ಪರ್ಸ್ ನಲ್ಲಿ ದುಡ್ಡು ಜತೆ ಈ ವಸ್ತುಗಳನ್ನು ಯಾವತ್ತೂ ಇಡ್ಬೇಡಿ | ತಪ್ಪಿದ್ರೆ, ಎಷ್ಟೇ ಹಣ ದುಡಿದ್ರೂ ಬಡವ ಆಗೋದು ಫಿಕ್ಸ್!

ಹಣ ಪ್ರತಿಯೊಬ್ಬರ ಪಾಲಿಗೆ ಮುಖ್ಯವಾದ ವಸ್ತುವೇ ಆಗಿದೆ. ಏಕೆಂದರೆ, ಇಂದಿನ ದುಬಾರಿ ದುನಿಯಾದಲ್ಲಿ ದುಡ್ಡು ಇಲ್ಲದಿದ್ದರೆ ನೆಲೆ ಇಲ್ಲ ಎಂಬಂತಾಗಿದೆ. ಇಂತಹ ಅವಶ್ಯಕವಾದ ಹಣವನ್ನು ಜಾಗ್ರತೆಯಾಗಿ ಇಟ್ಟುಕೊಳ್ಳಲು, ಉಳಿಸಲು, ಪ್ರತಿಯೊಬ್ಬರೂ ತಮ್ಮೊಂದಿಗೆ ಪರ್ಸ್ ಅನ್ನು ಇಟ್ಟುಕೊಳ್ಳುತ್ತಾರೆ. ಆದರೆ, ನಾವು ಹಣವನ್ನು ಯಾವ ರೀತಿಲಿ ಇಟ್ಟುಕೊಳ್ಳುತ್ತೇವೆ ಎಂಬುದರ ಮೇಲೆ ನಿಂತಿರುತ್ತದೆ ನಮ್ಮ ಸೇವಿಂಗ್ಸ್.

ಅನೇಕರು ತಮ್ಮ ತಮ್ಮ ವ್ಯಾಲೆಟ್‌ಗಳಲ್ಲಿ ಹಣವನ್ನು ಹೊರತುಪಡಿಸಿ ಇತರ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ, ಇದರಿಂದ ನಿಮ್ಮ ಫೈನಾನ್ಸ ಜೀವನದ ಮೇಲೂ ಗಾಢ ಪರಿಣಾಮ ಬೀಳಬಹುದು. ಅದಕ್ಕಾಗಿಯೇ ಪರ್ಸ್‌ನಿಂದ ಕೆಲವು ವಸ್ತುಗಳನ್ನು ತೆಗೆದುಬಿಡುವುದು ಉತ್ತಮ. ಏಕೆಂದರೆ ಈ ವಿಷಯಗಳು ಸುತ್ತಲಿನ ನಕಾರಾತ್ಮಕ ಕಂಪನಗಳನ್ನು ಹೆಚ್ಚಿಸುತ್ತವೆ ಮತ್ತು ಹಣದ ವಿಷಯದಲ್ಲಿಯೂ ಸಹ ಬಳಲಬೇಕಾಗುತ್ತದೆ. ಹೀಗಾಗಿ ನೀವು ಪರ್ಸ್‌ನಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂಬುದು ಇಲ್ಲಿದೆ ನೋಡಿ.

ಹರಿದ ಪರ್ಸ್:
ಪರ್ಸ್ ಹರಿದಿಲ್ಲ ಅಥವಾ ತುಂಬಾ ಹಳೆಯದಾಗಿದೆಯ ಎಂದು ಖಚಿತಪಡಿಸಿಕೊಳ್ಳಿ. ಹರಿದ ತುಂಡಾದ ಮತ್ತು ಹಳೆಯದಾದ ಪರ್ಸಿನಲ್ಲಿ ಹಣವನ್ನು ಯಾವ ಕಾರಣಕ್ಕು ಇಟ್ಟುಕೊಳ್ಳಬಾರದು. ಯಾಕೆ ಅಂತ ಹೇಳಲೇ ಬೇಕಿಲ್ಲ. ಹಾಗೂ, ನಿಮಗೆ ಸ್ಪಷ್ಟವಾಗಬೇಕಾಗಿದ್ದರೆ ಹೇಳ್ತೀನಿ ಕೇಳಿ : ನೋಡಿ ಸರ್, ನೀವು ಕಷ್ಟಪಟ್ಟು ಗಳಿಸಿದ ದುಡ್ಡನ್ನು ಭದ್ರವಾಗಿ ಇಟ್ಟುಕೊಳ್ಳಲಾರದ, ಪರ್ಸ್ ಎಂಬ ತಿಜೋರಿಯಲ್ಲಿ ಇಟ್ಟರೆ ಮಹಾಲಕ್ಷ್ಮಿಗೆ ಸಿಟ್ಟು ಬರದೇ ಇರುತ್ತಾ? ಈ ಕಾರಣದಿಂದಾಗಿ, ಜೀವನದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ಅಲ್ಲದೆ, ಯಾವುದೇ ರೀತಿಯ ಸಾಲ, ಬಿಲ್ ಪೇಪರ್‌ಗಳು ಮತ್ತು ಬಡ್ಡಿ ಪಾವತಿಸುವ ವಸ್ತುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಡಿ. ಹೀಗೆ ಮಾಡುವುದರಿಂದ ಸಾಕಷ್ಟು ಹಣ ನಷ್ಟವಾಗುತ್ತದೆ. ದುಡ್ಡಿನ ಜೊತೆ ಇಂತಹ ಚಿಲ್ಲರೆ ವಸ್ತುಗಳು ಯಾವತ್ತೂ ಇಟ್ಟುಕೊಳ್ಳಬಾರದು. ಹಾಗೆ ಮಾಡಿದಾಗ ಮಾತ್ರ ನಮಗೆ ದುಡ್ಡಿಗೂ ಮತ್ತು ಇಂತಹ ಬೆಲೆಬಾಳದ ವಸ್ತುಗಳಿಗೂ ವ್ಯತ್ಯಾಸ ತಿಳಿಯುವುದು. ದುಡ್ಡಿನ ಮಹತ್ವ ಅರಿವಾದವರ ಜೊತೆ ಮಾತ್ರ ಸಂಪತ್ತು ಸಂಧಾನ ಮಾಡಿಕೊಳ್ಳುವುದು. ಅಲ್ಲಿ ಮಾತ್ರ ಬಂದು, ಕೂತು, ಮನೆ ಮಾಡಿ, ವೃದ್ಧಿಯಾಗಿ ವಂಶ ಪಾರಂಪರ್ಯವಾಗಿ ಐಶ್ವರ್ಯ ನೆಲೆಸುವುದು.

ಹರಿದ ನೋಟುಗಳು:
ನಿಮ್ಮ ಪರ್ಸ್ ನಲ್ಲಿ ಹರಿದು ಹೋದ ನೋಟು ಯಾವತ್ತೂ ಹಾಕಬೇಡಿ. ವಾಸ್ತು ಪ್ರಕಾರ ಹೀಗೆ ಮಾಡುವುದು ಹೀಗೆ ಮಾಡುವುದು ಒಳ್ಳೆಯದಲ್ಲ. ಇದರಿಂದ ಲಕ್ಷ್ಮಿ ಮಾತೆಗೆ ಕೋಪ ಬಂದು ಅಪಾರ ಹಣ ನಷ್ಟವಾಗುತ್ತದೆ. ಅಲ್ಲದೆ ಹೀಗೆ ಮಾಡುವುದರಿಂದ ನೆಗೆಟಿವ್ ಎನರ್ಜಿ ಮನೆಯೊಳಗೆ ಸೇರುತ್ತದೆ. ನೀವೇ ಗಮನಿಸಿ: ನೋಟು ಯಾಕೆ ಹರಿಯುತ್ತದೆ? ನಮಗೆ ಬಂದ ನೋಟನ್ನು ಜಾಗೃತೆಯಾಗಿ ಪರ್ಸಿನಲ್ಲಿ ಇಟ್ಟುಕೊಂಡರೆ ಹರಿಯುವ ಸಂದರ್ಭ ಇಲ್ಲ. ಅಲ್ಲದೆ, ಬೇರೊಬ್ಬರು ನಮಗೆ ನೋಟನ್ನು ನೀಡುವಾಗ ಅದೇ ಹರಿದಿದ್ದರೆ ಮಾತ್ರ ಸಮಸ್ಯೆ. ಹಣ ಅನ್ನುವುದು ನಿಮ್ಮ ಶ್ರಮದ ಫಲ ಮತ್ತು ಶ್ರಮದ ತದ್ರೂಪಿ ಪ್ರತೀಕ. ನೀವು ಶ್ರಮವಹಿಸಿ ದುಡಿದ ಹಣದ ಬದಲು ಡ್ಯಾಮೇಜ್ ಆದ ನೋಟನ್ನು ನೀವು ಸ್ವೀಕರಿಸುತ್ತೀರಿ ಎಂದಾದರೆ ಅದರ ಅರ್ಥವೇನು ? ದುಡಿದ ದುಡ್ಡನ್ನೇ ನೀವು ಗೌರವಿಸುವುದಿಲ್ಲ ಎಂದು ಸ್ಪಷ್ಟ ಅಲ್ಲವೇ ? ಈ ಸ್ಪಷ್ಟನೆ ಮೂಡುತ್ತಿದ್ದಂತೆ ಮಹಾಲಕ್ಷ್ಮಿ ಪರ್ಸು ನಿಂದ ಮತ್ತು ಮನೆಯಿಂದ ಮಾಯ.

ಹಿರಿಯರ ಚಿತ್ರ:
ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವಜರ ಚಿತ್ರವನ್ನು ಪರ್ಸ್‌ನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಈ ಕಾರಣದಿಂದಾಗಿ, ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಳೆಯದು ಯಾವುದೂ ಅದೃಷ್ಟ ಮತ್ತು ಸಂಪತ್ತು ದೇವತೆಗೆ ಆಗಿ ಬರುವುದಿಲ್ಲ. ಹೊಸ ಯೋಚನೆ, ಮುಂದಿನ ಬಾಳಿನ ಯೋಜನೆಗಳನ್ನು ಮಾತ್ರ ಆಕೆ ಸಹಿಸಿಕೊಳ್ಳುತ್ತಾಳೆ. ಮಕ್ಕಳ ಚಿತ್ರಗಳು ಇರಿಸಿಕೊಂಡರೂ ಪರ್ವಾಗಿಲ್ಲ.

ಕೀಯನ್ನು ಪರ್ಸ್‌ನಿಂದ ದೂರವಿಡಿ:
ಕೀಲಿಯನ್ನು ಎಂದಿಗೂ ಪರ್ಸ್‌ನಲ್ಲಿ ಇಡಬೇಡಿ. ವಾಸ್ತು ಪ್ರಕಾರ ಹೀಗೆ ಮಾಡುವುದರಿಂದ ಹಣದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಮೆಟಾಲಿಕ್ ವಸ್ತು ಗಳಿಗೂ ಸಂಬಂಧ ಕೂಡಿಬರುವುದಿಲ್ಲ. ಅಲ್ಲದೆ ಪರ್ಸ್ ಮತ್ತು ನೋಟುಗಳು ಹರಿದು ಹೋಗುವ ಸಂದರ್ಭ ಇರುತ್ತದೆ ನೋಟುಗಳಿಗೆ ಜೀವ ಇರುತ್ತದೆ ಹರಿದರೆ, ಅದು ಎಲ್ಲ ಪೇಪರುಗಳಂತೆ ನಿರ್ಜೀವ ವಸ್ತು. ಅದನ್ನು ಯಾರೂ ಮೂಸುವುದಿಲ್ಲ ಆದ್ದರಿಂದ ಅನಾವಶ್ಯಕವಾಗಿ ಪರ್ಸಿನಲ್ಲಿ ಕೀ ಇಡಬೇಡಿ.

ಪರ್ಸ್‌ನಲ್ಲಿ ದೇವರ ಚಿತ್ರ ಇಡಬೇಡಿ:
ದೇವರ ಚಿತ್ರವನ್ನು ಪರ್ಸ್‌ನಲ್ಲಿ ಇಡಬೇಡಿ, ಏಕೆಂದರೆ ನಾವು ಪರ್ಸ್ ಅನ್ನು ಎಲ್ಲಿಯಾದರೂ ಇಟ್ಟುಕೊಂಡು ಅದನ್ನು ಕೊಳಕು ಕೈಗಳಿಂದ ಮುಟ್ಟುತ್ತೇವೆ. ಹೀಗೆ ಮಾಡುವುದರಿಂದ ದೇವತೆಗಳಿಗೆ ಅಪಮಾನವಾಗುತ್ತದೆ. ಸಾಮಾನ್ಯವಾಗಿ ಪರ್ಸ್ ಅನ್ನು ಹಿಂಬದಿಯ ಪ್ಯಾಂಟ್ ಪಾಕೆಟ್ ನಲ್ಲಿ ಇಡುತ್ತೇವೆ. ಅದು ದೇವರಿಗೆ ಮಾಡಿದ ಅವಮಾನದ ಹಾಗೆ. ಹಾಗಾಗಿ ಪರ್ಸನಲ್ಲಿ ದೇವರ ಚಿತ್ರಗಳನ್ನು ಇರಿಸಬೇಡಿ. ಒಂದು ವೇಳೆ ಪರ್ಸನ್ನು ಪ್ಯಾಂಟಿನ ಮುಂಬದಿಯ ಜೇಬುನಲ್ಲಿ ಇರಿಸುತ್ತೀರಾದರೆ, ಆಗ ದೇವರ ಚಿತ್ರಗಳನ್ನು ಇರಿಸಬಹುದು. ಅದೂ 50:50 ಅನುಪಾತದಲ್ಲಿ ಮಾತ್ರ ಸಹ್ಯ. ಹಾಗಾಗಿ ನಾವು ಭದ್ರವಾದ ಮನೆಯಲ್ಲಿ ವಾಸಿಸುವಂತೆ, ನಾವು ದುಡಿದ ದುಡ್ಡಿಗೂ ಗೌರವ ಕೊಟ್ಟು ಒಂದು ಉತ್ತಮ ಪರ್ಸ್, ಬ್ಯಾಗ್, ತಿಜೋರಿ ಹೀಗೆ ಏನೇ ಮಾಡಿ ಕೊಡಿ, ಅದು ಶುದ್ದ-ಭದ್ರವಾಗಿರಲಿ. ಹಣಕ್ಕೂ ಒಂದು ಭದ್ರವಾದ ಪರ್ಸ್ ಎಂಬ ಮನೆ ಕೊಡಿಸಿ. ಹೀಗೆ ಮಾಡುವ ಮೂಲಕ ಸಂಪತ್ತನ್ನು ಅಯಸ್ಕಾಂತದಂತೆ ನಿಮ್ಮ ಕಡೆಗೆ ಸೆಳೆದುಕೊಳ್ಳಿ.

Leave A Reply

Your email address will not be published.