ಗಂಡ ಮನೆಯಲ್ಲಿ ಇಲ್ಲದ ವೇಳೆ ಯುವಕನನ್ನು ಮನೆಗೆ ಆಹ್ವಾನಿಸುತ್ತಿದ್ದ ವಿವಾಹಿತೆ, ನಂತರ ಭೀಕರ ಹತ್ಯೆ| ತ್ರಿವಳಿ ಕೊಲೆ ಆರೋಪಿಗೆ ಕೋರ್ಟ್ ನೀಡಿತು ಅಚ್ಚರಿ ತೀರ್ಪು

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಳಗಾವಿಯ ಕುವೆಂಪು ನಗರದ ತ್ರಿವಳಿ ಕೊಲೆ ಆರೋಪಿ ಪ್ರವೀಣ್ ಭಟ್‌ನನ್ನು ಧಾರವಾಡ ಹೈಕೋರ್ಟ್‌ ತೀರ್ಪನ್ನು ನೀಡಿದೆ. ಬಟ್ಟೆ ವ್ಯಾಪಾರಿಯ ಮನೆಗೆ ನುಗ್ಗಿದ ಯುವಕ, ಗೃಹಿಣಿ ಮತ್ತು ಇಬ್ಬರು ಮಕ್ಕಳ ಕಗ್ಗೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಇದೀಗ ಈ ಪ್ರಕರಣದ ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ಹೈಕೋರ್ಟ್‌ ಧಾರವಾಡ ಪೀಠ ಆದೇಶ ಹೊರಡಿಸಿದೆ.

ಇದಕ್ಕಿಂತ ಪೂರ್ವದಲ್ಲಿ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದ್ದ ಆದೇಶ ತಿರಸ್ಕರಿಸಿದ್ದ ಹೈಕೋರ್ಟ್, ಪ್ರವೀಣ್ ಭಟ್ ನಿರ್ದೋಷಿ ಎಂದು ತೀರ್ಪು ನೀಡಿದೆ. ನ್ಯಾಯಾಧೀಶರಾದ ಕೆ. ಎಸ್. ಮುದಗಲ್, ಎಂಜಿಎಸ್ ಕಮಲ್ ಈ ತೀರ್ಪು ನೀಡಿದ್ದಾರೆ.

ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ತ್ರಿವಳಿ ಕೊಲೆ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು. ಇದಾದ ಬಳಿಕ ಕೋರ್ಟ್‌ಗೆ ಎಪಿಎಂಸಿ ಠಾಣೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ನಂತರ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸುಧೀರ್ಘ ವಿಚಾರಣೆ ನಡೆಸಿ 16 ಎಪ್ರಿಲ್ 2018ರಂದೇ ಪ್ರವೀಣ್ ಭಟ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ನಡೆದ ಘಟನೆ ಏನು ? ಬೆಳಗಾವಿಯ ಕುವೆಂಪು ನಗರದಲ್ಲಿ 2015 ಆಗಸ್ಟ್ 16 ರಂದು ಬೆಳ್ಳಂಬೆಳಗ್ಗೆನೇ ತಾಯಿ ಹಾಗೂ ಇಬ್ಬರು ಮಕ್ಕಳ ಕೊಲೆ ನಡೆದಿತ್ತು. ತಾಯಿ ರೀನಾ ಮಾಲಗತ್ತಿ, ಅವರ ಮಗ ಆದಿತ್ಯ ಮಾಲಗತ್ತಿ, ಮಗಳು ಸಾಹಿತ್ಯ ಮಾಲಗತ್ತಿಯನ್ನು ಭೀಕರವಾಗಿ ಕೊಲೆಗೈಯ್ಯಲಾಗಿತ್ತು. 24 ಗಂಟೆಯಲ್ಲೇ ಎಪಿಎಂಸಿ ಪೊಲೀಸರು ಆರೋಪಿ ಪ್ರವೀಣ್ ಭಟ್‌ನನ್ನು ಬಂಧಿಸಿದ್ದರು.

