ಭಾರತದ ಟಾಪ್ ಟೆನ್ ನಟಿಯರ ಪಟ್ಟಿ ಬಿಡುಗಡೆ, ಸಮಂತಾ ಈಗ್ಲೂ ನಂಬರ್ 1, ರಶ್ಮಿಕಾ ಎಲ್ಲಿ ನಿಂತ್ಲು ಗೊತ್ತಾ?

ಸೌತ್‌ ಇಂಡಿಯಾದ ಜನಪ್ರಿಯ ನಟಿಯರಲ್ಲಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ತಮ್ಮ ಬ್ಯೂಟಿಯಿಂದಲೇ ಜನರ ಮನಸೆಳೆಯುವ ಪ್ರತಿಭಾವಂತ ನಟಿ ಸಮಂತಾ ರುತ್ ಪ್ರಭು ಯಾವಾಗಲೂ ಅಭಿಮಾನಿಗಳು ಮತ್ತು ವಿಮರ್ಶಕರನ್ನು ಏಕಕಾಲದಲ್ಲಿ ಮೆಚ್ಚಿಸಬಲ್ಲ ಪ್ರತಿಭೆ. ನಟಿಯಾಗಿಯೂ ಮಾತ್ರವಲ್ಲ ಈಗ, ಸ್ಯಾಮ್ ಭಾರತದ ಅತ್ಯಂತ ಜನಪ್ರಿಯ ಮಹಿಳಾ ತಾರೆ ಎಂಬ ಕಿರೀಟವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾಳೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಹೌದು.ಇದೀಗ ಒರ್ಮಾಕ್ಸ್ ಸಂಸ್ಥೆ ಜೂನ್ ತಿಂಗಳಲ್ಲಿ ಅತೀ ಜನಪ್ರಿಯರಾದ ಭಾರತದ ಟಾಪ್ 10 ನಟರ ಮತ್ತು ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸಂಸ್ಥೆಯು ಪ್ರತಿ ತಿಂಗಳೂ ಸಹ ನಟ, ನಟಿ, ಸಿನಿಮಾ, ವೆಬ್ ಸಿರೀಸ್ ಸೇರಿದಂತೆ ಮನೋರಂಜನಾ ಕ್ಷೇತ್ರದ ಟಾಪ್ 10 ಲೀಸ್ಟ್ ಮಾಡಿ ಬಿಡುಗಡೆ ಮಾಡುತ್ತದೆ. ಅದರಂತೆ ಇದೀಗ ಬಿಡುಗಡೆ ಆಗಿರುವ ಪಟ್ಟಿಯಲ್ಲಿ ಸಮಂತಾ ಪ್ರಭು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಮತ್ತು ಚಲನಚಿತ್ರ ಪ್ರಪಂಚದ ಇತರ ದೊಡ್ಡ ಹೆಸರುಗಳು ಕೂಡಾ ಸೇರಿದ್ದು, ಸಮಂತಾ ಎಲ್ಲರನ್ನೂ ಸೈಡಿಗೆ ತಳ್ಳಿದ್ದಾಳೆ.

ಈ ಸಂಶೋಧನೆಯ ಫಲಿತಾಂಶವು ಸಾಂಕ್ರಾಮಿಕ ರೋಗದ ನಂತರ ಪ್ರೇಕ್ಷಕರ ಆದ್ಯತೆಗಳಲ್ಲಿ ಆದ ಬದಲಾವಣೆಗಳ ಬಗ್ಗೆ ಹೇಳುತ್ತದೆ. ಸಮಂತಾ ಇಂದು ಭಾರತದ ಅತಿದೊಡ್ಡ ನಟಿಯರಲ್ಲಿ ಒಬ್ಬರಾಗಿದ್ದು, ಅವರು ತಮ್ಮ ಮೋಡಿ, ಅನನ್ಯತೆ ಮತ್ತು ಪ್ರತಿಭೆಯಿಂದ ಇಡೀ ಪ್ರೇಕ್ಷಕ ಗಣವನ್ನೇ ಸೆಳೆದಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2 ನಲ್ಲಿನ ಪ್ರತಿಸ್ಪರ್ಧಿ ರಾಜಿ ಮತ್ತು ಪುಷ್ಪಾ, ಊ ಅಂಟಾವಾ ದ ಆಕೆಯ ಇತ್ತೀಚಿನ ಎರಡು ಅಭಿನಯಗಳು ಆಕೆಯ ಬಹು ಚರ್ಚಿತ ಮತ್ತು ಬಹು ಆಕರ್ಷಿತ ಕಲಾ ಕುಸುಮಗಳು.

ಜನಪ್ರಿಯ ನಟಿಯಾಗಿರುವುದರ ಜೊತೆಗೆ, ಸಮಂತಾ ಸಾಮಾಜಿಕ ಕಾಳಜಿ ಉಳ್ಳವಳಾಗಿದ್ದು, ಉದ್ಯಮಿ ಕೂಡ. ಮತ್ತು ಆಕೆ ಸಾಮಾಜಿಕ ಮಾಧ್ಯಮದ ಮೇಲೆ ಪ್ರಭಾವ ಬೀರಬಲ್ಲ ಮಹಿಳೆ ಎನಿಸಿಕೊಂಡಿದ್ದಾಳೆ. ಆಕೆಯ ಮೋಡಿಮಾಡುವ ನೋಟ ಮತ್ತು ನಟನಾ ಕೌಶಲ್ಯವು ವರ್ಷಗಳಿಂದ ದೇಶಾದ್ಯಂತ ಮೀಸಲಾದ ನಿಷ್ಠಾವಂತ ಅಭಿಮಾನಿಗಳನ್ನು ನಿರ್ಮಿಸಿದೆ. ಜೆಸ್ಸಿಯಿಂದ ಹಿಡಿದು, ರಾಜಿ ಸೇರಿ ಮತ್ತು ಊ ಅಂಟಾವಾ ದವರೆಗೆ, ಆಕೆಯ ಪ್ರತಿ ಹೊಸ ಸಾಹಸದೊಂದಿಗೆ ಅವಳ ಬಹುಮುಖ ಪ್ರತಿಭೆ ಅನಾವರಣ ಆಗಿದೆ.

ಸಮಂತಾ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ತಮ್ಮ ಅದ್ಭುತ ಅಭಿನಯಕ್ಕೆ ಹೆಸರಾಗಿರುವ ಸಮಂತಾ ರುತ್ ಪ್ರಭು, ವಾಣಿಜ್ಯ ಪದವಿ ಓದುವಾಗ ಪಾರ್ಟ್ ಟೈಮ್ ಮಾಡೆಲಿಂಗ್ ಮಾಡಿಕೊಂಡಿದ್ದರು. ಸಮಂತಾ 2010 ರಲ್ಲಿ ತೆರೆಕಂಡ ಗೌತಮ್ ಮೆನನ್ ರ `ಯೇ ಮಾಯಾ ಚೇಸಾವೆ’ ತೆಲಗು ಚಿತ್ರದಿಂದ ಸಿನಿಜೀವನ ಪ್ರಾರಂಭಿಸಿದರು. ನಂತರ ತಮಿಳು ಚಿತ್ರಗಳಲ್ಲಿ ಕೂಡ ಮಿಂಚತೊಡಗಿದ ಸಮಂತಾ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಟಾಪ್ ಟೆನ್ ನಟಿಮಣಿಯರ ಪಟ್ಟಿಯಲ್ಲಿ ನಮ್ಮ ರಶ್ಮಿಕ ಮಂದಣ್ಣ ಅವರು ಎಲ್ಲಿದ್ದಾರೆ ಎಂದು ನೋಡಿದರೆ, ರಶ್ಮಿಕಾ ಎಂಟನೆಯ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ. ದ್ವಿತೀಯ ಸ್ಥಳದಲ್ಲಿ ಆಲಿಯಾ ಭಟ್, ತೃತೀಯ ನಯನತಾರಾ, ನಾಲ್ಕನೇ ಸ್ಥಾನ ದೀಪಿಕಾ ಪಡುಕೋಣೆ, ಐದನೇ ಸ್ಥಾನ ಕಾಜಲ್ ಅಗರ್ವಾಲ್, ಆರನೇ ಸ್ಥಾನ ಕೀರ್ತಿ ಸುರೇಶ್, ಏಳನೇ ಸ್ಥಾನ ಕತ್ರಿನಾ ಕೈಫ್, ಒಂಬತ್ತನೆ ಸ್ಥಾನ ಪೂಜಾ ಹೆಗ್ಡೆ, ಹತ್ತನೇ ಸ್ಥಾನ ಅನುಷ್ಕಾ ಶೆಟ್ಟಿ ಗಿಟ್ಟಿಸಿಕೊಂಡಿದ್ದಾರೆ.

error: Content is protected !!
Scroll to Top
%d bloggers like this: