ಹಾವುಗಳ ‘ಮಿಲನ’ : ಉರಗೋನ್ಮಾದ ನೋಡಲು ಮುಗಿಬಿದ್ದ ಜನ

ಹಾವುಗಳ ಸರಸವಾಡುವುದು ಸಾಮಾನ್ಯ. ಈ ವಿಷಯ ಸಾಮಾನ್ಯವೇ ಆಗಿದ್ದರೂ ಇಂಥಹ ದೃಶ್ಯ ಅಪರೂಪವಾಗಿದ್ದರೂ, ಕಾಣಸಿಗುವುದು ಕೂಡಾ ಬಲು ಅಪರೂಪ. ಆದರೆ, ಇಲ್ಲೊಂದು ಕಡೆ ಹಾವುಗಳೆರಡು ಪ್ರಣಯದಾಟದಲ್ಲಿ ತೊಡಗಿಕೊಂಡಿರುವ ಅಪರೂಪದ ಘಟನೆ ನಡೆದಿದೆ. ಇದು ಸಹಜವಾಗಿ ಸಾರ್ವಜನಿಕರ ಗಮನ ಸೆಳೆದಿದೆ. ಮಾತ್ರವಲ್ಲ, ಕೆಲವೇ ನಿಮಿಷಗಳಲ್ಲಿ ಇಲ್ಲಿ ಜನರು ಜಮಾಯಿಸಿದ್ದು, ಉರಗೋನ್ಮಾದವನ್ನು ನೋಡಲು ಮುಗಿಬಿದ್ದಿದ್ದಾರೆ.

ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಬಾಣಕಾರ ಗಲ್ಲಿ ಸಮೀಪದಲ್ಲಿ ಇಂದು ಎರಡು ಹಾವುಗಳು ಸರಸದಲ್ಲಿ ತೊಡಗಿಕೊಂಡಿದ್ದು, ಕಂಡುಬಂದಿದೆ. ಒಂದು ನಾಗರಹಾವು ಹಾಗೂ ಇನ್ನೊಂದು ಕೇರೆ ಹಾವು ಕೆಲ ನಿಮಿಷಗಳ ಕಾಲ ಇಲ್ಲಿ ಸರಸವಾಡಿವೆ.

ಸ್ಥಳೀಯರು ಹಾಗೂ ದಾರಿಹೋಕರು ಕೂಡ ಈ ಸಂದರ್ಭದಲ್ಲಿ ಇಲ್ಲಿ ಜಮಾಯಿಸಿದ್ದಲ್ಲದೆ, ಹಾವುಗಳ ಸರಸದ ದೃಶ್ಯಗಳನ್ನು ತಮ್ಮ ಮೊಬೈಲ್‌ಫೋನ್‌ಗಳಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಆದರೆ ನೆರೆದಿದ್ದ ಜನರ ಗದ್ದಲದಿಂದ ಗೊಂದಲಕ್ಕೆ ಒಳಗಾದ ಈ ಹಾವುಗಳು ಕೆಲವೇ ಕ್ಷಣಗಳಲ್ಲಿ ಹಾಗೇ ಅಲ್ಲಿನ ಕಲ್ಲುಗಳ ಸಂದಿಗಳಲ್ಲಿ ಮರೆಯಾಗಿ ಹೋಗಿವೆ.

Leave A Reply

Your email address will not be published.