ಅಯೋಧ್ಯೆ ರಥಯಾತ್ರೆ ನಡೆಯುವವರೆಗೆ ದೇಶದೊಳಗೆ ಉಗ್ರಗಾಮಿಗಳು ಇರಲಿಲ್ಲ !!- ವೀರಪ್ಪ ಮೊಯ್ಲಿ

ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಬಳಿಕ ದೇಶದೆಲ್ಲೆಡೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಕುರಿತು ರಾಜಕೀಯ ನಾಯಕರು ತಮ್ಮದೇ ಆದ ದೃಷ್ಟಿಕೋನದಲ್ಲಿ ಮಾತನಾಡುತ್ತಿದ್ದಾರೆ. ‌ಅಂತೆಯೇ ಇದೀಗ ಅಯೋಧ್ಯೆ ರಥ ಯಾತ್ರೆ ನಡೆಯುವವರೆಗೆ ದೇಶದ ಒಳಗೆ ಉಗ್ರಗಾಮಿಗಳು ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಜಸ್ಥಾನದ ಉದಯ್ ಪುರದಲ್ಲಿ ಟೈಲರ್ ಶಿರಚ್ಛೇದ ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ರಥಯಾತ್ರೆ ನಡೆಯುವವರೆಗೆ ಡೊಮೆಸ್ಟಿಕ್ ಟೆರರಿಸಂ ಇರಲಿಲ್ಲ. ದೇಶೀಯ ಉಗ್ರಗಾಮಿ ವ್ಯವಸ್ಥೆ ಆಮೇಲೆ ಹುಟ್ಟಿಕೊಂಡಿತು. ಡೊಮೆಸ್ಟಿಕ್ ಟೆರರಿಸಂ ಮೊದಲು ಹತ್ತಿಕ್ಕಬೇಕು ಎಂದರು.

ಈ ಕೆಲಸ ಮೊದಲು ಆಗಬೇಕು. ತರಬೇತಿ ಕೊಡುವುದನ್ನು ಹತ್ತಿಕ್ಕಬೇಕು. ನೆಮ್ಮದಿ ಕದಡಲು ಎಲ್ಲರೂ ಕಾರಣ. ಉಗ್ರರು ಏಕೆ ಹುಟ್ಟುತ್ತಾರೆ ಎಂಬುದು ಕಾರಣ. ಪ್ರಚೋದನೆ ಎರಡೂ ಕಡೆಯಿಂದ ಬಂದಾಗ ಸಮಸ್ಯೆ ಆಗುತ್ತದೆ. ಪ್ರಚೋದನೆ ಹತ್ತಿಕ್ಕುವ ಕೆಲಸ ಮಾಡಬೇಕು ಎಂದು ಮೊಯ್ಲಿ ಆಗ್ರಹಿಸಿದರು.

ಹ್ಯಾಪಿಸೆನ್ ಇಂಡೆಕ್ಸ್ ಪಟ್ಟಿಯಲ್ಲಿ ಭಾರತ ಕುಸಿತ ಆಗುತ್ತಿದೆ. ಎಸ್ ಡಿಪಿಐ ಜನರ ನೆಮ್ಮದಿ ಕದಡುತ್ತಿದೆ. ಹೀಗೆ ಹಿಂದೂ ಸಂಘಟನೆಗಳು ಕಾರಣವಾಗುತ್ತಿವೆ. ಯುಪಿಎ ಸರ್ಕಾರ ಇದ್ದಾಗ ಹೀಗೆ ಇರಲಿಲ್ಲ. ಸರ್ದಾರ್ ಪಟೇಲರು RSS ಬ್ಯಾನ್ ಮಾಡಬೇಕೆಂದು ಹೊರಟಾಗ ನೆಹರೂ ತಡೆದರು. ಇಂದು ಆ ಸಂಘಟನೆ ಆರಾಧ್ಯ ದೈವ ಪಟೇಲರಾಗಿದ್ದಾರೆ. ಎಸ್.ಡಿ.ಪಿ.ಐ ತರದ ಸಂಘಟನೆ ಗಳನ್ನು ಬ್ಯಾನ್ ಮಾಡಬೇಕು. ಅದೇ ರೀತಿ ಹಿಂದೂ ಪ್ರಚೋದನೆಯನ್ನೂ ತಡೆಯಬೇಕು ಎಂದು ಅವರು ತಿಳಿಸಿದರು.

Leave A Reply

Your email address will not be published.