ನಮ್ಮನ್ನಾಳಿದ್ದ ಬ್ರಿಟಿಷರನ್ನು ಭಾರತೀಯ ಆಳುವ ಸಮಯ ಸನ್ನಿಹಿತ | ಬ್ರಿಟನ್ ಪ್ರಧಾನಿ ಹುದ್ದೆಗೆ ರಿಷಿ ಸುನಕ್ ಹೆಸರು ಮುಂಚೂಣಿಯಲ್ಲಿ !

ಒಂದು ಕಾಲದಲ್ಲಿ, ಹಲವು ಶತಮಾನಗಳ ಕಾಲ ನಮ್ಮನ್ನಾಳಿದ ಬ್ರಿಟಿಷರನ್ನು ಈಗ ನಾವು ಆಳುವ ಕಾಲವೊಂದು ಬಂದಿದೆ. ಹೌದು, ಇಂತಹ ಒಂದು ಸುವರ್ಣವಕಾಶ ಭಾರತೀಯರಿಗೆ ಒಲಿಯುವ ಸಾಧ್ಯತೆ ಹೆಚ್ಚಿದೆ. ಸೂರ್ಯ ಮುಳುಗದ ನಾಡೆಂಬ ಕೀರ್ತಿ ಹೊಂದಿದ್ದ ಗ್ರೇಟ್ ಬ್ರಿಟನ್ ಅನ್ನು ವಶಪಡಿಸಿಕೊಳ್ಳಲು ಭಾರತೀಯ ಸಂಜಾತ ರೆಡಿ ಆದಂತಿದೆ.

ಬ್ರಿಟನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ಬೋರಿಸ್ ಜಾನ್ಸನ್ ಒಪ್ಪಿಗೆ ಸೂಚಿಸಿದ್ದಾರೆ. ಇಲ್ಲಿ ತೆರವಾಗುವ ಸ್ಥಾನಕ್ಕೆ ಒಂದು ದಿನದ ಹಿಂದಷ್ಟೇ ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಆಯ್ಕೆಯಾಗುವ ಸಾಧ್ಯತೆ ಇದೆ.

ಬೋರಿಸ್ ಜಾನ್ಸನ್‌ರ ಆಡಳಿತ ವೈಖರಿ ವಿರುದ್ಧ ಅಸಮಾಧಾನ ಹೆಚ್ಚಿದ್ದು, ಕಳೆದ ಎರಡು ದಿನಗಳಿಂದ 40ಕ್ಕೂ ಹೆ ಸಚಿವರು ಮತ್ತು ಸಹಾಯಕರು ರಾಜೀನಾಮೆ
ನೀಡಿದ್ದಾರೆ. ಹಾಗಾಗಿ ಬೋರಿಸ್ ಜಾನ್ಸನ್ ಭಾರೀ ಹಿನ್ನಡೆಯಾಗಿದ್ದು, ಪ್ರಧಾನಿ ಹುದ್ದೆ ತೊರೆಯುವುದು ಬೋರಿಸ್ ಜಾನ್ಸನ್‌ಗೆ ಅನಿವಾರ್ಯವಾಗಿದೆ. ಈ ಕಾರಣದಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲು ಒಪ್ಪಿದ್ದಾರೆ. ರಾಜೀನಾಮೆ ನೀಡಿರುವ ಬೆನ್ನಲ್ಲೇ ಮುಂದಿನ ಬ್ರಿಟನ್ ಪ್ರಧಾನಿ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿದ್ದು, ಭಾರತೀಯ ಮೂಲದ ರಿಷಿ ಸುನಕ್ ಹೆಸರು ಎಲ್ಲಾ ಕಡೆ ಕೇಳಿ ಬರುತ್ತಿದೆ.

ರಿಷಿ ಸುನಾಕ್ 2020 ರಲ್ಲಿ ಆರ್ಥಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಕೋವಿಡ್ ಸಂದರ್ಭದಲ್ಲಿಯೂ ಬಜೆಟ್ ಮಂಡನೆ ಮಾಡಿದ್ದು ಭಾರಿ ಶ್ಲಾಘನೆಗೆ ಪಾತ್ರವಾದ ವಿಷಯವಾಗಿತ್ತು. ಆದರೆ, ಕೋವಿಡ್ ಸಂಕಷ್ಟ ಕಾಲ ನಿರ್ವಹಣೆಯಲ್ಲೂ ವಿಫಲವಾಗಿದ್ದ ಬೋರಿಸ್, ಸಂಬ ಸಾಕಾಗುತ್ತಿಲ್ಲ ಎಂದೇಳಿ ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದರು. ಯುವ ನಾಯಕ ರಿಷಿ ಸುನಕ್ ಅವರಿಗೆ ಕನ್ಸರ್ವೇಟಿವ್ ಪಕ್ಷದ ಒಳ್ಳೆಯ ಬೆಂಬಲವಿದೆ. ಸಾರ್ವಜನಿಕರ ವಲಯದಲ ಜನಮನ್ನಣೆ ಗಳಿಸಿದ್ದಾರೆ. ಹಾಗಾಗಿ ಬ್ರಿಟನ್‌ನ ಮುಂದಿನ ಪ್ರಧಾನಿ ಸ್ಥಾನ ರಿಷಿ ಸುನಾಕ್‌ಗೆ ಒಲಿಯಲಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ.

Leave A Reply

Your email address will not be published.