ಈ ತ್ರಿವಳಿ ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿತ್ತು. ರೀನಾ ಹಾಗೂ ಪ್ರವೀಣ್ ಭಟ್ ನಡುವಿನ ಸಂಬಂಧ ಈ ಮಟ್ಟಕ್ಕೆ ತಂದಿತ್ತು ಎನ್ನಲಾಗಿದೆ. ಬೆಳಗಾವಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರವೀಣ್, ತಾಯಿ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಎಂದು ತನಿಖೆ ವೇಳೆ ಪೊಲೀಸರು ತಿಳಿಸಿದ್ದರು.

‘ಬೆಳಗಾವಿಯ ಕುವೆಂಪು ನಗರದಲ್ಲಿ ವಾಸವಾಗಿದ್ದ ರೀನಾ ಮಾಲಗತ್ತಿ ಹಾಗೂ ಯುವಕ ಪ್ರವೀಣ್ ಭಟ್ ನಡುವೆ ಸ್ನೇಹ ಸಲುಗೆ ಬೆಳೆದಿತ್ತು. ಎರಡು ವರ್ಷದವರೆಗೆ ಇಬ್ಬರ ಮಧ್ಯೆ ಅನೈತಿಕ ಸಂಬಂಧ ಮುಂದುರಿದಿತ್ತು. ಬಳಿಕ ಪ್ರವೀಣ್ ಅಂತರ ಕಾಯ್ದುಕೊಳ್ಳಲು ಯತ್ನಿಸಿದ. ಇದರಿಂದ ಕೋಪಗೊಂಡ ರೀನಾ ತಕರಾರು ತೆಗೆದರು. ತನ್ನಿಂದ ದೂರಾದರೆ ಅನೈತಿಕ ಸಂಬಂಧದ ಸಂಗತಿಯನ್ನು ಬಹಿರಂಗ ಮಾಡುತ್ತೇನೆ ಎಂದೂ ಬೆದರಿಸಿದ್ದರು. ಕೊಲೆಗೆ ಇದು ಕಾರಣವೆಂದು ನಮೂದಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ರೀನಾ ಕೊಲೆಯಾದ ದಿನವೇ ಪ್ರಿಯಕರ ಪ್ರವೀಣ್ ಜನ್ಮದಿನವಿತ್ತು. ಸ್ನೇಹಿತರೊಂದೆಗೆ ಪಾರ್ಟಿ ಮುಗಿಸಿಕೊಂಡು ಬಂದಿದ್ದ ಪ್ರವೀಣ್ ರೀನಾ ತಡರಾತ್ರಿ ಟೆರೆಸ್ ಮೇಲೆ ಬಂದು ಶುಭಾಶಯ ಹೇಳಿದ್ದರು. ಬಹಳ ಹೊತ್ತು ಇಬ್ಬರೂ ಮಾತನಾಡಿದ ಬಳಿಕ ಪ್ರವೀಣ್ ಮನೆಗೆ ಮರಳಿದ್ದ. ಬೇರೊಂದು ಯುವತಿ ಜತೆಗೆ ಮದುವೆಯಾಗಿ ಜೀವನ ಕಟ್ಟಿಕೊಳ್ಳಲು ರೀನಾ ಅಡ್ಡಗಾಲು ಹಾಕಬಹುದು ಎಂಬ ಭಯ ಪ್ರವೀಣ್ಣಿತ್ತು. ಹೀಗಾಗಿ ಪ್ರಿಯತಮೆಯನ್ನು ಮುಗಿಸಲು ನಿರ್ಧರಿಸಿದ್ದ’ ಎಂಬುದೂ ದೋಷಾರೋಪ ಪಟ್ಟಿಯಲ್ಲಿದೆ.

