ನ್ಯಾಯ ಕೇಳೋಕ್ ಹೋದ ಶಿವಮೊಗ್ಗ ಹರ್ಷನ ಅಕ್ಕನಿಗೆ ಜೋರು ಮಾಡಿ ಕಳಿಸಿದ ಗೃಹ ಸಚಿವ !

ಬಜರಂಗದಳ ಕಾರ್ಯಕರ್ತ ಹರ್ಷನ ಸಹೋದರಿ ಗೃಹಸಚಿವ ಅರಗ ಜ್ಞಾನೇಂದ್ರರನ್ನು ಭೇಟಿ ಮಾಡಿದ ವೇಳೆ ಅಶ್ವಿನಿ, ‘ ಥ್ಯಾಂಕ್ಯೂ ಸೋ ಮಚ್ ‘ ಎಂದು ಹೇಳಿ ಹೊರನಡೆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಬೆಂಗಳೂರಿನಲ್ಲಿ ಗೃಹಸಚಿವರನ್ನು ಭೇಟಿ ಮಾಡಲೆಂದು ಬಂದಿದ್ದ ಸಹೋದರಿ ಅಶ್ವಿನಿಗೆ ಏರು ಧ್ವನಿಯಲ್ಲಿ ಇಡೀ ನಿಮ್ಮ ಕುಟುಂಬದ ಜೊತೆ ನಾವಿದೀವಿ. ನಾವೇನು ದ್ರೋಹ ಮಾಡ್ತಿದ್ದೇವೇನಮ್ಮ, ಏನೂ ಆಗೋದಿಲ್ಲವೆಂಬ ಹೇಳಿಕೆ ಕೇಳಿಸುತ್ತಿದ್ದಂತೆ ಸಹೋದರಿ ಅಶ್ವಿನಿ ಭೇಟಿಯಾದ ಸ್ಥಳದಿಂದ ಗರಂ ಆಗಿ ಹೊರ ನಡೆದಿದ್ದಾರೆ.

ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಭೀಕರ ಹತ್ಯೆಗೈದ ಆರೋಪಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾಥಿತ್ಯದ ಬಗ್ಗೆ ಹರ್ಷ ಸಹೋದರಿ ಅಶ್ವಿನಿ ದೂರು ನೀಡಲು ಬಂದಾಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಜೋರಾಗಿ ಮಾತನಾಡಿ ಕಳುಹಿಸಿದ ಘಟನೆ ಬೆಂಗಳೂರು ಮಲ್ಲೇಶ್ವರಂ ನ ಬಿಜೆಪಿ ಕಚೇರಿಯಲ್ಲಿ ನಡೆದಿದೆ

ಮೊನ್ನೆ ಪರಪ್ಪನ ಅಗ್ರಹಾರದಲ್ಲಿ ಹರ್ಷನ ಕೊಲೆ ಮಾಡಿದ ಆರೋಪಿಗಳಿಗೆ ರಾಜಾತಿಥ್ಯ ನಡೆದಿರುವ ಬಗ್ಗೆ ನ್ಯಾಯ ಕೇಳಲು ಹೋಗಿದ್ದ ಅಶ್ವಿನಿ ಅವರಿಗೆ ಗೃಹಸಚಿವರ ಏರುಧ್ವನಿಯ ಮಾತು ಬೇಸರ ತಂದಿದೆ. ಈ ಹಿನ್ನಲೆಯಲ್ಲಿ ಅಶ್ವಿನಿ ಎಲ್ಲೂ ನ್ಯಾಯ ಸಿಗಲಿಲ್ಲವೆಂದು ಬೇಸರಿಸಿಕೊಂಡು ಹೋರಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಣ್ಣ ಸಾವಿನ ಬಗ್ಗೆ ನ್ಯಾಯ ಕೇಳಲು ಹೋದ ಅಶ್ವಿನಿ ಜತೆ ಗೃಹ ಸಚಿವರು ಜೋರಾಗಿ ಮಾತನಾಡಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಅಶ್ವಿನಿ ಕೇಳಿಕೊಂಡಿದ್ದು,ಆದರೆ ಅಶ್ವಿನಿ ಅವರೊಂದಿಗೆ ಜೋರಾಗಿ ಮಾತನಾಡಿ ಕಳುಹಿಸಲಾಗಿದೆ. ಎಂಬ ಬಗ್ಗೆ ಅಶ್ವಿನಿ ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾರೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ”ಮಾತನಾಡಲು ಸಮಯ ಕೇಳಿದ್ದೆ ತಪ್ಪಾಯಿತು. ಸರ್ಕಾರದ ಮೇಲೆ ನಂಬಿಕೆ ಹೊರಟು ಹೊಯಿತು. ನ್ಯಾಯ ಸಿಗುವ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ ” ಎಂದು ಅಶ್ವಿನಿ ದುಃಖ ಹಂಚಿಕೊಂಡಿದ್ದಾರೆ.

ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿಗಳು ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ, ಅವರಿಗೆ ಜೈಲ್‌ನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂದು ಅನುಮಾನಿಸಲಾಗಿತ್ತು. ಕಾರಣ ಆರೋಪಿಗಳ ಕೈಗೆ ಮೊಬೈಲ್ ಸಿಕ್ಕಿದ್ದು, ಅವರು ವಿಡಿಯೋ ಕರೆ ಮಾಡಿರುವ ಸ್ಕ್ರೀನ್ ರೆಕಾರ್ಡ್ ಮಾಡಿರುವ ರೆಕಾರ್ಡ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಹರ್ಷ ಹತ್ಯೆಯಾದ ಬಳಿಕ ಇಡೀ ಶಿವಮೊಗ್ಗ ನಗರವೇ ಹೊತ್ತಿ ಉರಿದಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ಹತ್ಯೆ ನಡೆದ ಒಂದು ದಿನದ ಒಳಗಾಗಿ ಹತ್ಯೆ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಹರ್ಷನ ಕೊಲೆ ಪ್ರಕರಣದ ಬಗ್ಗೆ ಎನ್‌ಐಎ ತೀರ್ವವಾಗಿ ತನಿಖೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಆರೋಪಿಗಳಿಗೆ ಮೊಬೈಲ್ ಸಿಕ್ಕಿರುವುದಾದರೂ ಹೇಗೆ ಎಂಬ ಅನುಮಾನ ಎಲ್ಲರಲ್ಲೂ ಹುಟ್ಟಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ಹರಿದಾಡುತ್ತಿದ್ದಂತೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಸಂಬಂಧ ಜೈಲು ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ ಎನ್ನಲಾಗುತ್ತಿದೆ. ಆದರೆ, ಎನ್‌ಐಎ ತನಿಖೆ ನಡೆಸುವ ವೇಳೆಯಲ್ಲಿ ಆರೋಪಿಗಳ ಕೈಗೆ ಮೊಬೈಲ್ ಕೊಟ್ಟವರು ಯಾರು, ಈ ಆರೋಪಿಗಳು ತಮ್ಮ ಸಂಬಂಧಿಕರು ಮಾತ್ರವಲ್ಲದೇ ಬೇರೆಯವರೊಂದಿಗೆ ಮಾತನಾಡಿರುವ ಸಾಧ್ಯತೆಯೂ ಇದೆ. ಜೊತೆಗೆ ಹರ್ಷ ಹತ್ಯೆ ಪ್ರಕರಣದ ತನಿಖೆಯನ್ನು ದಿಕ್ಕುತಪ್ಪಿಸುವ ಹುನ್ನಾರ ನಡೆಯುತ್ತಿದೆಯೇ ಎಂಬ ಅನುಮಾನವನ್ನು ಹರ್ಷ ಕುಟುಂಬದವರು ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.