SBI ಗ್ರಾಹಕರಿಗೆ ಗುಡ್ ನ್ಯೂಸ್, ಶೀಘ್ರವೇ ‘ವಾಟ್ಸಪ್ ಬ್ಯಾಂಕಿಂಗ್’ ಸೇವೆ ಆರಂಭ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ-ಹೊಸ ಸೇವೆಗಳನ್ನು ಒದಗಿಸುತ್ತಲೇ ಬಂದಿದ್ದು, ಇದೀಗ ಗ್ರಾಹಕರ ಮತ್ತು ಬ್ಯಾಂಕ್ ನಡುವಿನ ಸಂವಹನ ಸುಲಭವಾಗಲು ಹೊಸ ಸೇವೆ ಒದಗಿಸಲಿದೆ. ಹೌದು. ಎಸ್.ಬಿ.ಐ ವಾಟ್ಸಪ್ ಬ್ಯಾಂಕಿಂಗ್ ಸೇವೆಗಳನ್ನು ಆರಂಭಿಸಲಿದ್ದು, ಈ ಮೂಲಕ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.

ದೇಶಾದ್ಯಂತ 45 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಎಸ್ ಬಿಐ ನಲ್ಲಿ , ವಾಟ್ಸಪ್ ಬ್ಯಾಂಕಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ ಈ ವಿಷಯ ತಿಳಿಸಿದ್ದಾರೆ. ಬಹುತೇಕ ಎಲ್ಲಾ ಖಾಸಗಿ ಬ್ಯಾಂಕ್‌ಗಳು ವಾಟ್ಸಪ್ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿದ್ದು, ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್ ಬಿಐ ಈ ವಿಷಯದಲ್ಲಿ ಹಿಂದೆ ಬಿದ್ದಿತ್ತು. ಇದೀಗ ಈ ಸೇವೆಯನ್ನು ನೀಡಲಿದೆ.

ಒಟ್ಟಾರೆಯಾಗಿ, ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಕಾರ್ಪೊರೇಟ್ ಕ್ಲೈಂಟ್‌ಗಳು ಮತ್ತು ಅಗ್ರಿಗೇಟರ್‌ಗಳಿಗಾಗಿ API ಅನ್ನು ಪ್ರಾರಂಭಿಸುವುದಾಗಿ SBI ಘೋಷಿಸಿದೆ. API ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಿದರೆ, ಬ್ಯಾಂಕ್ ಮತ್ತು ಕ್ಲೈಂಟ್ ಸರ್ವರ್‌ಗಳ ನಡುವಿನ ಸಂವಹನವು ಸುಲಭವಾಗಿ ಎರಡು ವ್ಯವಸ್ಥೆಗಳ ನಡುವೆ ಡೇಟಾ ವರ್ಗಾವಣೆ ಸುಲಭ. ಗ್ರಾಹಕರು ತೊಂದರೆ-ಮುಕ್ತ ಮತ್ತು ಸುರಕ್ಷಿತ ಸೇವೆಗಳನ್ನು ಪಡೆಯಬಹುದಾಗಿದೆ.

ಎಸ್‌ಬಿಐ ಹಲವು ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಲು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್‌ ಸೇವೆಗಳನ್ನು ಬಳಸುತ್ತಿದೆ. ಆದರೆ, ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಯಾವ ರೀತಿಯ ಸೇವೆಗಳು ಲಭ್ಯವಿರುತ್ತವೆ ಎಂಬುದು ಸದ್ಯಕ್ಕೆ ತಿಳಿದಿಲ್ಲ. ಈಗಾಗಲೇ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ವಾಟ್ಸಾಪ್‌ ಮೂಲಕ ಹೋಲ್ಡರ್‌ಗಳಿಗೆ ವಿವಿಧ ಸೇವೆಗಳನ್ನು ಒದಗಿಸಲಾಗುತ್ತದೆ. ಇದಕ್ಕಾಗಿ SBI ಕಾರ್ಡ್ ಈಗಾಗಲೇ ವಾಟ್ಸಾಪ್ ಸಂಪರ್ಕ ಸೇವೆಯನ್ನ ಪ್ರಾರಂಭಿಸಿದೆ. ಈ ಸೇವೆಯ ಮೂಲಕ ಗ್ರಾಹಕರು ತಮ್ಮ ಖಾತೆಯ ವಿವರಗಳು, ರಿವಾರ್ಡ್ ಪಾಯಿಂಟ್‌ಗಳು, ಬಾಕಿ ಉಳಿದಿರುವ ಹಣ, ಕಾರ್ಡ್ ಪಾವತಿಗಳಂತಹ ಎಲ್ಲಾ ಸೇವೆಗಳನ್ನ ಪ್ರವೇಶಿಸಬಹುದು.

ಎಸ್‌ಬಿಐ ಕಾರ್ಡ್ ಹೊಂದಿರುವವರು ಈ ಸೇವೆಯನ್ನ ಬಳಸಲು ಮುಂಗಡವಾಗಿ ನೋಂದಾಯಿಸಿಕೊಳ್ಳಬೇಕು. ಅದರಂತೆ, ಖಾತೆಗೆ ಲಿಂಕ್‌ ಆಗಿರುವ ನಿಮ್ಮ ಮೊಬೈಲ್ ಸಂಖ್ಯೆಯಿಂದ 08080945040 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕು. ನೋಂದಾಯಿಸಿದ ನಂತರ ವಾಟ್ಸಾಪ್‌ನಲ್ಲಿ OPTIN ಎಂದು ಟೈಪ್ ಮಾಡಿ 9004022022ಗೆ ಸಂದೇಶ ಕಳುಹಿಸಿ. ಅದರ ನಂತರ ನೀವು ವಾಟ್ಸಾಪ್‌ನಲ್ಲಿ ಕ್ರೆಡಿಟ್ ಕಾರ್ಡ್ ಸಂಬಂಧಿತ ಸೇವೆಗಳನ್ನ ಪಡೆಯಬಹುದಾಗಿದೆ.

Leave A Reply

Your email address will not be published.