Shocking News | ಸ್ಪುರದ್ರೂಪಿ ಯುವನಟ ಹಠಾತ್ ಮರಣ

ಜನಪ್ರಿಯ ಅಸ್ಸಾಮಿ ಯುವನಟ ಕಿಶೋರ್ ದಾಸ್ ಕಳೆದೊಂದು ವರ್ಷದಿಂದ ಕ್ಯಾನ್ಸರ್ ವಿರುದ್ಧ ಹೋರಾಡಿ ನಿನ್ನೆ ಮೃತಪಟ್ಟಿದ್ದಾರೆ.

ಕಮ್ರೂಪ್ ಜಿಲ್ಲೆಯ ಮಿರ್ಜಾದಿಂದ ಬಂದ 30 ವರ್ಷದ ನಟ ಕಿಶೋರ್ ದಾಸ್, 300 ಕ್ಕೂ ಹೆಚ್ಚು ಮ್ಯೂಸಿಕ್ ವೀಡಿಯೊಗಳಲ್ಲಿ ನಟಿಸಿದ್ದಾರೆ. ಇವರು ಕಳೆದ ಒಂದುವರ್ಷದಿಂದ ಕ್ಯಾನ್ಸರ್ ವಿರುದ್ಧ ಹೋರಾಡಿದ್ದು, ಈ ವರ್ಷದ ಮಾರ್ಚ್‌ನಿಂದ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನೈನ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾಗಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಅಲ್ಲದೆ, ಕಿಶೋರ್ ಸಾವಿನ ಸಮಯದಲ್ಲಿ ಕೋವಿಡ್ -19 ಸೋಂಕಿಗೂ ತುತ್ತಾಗಿದ್ದರು. ಈ ಕಾರಣದಿಂದ ಅವರ ಪಾರ್ಥಿವ ಶರೀರವನ್ನು ತವರು ಮಿರ್ಜಾಗೆ ತರಲು ಸಾಧ್ಯವಾಗಿಲ್ಲ. ಹೀಗಾಗಿ, ನಟನ ಅಂತಿಮ ವಿಧಿಗಳನ್ನು ಶನಿವಾರ ಸಂಜೆ ಚೆನ್ನೈನಲ್ಲಿ ನಡೆಸಲಾಯಿತು.

“ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಿಶೋರ್ ದಾಸ್ ದೇಹವನ್ನು ಅಸ್ಸಾಂಗೆ ಕಳುಹಿಸಲು ವ್ಯವಸ್ಥೆ ಮಾಡಲು ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಕೋವಿಡ್ -19 ನಿರ್ಬಂಧಗಳಿಂದಾಗಿ ಅದು ಸಾಧ್ಯವಾಗಲಿಲ್ಲ” ಎಂದು ಪಲಾಶ್ಬರಿ ಕ್ಷೇತ್ರದ ಸ್ಥಳೀಯ ಶಾಸಕ ಹೇಮಂಗಾ ಠಾಕುರಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಿಶೋರ್ ದಾಸ್ ಅವರಿಗೆ 2019 ರಲ್ಲಿ ‘ಕ್ಯಾಂಡಿಡ್ ಯಂಗ್ ಅಚೀವ್‌ಮೆಂಟ್’ ಪ್ರಶಸ್ತಿ ಮತ್ತು 2020-2021 ರಲ್ಲಿ ಅತ್ಯಂತ ಜನಪ್ರಿಯ ನಟನಿಗಾಗಿರುವ ಏಷ್ಯಾನೆಟ್ ಐಕಾನ್ ಪ್ರಶಸ್ತಿಯನ್ನು ನೀಡಲಾಗಿತ್ತು. ಪ್ರಧಾನವಾಗಿ ಅಸ್ಸಾಮಿ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡಿದ ದಾಸ್, ಗುವಾಹಟಿ ಮೂಲದ ಪ್ರಾದೇಶಿಕ ಮನರಂಜನಾ ಚಾನೆಲ್‌ ಗಳಲ್ಲಿ ಪ್ರಸಾರವಾದ ಬಿಧಾತ, ಬಂಧುನ್ ಮತ್ತು ನೆದೇಖಾ ಫಗುನ್‌ನಂತಹ ಪ್ರಸಿದ್ಧ ಅಸ್ಸಾಮಿ ಕಾರ್ಯಕ್ರಮಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ಕಿಶೋರ್ ದಾಸ್ ಅವರು ಹಾಡಿದ್ದ ಪ್ರಸಿದ್ಧ ಅಸ್ಸಾಮಿ ಹಾಡು ‘ತುರುತ್ ತುರುಟ್’ ಸೂಪರ್ ಹಿಟ್ ಆಗಿತ್ತು. ಅವರು ಕೊನೆಯದಾಗಿ ಅಸ್ಸಾಮಿ ಚಲನಚಿತ್ರ ದಾದಾ ತುಮಿ ಡಸ್ತೋ ಬೋರ್‌ ನಲ್ಲಿ ಕಾಣಿಸಿಕೊಂಡಿದ್ದರು.

error: Content is protected !!
Scroll to Top
%d bloggers like this: