ಹಿಂದೂ ದೇವಾಲಯಕ್ಕೆ ‘ಕದಳಿ ಹಣ್ಣು’ ಪೂರೈಸುವ ಹಕ್ಕು ಪಡೆದ ಮುಸ್ಲಿಂ ವ್ಯಕ್ತಿ | ಹಿಂದೂ ಸಂಘಟನೆಗಳು ಕಿಡಿ

ಮಂಗಳೂರು: ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ ಬಹಳ ಪ್ರಸಿದ್ಧಿ ಪಡೆದ ದೇವಸ್ಥಾನ. ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಅನಿಯಮಿತ. ಇಂತಿಪ್ಪ ಈ ದೇವಸ್ಥಾನದ ಸೇವೆಗೆ ಬಾಳೆಹಣ್ಣು ಪೂರೈಸುವ ಗುತ್ತಿಗೆಯನ್ನು ಹಿಂದೂಯೇತರರಿಗೆ ನೀಡಿರುವ ವಿಚಾರವೊಂದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿರೋಧ ಉಂಟಾಗಿದೆ.

ಕದಳಿ ಬಾಳೆಹಣ್ಣನ್ನು 2021 ಜು.1ರಿಂದ 2022ರ ಜೂ.
30ರ ವರೆಗೆ ಸರಬರಾಜು ಮಾಡಲು ಅಧಿಕೃತ ಮಾರಾಟ ಗಾರ ರಿಂದ ದರಪಟ್ಟಿಯನ್ನು ಆಹ್ವಾನಿಸಿ ಕಳೆದ ವರ್ಷ ಕೊಟೇಶನ್ ಕರೆಯಲಾಗಿತ್ತು.

ಈ ಕೊಟೇಶನ್‌ನಲ್ಲಿ ಮೂವರು ಹಿಂದೂಯೇತರರ ಸಹಿತ ಓರ್ವ ಹಿಂದೂ ವ್ಯಾಪಾರಸ್ಥರು ದರಪಟ್ಟಿ ನಮೂದಿಸಿದ್ದರು.

ಮುಸ್ಲಿಂ ವ್ಯಾಪಾರಸ್ಥರೊಬ್ಬರು, ಪ್ರತಿ ಬಾಳೆಹಣ್ಣಿಗೆ 1.95 ರೂ. ದರ ನಮೂದಿಸಿದ್ದರು. ಇವರು ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನ ಮುಸ್ಲಿಂ ವ್ಯಾಪಾರಸ್ಥರು‌. ಇದು ಅತ್ಯಂತ ಕಡಿಮೆ ದರವಾದ್ದರಿಂದ ಇದನ್ನೇ ಅಂತಿಮಗೊಳಿಸಲಾಗಿತ್ತು.

ಇದರ ಗುತ್ತಿಗೆಯ ಅವಧಿ ಜೂ.30ಕ್ಕೆ ಮುಕ್ತಾಯಗೊಳ್ಳಲಿದ್ದು, ಹೊಸ ಟೆಂಡರ್ ಕರೆಯಬೇಕಾಗಿದೆ. ಆದರೆ, ಅಷ್ಟರಲ್ಲಿ ಗುತ್ತಿಗೆ ಹಿಂದೂಯೇತರರ ಪಾಲಾಗಿರುವುದು ಹಿಂದೂ ಸಂಘಟನೆಗಳ ಗಮನಕ್ಕೆ ಬಂದಿದೆ.

ಧಾರ್ಮಿಕ ದತ್ತಿ ಇಲಾಖಾ 2002-03ರ ತಿದ್ದುಪಡಿ ಕಾಯ್ದೆ ಪ್ರಕಾರ ಹಿಂದೂ ಧಾರ್ಮಿಕ ಕೇಂದ್ರಗಳ ಯಾವುದೇ ವಹಿವಾಟನ್ನು ಅನ್ಯಮತೀಯರಿಗೆ ನೀಡುವಂತಿಲ್ಲ. ಹಾಗಿದ್ದೂ ಕುಡುಪು ದೇವಸ್ಥಾನಕ್ಕೆ ಬಾಳೆಹಣ್ಣು ಪೂರೈಕೆ ಗುತ್ತಿಗೆಯನ್ನು ಅನ್ಯಮತೀಯ ವ್ಯಾಪಾರಿಗಳಿಗೆ ನೀಡಲಾಗಿದೆ. ಇದನ್ನು ರದ್ದುಪಡಿಸುವಂತೆ ಹಿಂದೂ ಸಂಘಟನೆಯ ಮುಖಂಡ ಪುತ್ತೂರಿನ ದಿನೇಶ್ ಕುಮಾರ್ ಜೈನ್ ಎಂಬವರು ದೇವಸ್ಥಾನದ ಕಾ.ನಿ. ಅಧಿಕಾರಿಗೆ ಕರೆ ಮಾಡಿ ಆಗ್ರಹಿಸಿರುವ ಆಡಿಯೋ ಕ್ಲಿಪ್ ಈಗ ವೈರಲ್ ಆಗಿದೆ.

Leave A Reply

Your email address will not be published.