ಉಡುಪಿ : ಕಾರು- ಲಾರಿ ಭೀಕರ ಅಪಘಾತ, ಚಾಲಕನಿಗೆ ಗಂಭೀರ ಗಾಯ!!!

ಉಡುಪಿ : ಉಡುಪಿ ಬ್ರಹ್ಮಾವರ ಮಾಬುಕಳ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಸಂಜೆ ಕಾರು – ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ಅತಿ ವೇಗದಿಂದ ಕುಂದಾಪುರದಿಂದ ಉಡುಪಿಯತ್ತ ಕಾರು ಚಲಾಯಿಸಿಕೊಂಡು ಬರುತ್ತಿದ್ದು ನಿಯಂತ್ರಣ ಸಿಗದೆ ರಸ್ತೆ ವಿಭಜಕ ದಾಟಿ ಕುಂದಾಪುರದತ್ತ ಸಾಗುತ್ತಿದ್ದ ಲಾರಿಗೆ
ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಈ ಅಪಘಾತದಿಂದ ಕಾರು ನಜ್ಜುಗುಜ್ಜಾಗಿದ್ದು ಕಾರಿನ ಚಾಲಕನ ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಈ ಕುರಿತು ಬ್ರಹ್ಮಾವರ ಆರಕ್ಷಕ ಠಾಣೆಯ ಸಿಬ್ಬಂದಿಗಳು ಘಟನ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದುಬಂದಿದೆ.

Leave A Reply

Your email address will not be published.