ನರೇಶ್ ಪವಿತ್ರಾ ಲೋಕೇಶ್ ಒಂದೇ ರೂಂ ನಲ್ಲಿದ್ದಾಗ 3 ನೇ ಹೆಂಡತಿ ಬಂದು ಮಾಡಿದ್ದೇನು ?

ಕಳೆದ ಕೆಲವು ದಿನಗಳಿಂದ ನಟಿ ಪವಿತ್ರ ಲೋಕೇಶ್ ಅವರದ್ದೇ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಮಾಧ್ಯಮಗಳಿಂದ ಹಿಡಿದು ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರ ಲೋಕೇಶ್ ಮತ್ತು ನರೇಶ್ ಬಗ್ಗೆಯೇ ಗುಸುಗುಸುಗಳು ಕೇಳಿಬರುತ್ತಿದ್ದವು. ಇಷ್ಟು ದಿನ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಹೈಡ್ರಾಮ ಇದೀಗ ಮೈಸೂರಿಗೆ ಸ್ಥಳಾಂತರವಾಗಿದೆ. ನಿನ್ನೆ ರಾತ್ರಿ ಮೈಸೂರಿಗೆ ಆಗಮಿಸಿದ ನರೇಶ್​ ಮತ್ತು ಪವಿತ್ರಾ ಲೋಕೇಶ್​, ವಿವಿ ಪುರಂ ಠಾಣೆಗೆ ತೆರಳಿ ಒಂದು ದೂರನ್ನು ಸಲ್ಲಿಸಿದ್ದಾರೆ. ಆದರೆ, ಯಾರ ವಿರುದ್ಧ ದೂರು ನೀಡಿದರು ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಮೈಸೂರು ಹುಣಸೂರು ರಸ್ತೆಯ ಖಾಸಗಿ ಹೋಟೆಲ್​ನಲ್ಲಿ ನಟ ನರೇಶ್​-ಪವಿತ್ರಾ ತಂಗಿದ್ದ ವಿಚಾರ ತಿಳಿದು ರೂಂ ಮುಂದೆ ನರೇಶ್ ಪತ್ನಿ ರಮ್ಯ ಬಾಗಿಲು ಬಡಿಯುತ್ತಿದ್ದರೂ ನರೇಶ್ ಮತ್ತು ಪವಿತ್ರಾ ಲೋಕೇಶ್ ಹೊರ ಬಂದಿಲ್ಲ ಪೊಲೀಸ್ ಭದ್ರತೆಯಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೊರಟಿದ್ದು, ಈ ವೇಳೆ ಚಪ್ಪಲಿ ಎತ್ತಿಕೊಂಡ ರಮ್ಯಾ ಹೊಡೆಯಲು ಮುಂದಾದರು. ರಮ್ಯಾರನ್ನು ಪೊಲೀಸರು ಹಾಗೂ ಆಪ್ತ ರಕ್ಷಕರು ತಡೆದರು. ಇದೇ ವೇಳೆ ಪವಿತ್ರಾ ಲೋಕೇಶ್ ವಿರುದ್ದ ರಮ್ಯಾ ವಾಗ್ದಾಳಿ ಮಾಡಿದ್ದು, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೋಟೆಲ್‌ನಿಂದ ಹೊರ ಹೋದರು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ದೂರು ದಾಖಲಾದ ಬಳಿಕ ಇಬ್ಬರು ನೇರವಾಗಿ ಹೋಟೆಲ್​ ಒಂದಕ್ಕೆ ತೆರಳಿ ಒಂದೇ ರೂಮಿನಲ್ಲಿ ತಂಗುತ್ತಾರೆ. ಈ ವಿಚಾರ ಗೊತ್ತಾಗಿ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಅದೇ ಹೋಟೆಲ್​ನಲ್ಲಿ ರೂಮ್​ ಬುಕ್​ ಮಾಡಿ, ನರೇಶ್​ ಮತ್ತು ಪವಿತ್ರಾ ಲೋಕೇಶ್​ ಇದ್ದ ರೂಮಿನ ಮುಂಭಾಗ ಧರಣಿ ಕುಳಿತು ಇಡೀ ರಾತ್ರಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇಬ್ಬರು ಮೈಸೂರಿನ ಹೋಟೆಲ್​ನಲ್ಲಿ ತಂಗಿದ್ದಾರೆ ಎಂನ ಸುಳಿವುಬ ದೊರೆತ ಕೂಡಲೇ ಬೆಂಗಳೂರಿನಿಂದ ರಾತ್ರಿ ಒಂದು ಗಂಟೆಗೆ ಹೊರಟೆ. ಹೋಟೆಲ್​ಗೆ ಮಧ್ಯರಾತ್ರಿ ಬಂದು ಬೆಳಗ್ಗೆ ವರೆಗೆ ಕಾದೆ. ರಾತ್ರಿ ಗಲಾಟೆ ಮಾಡುವುದು ಸರಿಯಲ್ಲ ಅಂತಾ ಬೆಳಗ್ಗೆವರೆಗೂ ಕಾದೆ. ಮುಂಜಾನೆ ಆದ ಬಳಿಕ ಬಾಗಿಲು ಬಡಿದು ಗಲಾಟೆ ಮಾಡಿದೆ. ಬೆಸ್ಟ್​ ಫ್ರೆಂಡ್​ ಅಂದುಕೊಂಡು ರಾತ್ರಿಯೆಲ್ಲ ಒಂದೇ ರೂಮಿನಲ್ಲಿದ್ದರೆ, ಏನು ಅರ್ಥ?

