ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಬಗ್ಗೆ, ನಮ್ಮ ಪಕ್ಷದ ನಾಯಕರಾದಂತ ರಾಜಣ್ಣ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಈ ಕೂಡಲೇ ಅವರು ಕ್ಷಮೆಯಾಚಿಸುವಂತೆ ಸೂಚಿಸುತ್ತೇನೆ. ಈ ಬಗ್ಗೆ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಡಕ್ ವಾರ್ನಿಂಗ್ ಮೆಸ್ಸೇಜ್ ನೀಡಿದ್ದಾರೆ.
ಇಂದು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇವತ್ತು ನಮ್ಮ ಪಕ್ಷದ ಒಬ್ಬ ನಾಯಕರಾದಂತ ರಾಜಣ್ಣನವರು, ನಮ್ಮ ರಾಜ್ಯದ ಹಿರಿಯ ರಾಜಕಾರಣಿಗಳ ಬಗ್ಗೆ ಮಾತನಾಡಿರುವಂತ ಮಾತನ್ನು ಇಡೀ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ.
ನಾನು ವೈಯಕ್ತಿಕವಾಗಿ ಒಬ್ಬ ಪಕ್ಷದ ನಾಯಕನಾಗಿ ಯಾರೇ ಒಬ್ಬ ನಾಯಕರು ಮಾನವೀಯತೆಯನ್ನು ಮೆರೆಯಬೇಕು. ಸಮಾಜಕ್ಕೆ, ದೇಶಕ್ಕೆ ಸೇವೆ ಸಲ್ಲಿಸಿದವರ ಬಗ್ಗೆ ಗೌರವ ಕೊಡಬೇಕು. ಅಂತಹ ವ್ಯಕ್ತಿಗಳ ಆರೋಗ್ಯದ ಬಗ್ಗೆ ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದರು. ಅವರಿಗೆ ಕರೆ ಮಾಡಿ ಕ್ಷಮೆಯಾಚಿಸುವಂತೆ ಸೂಚಿಸುತ್ತೇನೆ.
ನಾನು ಕೂಡ ಈ ಸಂದರ್ಭದಲ್ಲಿ ಇದನ್ನು ಖಂಡಿಸುವೆ. ಇಂತಹ ಹೇಳಿಕೆಗಳಿಗೆ ನಾವು ಅವಕಾಶ ನೀಡೋದಿಲ್ಲ. ನಮ್ಮ ಪೂಜ್ಯರಾದಂತ ಹಿರಿಯರಿಗೆ ಉತ್ತಮವಾದಂತ ಸೇವೆ, ಕೆಲಸ ಮಾಡುವಂತ ಅವಕಾಶ, ಆಯಸ್ಸು ಆ ದೇವರು ಕೊಡಲಿ ಎಂಬುದಾಗಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು.
You must log in to post a comment.