ಕಿರುತೆರೆ ನಟಿ ಅಮೃತನಾಯ್ಡು ಬಾಳಲ್ಲಿ ಹೊಂಗಿರಣ, ಗಂಡು ಮಗುವಿನ ರೂಪದಲ್ಲಿ ಸಮನ್ವಿ ಆಗಮನ ! ತಾಯಿಯ ನೋವು ಮರೆಸಿದ ಪುಟ್ಟ ಕಂದ!

ಕಿರುತೆರೆ ನಟಿ ಅಮೃತಾ ನಾಯ್ಡು ಮಗಳು ಸಮನ್ವಿ ನೋವು ಮರೆಯಾಗಿ ಮತ್ತೆ ಸಂತೋಷ ತುಂಬಿದೆ. ನಟಿಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೌದು, ನಟಿ ಅಮೃತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ದಂಪತಿಗಳು ಸಂತೋಷದಲ್ಲಿದ್ದಾರೆ. ನಟಿ ಅಮೃತಾ ಜುಲೈ 2 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ತನ್ನ ಮಗು ಆಗಮನದ ಸಂತೋಷದ ವಿಚಾರವನ್ನು ನಟಿ ಅಮೃತಾ ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಅಮೃತಾ ದಂಪತಿಗಳು ಈಗಾಗಲೇ ಮುದ್ದಾದ ಮಗಳು ಸಮನ್ವಿ ಕಳೆದುಕೊಂಡ ನೋವಲ್ಲಿದ್ದರು. ಆದರೆ ಈ ಸಂತಸದ ಸುದ್ದಿ ನೋವನ್ನು ಕಡಿಮೆ ಮಾಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಜನವರಿಯಲ್ಲಿ ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ರಸ್ತೆ ಅಪಘಾತದಲ್ಲಿ 6 ವರ್ಷದ ಮಗಳು ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಈ ಹಿಂದೆ ಇವರ ಮೊದಲ ಮಗು ಬದುಕುಳಿದಿರಲಿಲ್ಲ. ಮೊದಲ ಮಗುವನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಆ ಮಗುವನ್ನು ಆಸ್ಪತ್ರೆ ಸಿಬ್ಬಂದಿ ಪೇಪರ್‌ನಲ್ಲಿ ಸುತ್ತು ಕೊಟ್ಟಿದ್ದರಂತೆ. ಇದನ್ನು ಹೇಳಿಕೊಂಡು ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲೇ ಅಮೃತಾ ಕಣ್ಣೀರು ಹಾಕಿದ್ದರು. 2ನೇ ಮಗು ಸಮನ್ವಿ ಬಂದ ಬಳಿಕ ಈ ನೋವನ್ನು ಕುಟುಂಬದವರು ಮರೆತಿದ್ದರು ಎಂಬ ಮಾತು ಕೂಡಾ ಹೇಳಿದ್ದರು. ಆದರೆ ನಂತರ ಸಮನ್ವಿ ಸಾವಿನ ಹಾದಿ ಹಿಡಿದಾಗ, ಇಡೀ ಕುಟುಂಬ ಜರ್ಜರಿತವಾಗಿತ್ತು. ಆದರೆ ಈ ಗಂಡು ಮಗುವಿನ ಆಗಮನ ಕುಟುಂಬದ ಎಲ್ಲರ ಮುಖದಲ್ಲಿ ನಗು, ಸಂತಸ ಮೂಡಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

error: Content is protected !!
Scroll to Top
%d bloggers like this: