್ರೀಲಂಕಾ 25
ಪಿಲಿಪ್ಪಿನ್ಸ್ 24
ಈಜಿಫ್ಟ್ 19
ಪೌರತ್ವ ರಹಿತ 11
ಇಥಿಯೋಪಿಯ 7
ರಾಷ್ಟ್ರೀಯತೆ ಗುರುತಿಸದ 40 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಸತ್ ಸದಸ್ಯ ಅಬ್ದುಲ್ ಆಜೀಜ್ ಅಲ್ ಸಖಬಿ ಅವರ ಪ್ರಶ್ನೆಗೆ ಸಚಿವಲಾಯ ಉತ್ತರಿಸಿದೆ.