ಮಹಾರಾಷ್ಟ್ರನೂತನ ಮುಖ್ಯಮಂತ್ರಿಯಾಗಿ ʼಏಕನಾಥ್ ಶಿಂಧೆʼ ಆಯ್ಕೆ : ಫಡ್ನವೀಸ್ ಘೋಷಣೆ

ಇಂದು ಸಂಜೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಿವಸೇನೆಯ ಬಂಡಾಯ ಶಾಸಕ ಏಕನಾಥ್ ಶಿಂಧೆಗೆ ಅದೃಷ್ಟ ಒಲಿದು ಬಂದಿದೆ. ಬಿಜೆಪಿ ಸರ್ಕಾರ ಕಳೆದ ಎರಡೂವರೆ ವರ್ಷಗಳಿಂದ ಆದ ಹಲವು ಅವಮಾನಗಳಿಗೆ ಕಾದು ಕೂತು ಮಿಕ ಬೀಳಿಸಿದೆ. ಇಂದು ಸಂಜೆ 7 ಗಂಟೆಗೆ ವಚನ ಕಾರ್ಯಕ್ರಮ.
ಏತನ್ಮಧ್ಯೆ, ಇಬ್ಬರೂ ನಾಯಕರು ರಾಜಭವನಕ್ಕೆ ತೆರಳಿದ್ದು, ಅಲ್ಲಿ ಅವರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ಭೇಟಿಯಾಗಲಿದ್ದು, ಅಲ್ಲಿ ಅವರು ಶಾಸಕರ ಬೆಂಬಲ ಪತ್ರವನ್ನು ಸಲ್ಲಿಸಲಿದ್ದಾರೆ ಮತ್ತು ಸರ್ಕಾರ ರಚನೆಗೆ ಔಪಚಾರಿಕವಾಗಿ ಹಕ್ಕು ಮಂಡಿಸಲಿದ್ದಾರೆ. ಇಂದು ಬೆಳಿಗ್ಗೆ ಶಿಂಧೆಯವರು ಗೋವಾದಿಂದ ಮುಂಬೈಗೆ ಆಗಮಿಸಿ ದೇವೇಂದ್ರ ಫಡ್ನವಿಸ್ ಅವರ ನಿವಾಸಕ್ಕೆ ತೆರಳಿದರು. ಇಬ್ಬರೂ ಸಂಕ್ಷಿಪ್ತ ಸಭೆ ನಡೆಸಿ ನಂತರ ರಾಜ್ಯಪಾಲರ ಭವನಕ್ಕೆ ತೆರಳಿದರು.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದ ಫಡ್ನವಿಸ್, 2019 ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಜನರು ಬಿಜೆಪಿ-ಶಿವಸೇನೆ ಮೈತ್ರಿಗೆ ಮತ ಹಾಕಿದರು ಆದರೆ ಜನಾದೇಶವನ್ನು ಅವಮಾನಿಸಲಾಗಿದೆ ಮತ್ತು ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಲಾಯಿತು ಎಂದು ಹೇಳಿದರು. ಹಿಂದುತ್ವ ಮತ್ತು ಸಾವರ್ಕರ್ ವಿರುದ್ಧ ಇರುವವರ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡಿತು. ಶಿವಸೇನೆ ಜನರ ಆದೇಶವನ್ನು ಅವಮಾನಿಸಿದೆ ಎಂದು ಫಡ್ನವೀಸ್ ಆರೋಪಿಸಿದ್ದಾರೆ.

ಈಗಾಗಲೇ ಮಹಾರಾಷ್ಟ್ರದಲ್ಲಿ ಸರ್ಕಾರದ ಸೂತ್ರವನ್ನು ನಿರ್ಧರಿಸಲಾಗಿದೆ. ಬಿಜೆಪಿ ಶಿಂಧೆ ಸೇರಿದಂತೆ ಎಲ್ಲ ಪಕ್ಷಗಳಿಗೂ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಲಿದೆ. ಆರು ಶಾಸಕರಿಗೆ ಸಂಪುಟ ಹಾಗೂ ರಾಜ್ಯ ಸಚಿವ ಸ್ಥಾನ ನೀಡಲಾಗುವುದು. ಶಿವಸೇನೆಯ ಏಕನಾಥ್ ಶಿಂಧೆ ಪಾಳಯವನ್ನು 6 ಸಚಿವ ಸಂಪುಟಗಳು ಮತ್ತು 6 ರಾಜ್ಯ ಸಚಿವರೊಂದಿಗೆ ಮಾಡಬಹುದು. ಆರಂಭದಲ್ಲಿ ನಾಲ್ಕು ಸಚಿವ ಸ್ಥಾನಗಳನ್ನು ಖಾಲಿ ಇಡಲಾಗುವುದು. ಬಂಡಾಯವನ್ನು ಸಕ್ಸಸ್ ಆಗಿ ನೆರವೇರಿಸಿ ಈಗ ಸರ್ಕಾರ ರಚಿಸಲು ಕಾರಣವಾದ ಶಿಂಧೆಗೆ ಮುಖ್ಯಮಂತ್ರಿ ಜತೆಗೆ ಬೃಹತ್ ಮಂತ್ರಿಗಿರಿ ನೀಡಲಾಗುವುದು. ಆದರೆ, ಬಿಜೆಪಿ 18 ಕ್ಯಾಬಿನೆಟ್ ಮಂತ್ರಿಗಳನ್ನು ಹೊಂದಿದ್ದು, ಸುಮಾರು 10 ರಾಜ್ಯ ಸಚಿವರನ್ನು ಮಾಡಲಾಗುವುದು.

ಶಿಂಧೆಯನ್ನು ಮುಖ್ಯಮಂತ್ರಿ ಮಾಡುವ ಮೂಲಕ ಉದ್ದಟತನ ಮೆರೆದಿದ್ದ, ತಾನು ಹಿಂದೂಪರ ಎನ್ನುತ್ತಲೇ, ಉಗ್ರರೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದ್ದ ವಿಪಕ್ಷಗಳ ಜತೆ ಸೇರಿ ಬಿಜೆಪಿಯನ್ನು ಸದಾ ಟೀಕೆ ಮಾಡುತ್ತಿದ್ದ ಉದ್ಧವ್ ಠಾಕ್ರೆಯನ್ನು ಪೂರ್ತಿ ಮುಳುಗಿಸಲು ಬಿಜೆಪಿ ಹೈಕಮಾಂಡ್ ರಣ ತಂತ್ರ ರೂಪಿಸಿದೆ. ಇಲ್ಲದೆ ಹೋದರೆ 109 ಸಂಖ್ಯಾಬಲ ಇರುವ ಬಿಜೆಪಿಯ ಅಭ್ಯರ್ಥಿ ಮುಖ್ಯಮಂತ್ರಿ ಪಟ್ಟದಲ್ಲಿ ಕೂರಬೇಕಿತ್ತು. ಆದರೆ, ಬಿಜೆಪಿ ಬಿಂದಾಸ್ ಆಗಿ ವರ್ತಿಸಿದೆ. ಕುಳಿತ ಜಾಗದಲ್ಲೇ ಇದ್ದರೂ ದೂರದಿಂದ ಬುಡ ಕೀಳುವ ಕಲೆ ಕರಗತ ಮಾಡಿಕೊಂಡಿರುವ ಅಮಿತ್ ಷಾ ಮುಂದಾಲೋಚನೆ ಮಾಡಿ ದಾಳ ಹೂಡಿದ್ದಾರೆ. ಆ ಬಲೆಯಲ್ಲಿ ಉದ್ಧವ್ ವಿಲವಿಲ. ಶಿಂಧೆ ಲಕ್ಕಿ ಮ್ಯಾನ್!

ಹಾರ್ಡ್ ಕೋರ್ ಹಿಂದುತ್ವದ ಮೂಲಕ ಶಿವ ಸೈನಿಕರನ್ನು ತಯಾರುಮಾಡಿ ಪಕ್ಷವನ್ನು ಮುನ್ನೆಲೆಗೆ ತಂದ ಅಪ್ಪ ಬಾಳಾ ಸಾಹೇಬ್ ಠಾಕ್ರೆಯ ಸೈದ್ಧಾಂತಿಕ ನೆಲೆಗಟ್ಟಿಗೆ ವಿರೋಧವಾಗಿ ವರ್ತಿಸಿದ್ದರು ಉದ್ಧವ್ ಠಾಕ್ರೆ. ಅಧಿಕಾರ ಅನುಭವಿಸುವ ಏಕೈಕ ಆಸೆಯಿಂದ ಮಹಾ ವಿಕಾಸ್ ಅಖಾಡ ಜತೆ ಸೇರಿ ಆಗ ಮಕಾಡೆ ಮಲಗಿದ್ದಾರೆ. ಅಧಿಕಾರ ಮಾತ್ರವಲ್ಲ, ಉದ್ಧವ್ ಠಾಕ್ರೆಯ ಸೈದ್ಧಾಂತಿಕವನ್ನೇ ಈಗ ಜನರು ಪ್ರಶ್ನಿಸುವಂತಾಗಿದೆ. ಆ ಮೂಲಕ ಹಿಂದುತ್ವವನ್ನು ಧಿಕ್ಕರಿಸಿ ಹೋದ ಉದ್ಧವ್ ಠಾಕ್ರೆಗೆ ಅಧಿಕಾರ ಕಳೆದುಕೊಳ್ಳುವುದು ಮಾತ್ರವಲ್ಲ, ಆತನ ಓಟ್ ಬೈಆಂಕ್ ನಲ್ಲಿ ಕೂಡ ದೊಡ್ಡ ತೂತು ಬಿದ್ದಂತಾಗಿದೆ. ಅದರ ಪ್ರಯೋಜನವನ್ನು ಬಿಜೆಪಿ ಬಾಚಿಕೊಂಡಿದೆ. ಅದು ಬಿಜೆಪಿಗೆ ಮುಂದಿನ ವಿಧಾನಸಭೆ ಮತ್ತು ಲೋಕಸಭೆಗೂ ಸಹಾಯ ಆಗಲಿದೆ.

Leave A Reply

Your email address will not be published.