ಆನೆಗೇ ಚಪ್ಪಲಿ…ದುಬಾರಿ ಮೌಲ್ಯದ ಪಾದರಕ್ಷೆ ಹಾಕುತ್ತೆ ಈ ಆನೆ| ಯಾಕಾಗಿ ಗೊತ್ತೇ ?

ಆನೆ ಚಪ್ಪಲಿ ಹಾಕುವುದು ನೋಡಿದ್ದೀರಾ? ಇಲ್ವಾ ? ಹಾಗಾದರೆ ಇಲ್ಲಿದೆ ಒಂದು ಕೌತುಕದ ಸುದ್ದಿ, ಆನೆಗೆ ಚಪ್ಪಲಿ ಒಂದು ಬಂದಿದೆ. ಅದು ಕೂಡಾ ಬೆಳೆಬಾಳುವ ಚಪ್ಪಲಿ. ಹೌದು ಮನುಷ್ಯ ಏನು ಬೇಕಾದರೂ ಮಾಡಿಯಾನು ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಜನರಿಗೆ ಚಪ್ಪಲಿ ಮುಖ್ಯ. ಎಲ್ಲರಿಗೂ ತಿಳಿದೇ ಇದೆ. ಆದರೆ ಆನೆಗೆ ಈ ಚಪ್ಪಲಿ ಬೇಕೋ ಬೇಡವೋ, ಚಪ್ಪಲಿಯಂತೂ ಮಾಡಿ ಹಾಕಿದ್ದಾರೆ. ಅದು ಯಾಕಾಗಿ ಗೊತ್ತೇ ? ಹೇಳ್ತೀವಿ…ಮುಂದೆ ಕಂಪ್ಲೀಟ್ ಡಿಟೇಲ್ಸ್ ಇದೆ.

ಈ ಘಟನೆ ನಡೆದಿರುವಂತದ್ದು ತಮಿಳುನಾಡಿನಲ್ಲಿ. ಅಂದಹಾಗೇ ಈ ಆನೆಯ ಹೆಸರು ” ಗಾಂಧಿಮತಿ”.
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ನಿಯಪ್ಪ‌ ದೇವಸ್ಥಾನದ ಆನೆ ಗಾಂಧಿಮತಿಗೆ ಭಕ್ತರು ಮತ್ತು ದೇವಸ್ಥಾನ ಸಂಘದ ಪ್ರಯತ್ನದಿಂದ 12,000 ರೂಪಾಯಿ ಮೌಲ್ಯದ ಹೊಸ ಚರ್ಮದ ಚಪ್ಪಲಿ ಮಾಡಿದ್ದಾರೆ.

ದೇವಾಲಯದ ಆಡಳಿತ ಮಂಡಳಿಯು ಈ 52 ವರ್ಷ ವಯಸ್ಸಿನ ಆನೆ ಬಗ್ಗೆ ವಿಶೇಷ ಕಾಳಜಿ, ಪ್ರೀತಿ ಹೊಂದಿದೆ. ಆನೆಯ ದೇಹದ ತೂಕ ಮತ್ತು ಸಾಮಾನ್ಯ ಯೋಗಕ್ಷೇಮ ಹೆಚ್ಚಿಸಲು ವೃತ್ತಿಪರ ವೈದ್ಯರ ಸಲಹೆ ಮೇರೆಗೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೇವಸ್ಥಾನದ ಆವರಣದ ಸುತ್ತ ಸುಮಾರು ಐದು ಕಿಲೋಮೀಟರ್ ದೂರದವರೆಗೆ ಗಾಂಧಿಮತಿಯನ್ನು ಪ್ರತಿದಿನ ವಾಕಿಂಗ್‌ಗೆ ಕರೆದೊಯ್ಯಲಾಗುತ್ತದೆ. ಈ ಸಂದರ್ಭದಲ್ಲಿ ಆನೆಗೆ ಕಾಲಿಗೆ ಕಲ್ಲು ಮುಳ್ಳು ವಾಕಿಂಗ್ ಹೋಗುವಾಗ ಕಾಲಿಗೆ ಕಲ್ಲು ಚುಚ್ಚಬಾರದೆಂದು ಚಪ್ಪಲಿ ಹೊಲಿಸಲಾಗಿದೆ.

ಚಪ್ಪಲಿಯನ್ನು ಹಿಂದೂ ವರ್ತಕರ ಸಂಘ ಮತ್ತು ಭಕ್ತರು ಗಾಂಧಿಮತಿಗೆ ಉಡುಗೊರೆಯಾಗಿ ನೀಡಿದ್ದಾರೆ. ವೈದ್ಯರ ಶಿಫಾರಸಿನ ಚರ್ಮದ ಚಪ್ಪಲಿ ಮೇರೆಗೆ ಗಾಂಧಿಮತಿ ಹೊಸ ಚರ್ಮದ ಧರಿಸುವಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ದೇವಸ್ಥಾನದಲ್ಲಿ ವಾರ್ಷಿಕ ಆನೆ ಉತ್ಸವವು 3 ರಂದು ದೇವಾಲಯದ ಜೂನ್ 3 ರಂದು ದೇವಾಲಯದ ಧ್ವಜಾರೋಹಣದೊಂದಿಗೆ ಪ್ರಾರಂಭವಾಗುತ್ತಿದ್ದಂತೆ, ಗಾಂಧಿಮತಿಯಮ್ಮನಿಗೆ ಸಹ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಉತ್ಸವದ ಸಂದರ್ಭದಲ್ಲಿ ಆನೆಯು ಪ್ರತಿನಿತ್ಯ ರಥ ಬೀದಿಯಲ್ಲಿ ಸಾಗುವುದು ವಾಡಿಕೆ. ಈ ವೇಳೆ ಗಾಂಧಿಮತಿ ಆಭರಣಗಳಿಂದ ಅಲಂಕರಿಸಲ್ಪಟ್ಟ ತನ್ನ ಕಾಲಿಗೆ ಜೋಡಿಸಲಾದ ಬೆಳ್ಳಿಯ ಸರಪಳಿಯನ್ನು ಧರಿಸಿ ಬೀದಿಗಳಲ್ಲಿ ಇದೀಗ ಹೊಸ ಅವತಾರದಲ್ಲಿ ಚರ್ಮದ ಚಪ್ಪಲಿಗಳನ್ನು ಧರಿಸಲಾಗಿದೆ.

ಆಭರಣಗಳಿಂದ ಅಲಂಕರಿಸಲ್ಪಟ್ಟ ತನ್ನ ಕಾಲಿಗೆ
ಜೋಡಿಸಲಾದ ಬೆಳ್ಳಿಯ ಸರಪಳಿಯನ್ನು ಧರಿಸಿ
ಬೀದಿಗಳಲ್ಲಿ ಇದೀಗ ಹೊಸ ರಾಜ ಗಾಂಭೀರ್ಯದಲ್ಲಿ ಚರ್ಮದ ಚಪ್ಪಲಿಗಳನ್ನು ಧರಿಸಿ ಹೆಜ್ಜೆ ಹಾಕುತ್ತಾ ನಡೆಯುವ ಈ ಆನೆಯ ಅಂದ ಚಂದ.

Leave A Reply

Your email address will not be published.