ಪತಿ ಜೊತೆ ಜೋಗ ಜಲಪಾತ ವೀಕ್ಷಿಸಲು ಬಂದಿದ್ದ ಮಹಿಳೆ ಸಾವು!

ಸಾಗರ : ಜೋಗ ಜಲಪಾತ ನೋಡಲೆಂದು ಪ್ರವಾಸಕ್ಕೆ ಬಂದ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದು ಸಾವು ಕಂಡ ಘಟನೆ ವರದಿಯಾಗಿದೆ.

ಮೃತರನ್ನು ನಿಶಾ (24) ಎಂದು ಗುರುತಿಸಲಾಗಿದೆ.

ಜೋಗದ ಜಂಗಲ್ ರೆಸಾರ್ಟ್ ನ ಸಮೀಪದ ಹನ್ನಿೀರಿನ ಬಳಿ ನಿಶಾ ಕಾಲು ಜಾರಿ ಬಿದ್ದ ತಕ್ಷಣವೇ, ಸ್ಥಳೀಯರ ಸಹಾಯದಿಂದ ನಾಗೇಶ್ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ದುರಾದೃಷ್ಟ ನಿಶಾ ಸಾವನ್ನಪ್ಪಿದ್ದಾರೆ.

ಕಳೆದ ಒಂದು ವರ್ಷ ಹಿಂದೆಯಷ್ಟೇ ಇವರಿಗೆ ಮದುವೆಯಾಗಿದ್ದು, ನಿಶಾ ಅವರ ಪತಿಯೊಂದಿಗೆ ಜೋಗ ವೀಕ್ಷಿಸಲು ಬಂದಿದ್ದರು. ನಿಶಾ ಸಾವಿನ ಹಿಂದೆ ಕುಟುಂಬಸ್ಥರು ಅನುಮಾನ ವ್ಯಕ್ತ ಪಡಿಸಿದ್ದು, ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆಯೆಂದು ತಿಳಿದು ಬಂದಿದೆ.

Leave A Reply

Your email address will not be published.