ವಿಚಿತ್ರ ಮದುವೆ | ಮೊಸಳೆಯ ಜೊತೆ ಸಪ್ತಪದಿ ತುಳಿದ ಮೇಯರ್!!!

ಈ ಜಗತ್ತಲ್ಲಿ ಯಾವ ಯಾವ ಮದುವೆಗಳನ್ನು ನೋಡಿದ್ದೇವೆ. ಮೇಕೆ ಜೊತೆ, ಕಪ್ಪೆ ಮದುವೆ ಹೀಗೆ ಅನೇಕ. ಈಗ ಅದರ ಪಾಲಿಗೆ ಇನ್ನೊಂದು ವಿಶೇಷ ಮದುವೆಯೊಂದು ಸೇರಿಕೊಂಡಿದೆ. ಅದುವೇ ಮೊಸಳೆ ಮದುವೆ. ಇದರ ವಿಶೇಷ ಏನು ಅಂತೀರಾ ? ಇಲ್ಲಿದೆ ಕಂಪ್ಲೀಟ್ ಕಹಾನಿ.


Ad Widget

ಮೆಕ್ಸಿಕೋದಲ್ಲಿ ಶತಮಾನಗಳಷ್ಟು ಹಳೆಯ ಆಚರಣೆಯೊಂದು ಇದೆ. ಅದರ ಪ್ರಕಾರ ಅಲ್ಲಿನ ನಗರದ ಮೇಯರ್ ಮೊಸಳೆಯನ್ನು ವಿವಾಹವಾಗಿದ್ದಾರೆ. ಈ ವಿಶಿಷ್ಟ ವಿವಾಹಕ್ಕೆ ಮಹತ್ವದ ಉದ್ದೇಶವಿದೆ. ಅಲ್ಲಿನ ಸಂಪ್ರದಾಯದ ಪ್ರಕಾರ, ನದಿಯಲ್ಲಿ ಮೀನು ಹಿಡಿಯಲು ಅನುಕೂಲವಾಗುವಂತೆ ಸಾಕಷ್ಟು ಮಳೆಯಾಗಿ, ಬೆಳೆ ಬೆಳೆಯಲು ಪ್ರಕೃತಿಯ ವರದಾನದ ಅಗತ್ಯದ ಕಾರಣದಿಂದ ಈ ಪದ್ಧತಿ ರೂಢಿಯಲ್ಲಿದೆ.

ಇದಕ್ಕಾಗಿ ಮೊಸಳೆಯನ್ನು ವಿವಾಹವಾಗುವ ಆಚರಣೆ ಹಿಂದಿನಿಂದಲೂ ಇದೆಯಂತೆ. ಹಿಸ್ಪಾನಿಕ್ ಯುಗಕ್ಕೂ ಮೊದಲಿನ ಅವಧಿಯ ಚೊಂಟಾಲ್ ಮತ್ತು ಹುವೆ ಬುಡಕಟ್ಟು ಸಮುದಾಯದವರ ಆಚರಣೆ ಇದು. ಪ್ರಕೃತಿಯನ್ನು ಪೂಜಿಸಲು ಈ ಆಚರಣೆ ಚಾಲ್ತಿಯಲ್ಲಿತ್ತು.


Ad Widget

ಗುರುವಾರ ನಡೆದ ವಿವಾಹ ಕಾರ್ಯಕ್ರಮದಲ್ಲಿ ಸ್ಯಾನ್‌ಪೆಡ್ರ ಹ್ಯಾಮೆಲುಲಾ ನಗರದ ಮೇಯರ್ ವಿಕ್ಟರ್ ಹೂಗೊ ಸೊಸಾ ಪುಟ್ಟ ಮೊಸಳೆಯ ಮಖಕ್ಕೆ ಮುತ್ತಿಡುವ ಮೂಲಕ ಸಾಂಕೇತಿಕವಾಗಿ ವಿವಾಹವಾಗಿದ್ದಾರೆ. ಇನ್ನೊಂದು ವಿಷಯ ಏನೆಂದರೆ ಮೇಯರ್ ಮುತ್ತಿಡುವಾಗ ಮೊಸಳೆ ಕಚ್ಚದಂತೆ ಅದರ ಬಾಯಿಯನ್ನು ಗಟ್ಟಿಯಾಗಿ ಕಟ್ಟಲಾಗಿತ್ತು. ಪುಟ್ಟ ರಾಜಕುಮಾರಿ ಎಂದು ಕರೆಯಲ್ಪಡುವ ಮೊಸಳೆ ಭೂಮಿತಾಯಿಯನ್ನು ಪ್ರತಿನಿಧಿಸುವ ದೇವತೆ
ಎಂದು ನಂಬಲಾಗಿದ್ದು ಸ್ಥಳೀಯ ನಾಯಕನೊಂದಿಗೆ
ಆಕೆಯ ವಿವಾಹವು ಮಾನವ-ದೈವಿಕ ಬಾಂಧವ್ಯದ ಸಂಕೇತ ಎಂಬ ನಂಬಿಕೆ ಇದೆ.


Ad Widget

ದೇವಮಾತೆ ಎಂದು ಕರೆಸಿಕೊಳ್ಳುವ ಎಲಿಯಾ ಎಡಿತ್ ಆಳ್ವಲರ್ ಅವರು ಹೇಳುವ ಪ್ರಕಾರ, ನನ್ನ ಸಂಸ್ಕೃತಿ ಮತ್ತು ಸಂಪ್ರದಾಯದ ಮೂಲದ ಬಗ್ಗೆ ನನಗೆ ಹೆಮ್ಮೆಯಿದೆ ಮತ್ತು ಈ ಆಚರಣೆಯಿಂದ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಈ ಮದುವೆ ಆಯೋಜನೆ ಇವರ ಸಮ್ಮುಖದಲ್ಲಿ ಆಗಿದೆ.

ತುತ್ತೂರಿ ಮೊಳಗುತ್ತಿದ್ದಂತೆ ಮತ್ತು ಡೋಲಿನ ಹಿಮ್ಮೇಳದಲ್ಲಿ ಸ್ಥಳೀಯರು ವಧು(ಮೊಸಳೆ)ವನ್ನು ತಮ್ಮ ತೋಳಿನಲ್ಲಿ ಎತ್ತಿಕೊಂಡು ನಗರದ ಬೀದಿಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಲಾಯಿತು.

Ad Widget

Ad Widget

Ad Widget
error: Content is protected !!
Scroll to Top
%d bloggers like this: