ಖ್ಯಾತ ಕಿರುತೆರೆ ಟಿವಿ ಶೋ ನಟ, ಕಪಿಲ್ ಶರ್ಮಾ ಮೇಲೆ ಕೇಸ್ !

ಕಿರುತೆರೆಯ ಟಿವಿ ಶೋ ಮೂಲಕ ಖ್ಯಾತರಾಗಿರುವ ಕಪಿಲ್ ಶರ್ಮಾಗೆ ಈಗೊಂದು ಸಂಕಷ್ಟ ಎದುರಾಗಿದೆ. ಸಾಯಿ ಯುಎಸ್ ಎ ಕಂಪನಿಯು ಕಪಿಲ್ ಮೇಲೆ 2015 ರಲ್ಲಿ ಉತ್ತರ ಅಮೇರಿಕಾ ಪ್ರವಾಸಕ್ಕಾಗಿ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಮೊಕದ್ದಮೆ ಹೂಡಿದೆ.

ಕಾನೂನಿನ ಅಡಿಯಲ್ಲಿ ಈ ವಿಚಾರ ತರಬಾರದೆಂದು ಪ್ರಯತ್ನ ಪಟ್ಟಿದ್ದೇವೆ. ಆದರೆ ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರದರ್ಶನ ನೀಡಲಿಲ್ಲ ಮತ್ತು ಪ್ರತಿಕ್ರಿಯಿಸಲಿಲ್ಲ ಎಂದು ಹೇಳಿರುವುದರಿಂದ ದೂರು ದಾಖಲು ಮಾಡಲಾಗಿದೆ ಎಂದಿದ್ದಾರೆ.

ಅಮೇರಿಕಾದಲ್ಲಿ ಪ್ರಸಿದ್ಧ ಕಾರ್ಯಕ್ರಮಗಳ ಪ್ರಚಾರಕರಾದ ಅಮಿತ್ ಜೇಟ್ಲಿ ಪ್ರಕಾರ, ಕಪಿಲ್ ಭರವಸೆ ನೀಡಿದ ಆರು ನಗರಗಳ ಪೈಕಿ ಒಂದರಲ್ಲಿ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಆ ನಷ್ಟವನ್ನು ಅವರೀಗ ಭರಿಸಬೇಕಾಗುತ್ತದೆ. ಹಾಗಾಗಿ ಮೊಕದ್ದಮೆ ಹೂಡಲಾಗಿದೆ ಎಂದಿದ್ದಾರೆ.

ಹೀಗಾಗಿ ಪ್ರಕರಣವು ನ್ಯೂಯಾರ್ಕ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ತಮ್ಮ ಫೇಸ್‌ಬುಕ್ ಪುಟದಲ್ಲಿ ಸಾಯಿ ಯುಎಸ್ಎ ಪ್ರಕರಣದ ವರದಿಯನ್ನು ಹಂಚಿಕೊಂಡಿದೆ.

ಇದೇ ವೇಳೆ ಕಪಿಲ್ ‘ದಿ ಕಪಿಲ್ ಶರ್ಮಾ ಶೋ’ ತಂಡದೊಂದಿಗೆ ನಾರ್ಥ್ ಅಮೇರಿಕಾ ಪ್ರವಾಸದಲ್ಲಿದ್ದು ಕೆನಡಾದಿಂದ ಪೋಟೋ ಮತ್ತು ವಿಡಿಯೊಗಳನ್ನು ಹಂಚಿಕೊಂಡಿತ್ತು.

ಜುಲೈ 3 ರಂದು ಟೊರೊಂಟೊದಲ್ಲಿ ಮುಂದಿನ ಪ್ರದರ್ಶನ ನೀಡುವುದಾಗಿ ಕಪಿಲ್ ಹೇಳಿದ್ದರು.

Leave A Reply

Your email address will not be published.