ಹೋಟೆಲ್​ ರೂಮಿನಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್, ಪೊಲೀಸ್ ಭದ್ರತೆಯಲ್ಲಿ ಹೊರಟರು. ಈ ವೇಳೆ ರಮ್ಯಾ ಅವರಿಬ್ಬರನ್ನು ತಡೆಯಲು ಪ್ರಯತ್ನಿಸಿದರು. ಅಲ್ಲದೆ, ಚಪ್ಪಲಿ ಎತ್ತಿಕೊಂಡು ಹಲ್ಲೆ ಮಾಡಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ನರೇಶ್​ ಅವರ ಆಪ್ತ ರಕ್ಷಕರು ರಮ್ಯಾರನ್ನು ತಡೆದರು.ಇದೇ ಸಂದರ್ಭದಲ್ಲಿ ರಮ್ಯಾ, ಪವಿತ್ರಾ ಲೋಕೇಶ್ ವಿರುದ್ಧ ಮನಬಂದಂತೆ ರಮ್ಯಾ ವಾಗ್ದಾಳಿ ನಡೆಸಿದರು. ಆದರೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೋಟೆಲ್‌ನಿಂದ ಹೊರ ಹೋದರು.

ನಟಿಯ ಜೊತೆಗಿದ್ದ ನರೇಶ್ ಅವರು ಶಿಳ್ಳೆ ಹೊಡೆಯುತ್ತಾ ಹೊರ ಬಂದಿದ್ದಾರೆ. ಬಳಿಕ ರಮ್ಯಾ ಅವರು ಪ್ರಶ್ನಿಸಿದ್ದಕ್ಕೆ ಹಾರಿಕೆ ಉತ್ತರ ನೀಡಿ ಒಂದೇ ಕಾರಿನಲ್ಲಿ ಹೊರ ನಡೆದಿದ್ದಾರೆ. ನರೇಶ್ ಮತ್ತು ಪವಿತ್ರ ಒಟ್ಟಿಗೆ ಹೋಗಿರುವುದು ಮಾಧ‍್ಯಮಗಳ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಜತೆಗೆ ನರೇಶ್ ಅವರು ಹೊಟೇಲಿಂದ ಬರುವಾಗ ಖುಷಿಯಿಂದ ಇದ್ದರು. ಶಿಳ್ಳೆ ಹಾಕುತ್ತಾ ಹೊರಕ್ಕೆ ಹೋದರು ಎಂಬ ಮಾಹಿತಿ ಇದೆ. ನರೇಶ್ ಇಡೀ ದಿನ ಪವಿತ್ರಾ ಜತೆ ಇದ್ದು, ರಾತ್ರಿ ಕಳೆದು, ಬೆಳಿಗ್ಗೆ ಶಿಳ್ಳೆ ಹಾಕಿದ್ದು ಯಾಕೆ ಅಂತ ಜನ ಮಾತಾಡ್ತಿದ್ದಾರೆ.

error: Content is protected !!
Scroll to Top
%d bloggers like this: