ಈ ಪಟ್ಟಿಯಲ್ಲಿರುವ ಸ್ಮಾರ್ಟ್​ಫೋನ್​ ಖರೀದಿಸಿ, ಏರ್ಟೆಲ್ ನಿಂದ ಆರು ಸಾವಿರ ಗೆಲ್ಲಿ!

ಟೆಲಿಕಾಂ ಕಂಪನಿಯಾದ ಏರ್​​ಟೆಲ್ ಗ್ರಾಹಕರಿಗೆ ಸದಾ ಆಫರ್ ನೀಡುತ್ತಲೇ ಬಂದಿದ್ದು, ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ 6 ಸಾವಿರ ರೂಪಾಯಿಯನ್ನು ಗೆಲ್ಲುವ ಅವಕಾಶ ನೀಡುತ್ತಿದೆ.

ಸ್ಮಾರ್ಟ್​ಫೋನ್ ಖರೀದಿಸಿದ 30 ದಿನಗಳ ಒಳಗಾಗಿ ನೀವು ಈ ಕೊಡುಗೆಯನ್ನು ಕ್ಲೈಮ್ ಮಾಡಬೇಕು. ಈ ಕೊಡುಗೆಯನ್ನು ಏರ್​​ಟೆಲ್ ಅಕ್ಟೋಬರ್ 2021 ರಲ್ಲಿ ಪ್ರಾರಂಭಿಸಿದೆ. ಈ ಆಫರ್ ಇನ್ನೂ ಮುಂದುವರೆದಿದ್ದು, ಹತ್ತು ಹೊಸ ಸ್ಮಾರ್ಟ್​ಫೋನ್​ಗಳೊಂದಿಗೆ ಈ ಆಫರ್​​ನಲ್ಲಿ ಒಳಗೊಂಡಿರುವ ಸ್ಮಾರ್ಟ್​ಫೋನ್​ಗಳ ಪಟ್ಟಿಯನ್ನು ಏರ್​​ಟೆಲ್ ನವೀಕರಿಸಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಏರ್​​ಟೆಲ್ ಈ ಕ್ಯಾಶ್​ಬ್ಯಾಕ್ 6 ಸಾವಿರ ರೂಪಾಯಿಗಳನ್ನು ಬಳಕೆದಾರರ ಖಾತೆಗೆ ಎರಡು ಭಾಗಗಳಲ್ಲಿ ವರ್ಗಾಯಿಸುತ್ತದೆ. ಈ ಕ್ಯಾಶ್​ಬ್ಯಾಕ್​​ನ ಮೊದಲ ಭಾಗ ಅಂದರೆ 2000 ರೂಪಾಯಿಗಳನ್ನು ಏರ್​​ಟೆಲ್ ಬಳಕೆದಾರರು ಸತತ 18 ತಿಂಗಳುಗಳವರೆಗೆ ರೂ 249 ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಯೋಜನೆಗಳನ್ನು ಖರೀದಿಸಿದಾಗ ಅವರ ಖಾತೆಗೆ ವರ್ಗಾಯಿಸಲಾಗುತ್ತದೆ. ಬಳಕೆದಾರರು ಮೂರು ವರ್ಷ ಅಥವಾ 36 ತಿಂಗಳವರೆಗೆ ನಿರಂತರ ರೀಚಾರ್ಜ್ ಮಾಡಿದಾಗ ಉಳಿದ ನಾಲ್ಕು ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.

ಈ ಕೊಡುಗೆಯ ಅಡಿಯಲ್ಲಿ, ಏರ್​​ಟೆಲ್ ಬಳಕೆದಾರರಿಗಾಗಿ ಹತ್ತು ಹೊಸ ಸ್ಮಾರ್ಟ್​ಫೋನ್​ಗಳನ್ನು ಪಟ್ಟಿಗೆ ಸೇರಿಸಿದೆ. ಈ ಸ್ಮಾರ್ಟ್​ಫೋನ್​ಗಳನ್ನು ಖರೀದಿಸುವ ಮೂಲಕ, ನೀವು ರೂ.6 ಸಾವಿರ ಕ್ಯಾಶ್​ಬ್ಯಾಕ್​ಗೆ ಅರ್ಹರಾಗುತ್ತೀರಿ. ಏರ್​​ಟೆಲ್ ಪಟ್ಟಿಯಲ್ಲಿರುವ ಸ್ಮಾರ್ಟ್​ಫೋನ್​ಗಳೆಂದರೆ Itel A16 Plus, Itel A17, Itel A37, Itel P17, Nokia C01 Plus, Xiaomi Poco M3 Pro 5G, Tecno Pop6 Pro, Infinix Smart 6 HD, Motorola Moto G22 ಮತ್ತು Oppo A16E.

ನೀವು ಕ್ಯಾಶ್​ಬ್ಯಾಕ್ ಪಡೆಯಲು ಬಯಸಿದರೆ, ಅದಕ್ಕಾಗಿ ನಿಮಗೆ 15 ದಿನಗಳನ್ನು ನೀಡಲಾಗುತ್ತದೆ. ಅಲ್ಲದೆ, ನಿಮ್ಮ ಕ್ಯಾಶ್​ಬ್ಯಾಕ್ ವರ್ಗಾವಣೆಯಾಗುವ ಖಾತೆಯು ಏರ್​​ಟೆಲ್ ಪೇಮೆಂಟ್ಸ್ ಬ್ಯಾಂಕ್​ನ ಖಾತೆಯಲ್ಲಿದೆ. ನೀವು ಖಾತೆಯನ್ನು ಹೊಂದಿಲ್ಲದಿದ್ದರೆ, ನೀವು ಅದನ್ನು ಏರ್​​ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ತೆರೆಯಬಹುದು.

error: Content is protected !!
Scroll to Top
%d bloggers like this: