ಹಿಂದುತ್ವದ ವಿರುದ್ಧ ಮಾತಾಡುವವರನ್ನು ಗುಂಡಿಟ್ಟು ಕೊಲ್ಲಬೇಕು: ಬಿಜೆಪಿ ಶಾಸಕರೋರ್ವರ ಆಕ್ರೋಶದ ಮಾತು

ನೂಪುರ್ ಶರ್ಮಾ ವಿವಾದಿತ ಹೇಳಿಕೆಯನ್ನು ಬೆಂಬಲಿಸಿದ್ದ ವ್ಯಕ್ತಿಯ ಶಿರಚ್ಛೇದ ಮಾಡಿರುವ ಕೃತ್ಯ ಕುರಿತು ಶಾಸಕ ಎಂ‌ಪಿ ರೇಣುಕಾಚಾರ್ಯ ಆಕ್ರೋಶದ ಮಾತುಗಳನ್ನಾಡಿದ್ದಾರೆ. ಈ ಕೃತ್ಯವನ್ನು ಖಂಡಿಸಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಹಂತಕರ ವಿರುದ್ಧ ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು ತೀರಿಸಿಕೊಳ್ಳುವ ಮಾತುಗಳನ್ನಾಡಿದ್ದಾರೆ.

ಹಿಂದುತ್ವದ ವಿರುದ್ಧ ಮಾತನಾಡಿದವರನ್ನು ಕಂಡಲ್ಲಿ ಗುಂಡಿಟ್ಟು ಹೊಡೆಯಬೇಕು. ಆಗ ಭಾರತ ಮಾತೆಗೆ ಗೌರವ ನೀಡಿದಂತಾಗುತ್ತದೆ ಎಂದು ದಾವಣಗೆರೆಯಲ್ಲಿ ರೇಣುಕಾಚಾರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಒಬ್ಬರ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ರೇಣುಕಾಚಾರ್ಯ, ಹಿಂದೂಗಳಾದ ನಾವು ಕೈಗೆ ಬಳೆ ತೊಟ್ಟುಕೊಂಡಿಲ್ಲ. ಹಿಂದೂಗಳನ್ನು ಸೀಳಿದವರನ್ನು ನಾವೂ ಸೀಳಬೇಕು, ನಾವೂ ಸೀಳುತ್ತೇವೆ. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಪ್ರತ್ಯುತ್ತರ ಕೊಟ್ಟಾಗ ಮಾತ್ರ ಎಲ್ಲ ಸುಮ್ಮನಿರುತ್ತಾರೆ. ಮುಯ್ಯಿಗೆ ಮುಯ್ಯಿ ಕೊಟ್ಟಾಗ ಮಾತ್ರ ಇಂತಹ ಅಯೋಗ್ಯರನ್ನು ಮಟ್ಟ ಹಾಕೋದಕ್ಕೆ ಸಾಧ್ಯ ಎನ್ನುವ ಮೂಲಕ, ರೇಣುಕಾಚಾರ್ಯ ಪ್ರತೀಕಾರದ ಹೇಳಿಕೆ ನೀಡಿದ್ದಾರೆ.

Leave A Reply