‘2015ರ ಆಗಸ್ಟ್ 16ರಂದು ನಸುಕಿನ 3ಕ್ಕೆ ರೀನಾ ಅವರ ಬೆಡ್ ರೂಮಿಗೆ ಬಂದ ಆರೋಪಿ ಚಾಕುವಿನಿಂದ ಕತ್ತು ಸೀಳಿದ್ದ. ರೀನಾ ಕೂಗಾಟ ಕೇಳಿ ಮಕ್ಕಳೂ ಎಚ್ಚರಗೊಂಡಿದ್ದರು. ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ಮಗ ಆದಿತ್ಯಾ ಹಾಗೂ ಮಗಳು ಸಾಹಿತ್ಯ ಅವರ ಕತ್ತು ಹಿಸುಕಿ, ಕಾಲಲ್ಲಿ ತುಳಿದು ಕೊಲೆ ಮಾಡಲಾಗಿದೆ’

ಆರೋಪವನ್ನು ಪ್ರವೀಣ್ ಮೇಲೆ ಹೊರಿಸಲಾಗಿತ್ತು.

ಪೊಲೀಸರ ವಿಚಾರಣೆ ಕಾಲಕ್ಕೆ ಆರೋಪಿ ತನ್ನ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಇದೆಲ್ಲ ವಿಚಾರಣೆ ನಡೆಸಿ, 2018ರಲ್ಲಿ ಏಪ್ರಿಲ್ 16ರಂದು ಪ್ರವೀಣ್ ಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

ಈಗ ಹೈಕೋರ್ಟ್‌ನಿಂದಲೇ ಪ್ರವೀಣ್ ದೋಷಮುಕ್ತರಾದ ಹಿನ್ನೆಲೆಯಲ್ಲಿ ಪ್ರಕರಣ ದೊಡ್ಡ ತಿರುವು ಪಡೆದಿದೆ.

ರೀನಾ ಗಂಡ ರಿತೇಶ ಮಾಲಗತ್ತಿ, ಜವಳಿ ವ್ಯಾಪಾರಿಯಾಗಿದ್ದ. ಹಾಗಾಗಿ ಉದ್ಯಮದ ಸಂಬಂಧ ಕೆಲವೊಮ್ಮೆ ಎರಡೂರು ದಿನ ಮನೆಗೆ ಬರುತ್ತಿರಲಿಲ್ಲ. ಈ ವೇಳೆ ರೀನಾ ಮಾಲಗತ್ತಿ ಪ್ರವೀಣ್‌ನನ್ನು ಮನೆಗೆ ಆಹ್ವಾನಿಸಿ, ಅನೈತಿಕ ಚುಟುವಟಿಕೆಗೆ ಸಹಕರಿಸುವಂತೆ
ಒತ್ತಾಯಿಸುತ್ತಿದ್ದಳು. ರಿತೇಶ ಮನೆಯಲ್ಲಿ ಇಲ್ಲದ ಸಮಯದಲ್ಲಿ ಹಲವು ಸಲ ರೀನಾ ಭೇಟಿಗೆ ಮನೆಗೆ ಭೇಟಿ ನೀಡುತ್ತಿದ್ದ ಪ್ರವೀಣ್, ಒಮ್ಮೆಯೂ ಮುಂಬಾಗಿಲಿನಿಂದ ಹೋಗಿರಲಿಲ್ಲ. ಹಗ್ಗ ಏರಿ ರೀನಾಳನ್ನು ಭೇಟಿ ಮಾಡಿತ್ತಿದ್ದನಂತೆ.

ಹತ್ಯೆ ಘಟನೆ ನಡೆದ ದಿನ ರಾತ್ರಿ ಎರಡು ಸಲ ಆರೋಪಿ ಪ್ರವೀಣ್ ರೀನಾ ಮನೆಗೆ ಹೋಗಿದ್ದ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಪತ್ತೆ ಹಚ್ಚಿದ್ದರು. 2015 ಆಗಸ್ಟ್ 16 ರಂದು ಬೆಳಗಿನ ಜಾವ ನಡೆದ ತ್ರಿವಳಿ ಕೊಲೆ ಪ್ರಕರಣದ ಸಂಬಂಧ ಪ್ರವೀಣ್ ಭಟ್‌ನನ್ನು ಬಂಧಿಸಿ, ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗಿತ್ತು. ಆದರೆ ಈಗ ಆತ ನಿರ್ದೋಷಿ ಎಂದು ಕೋರ್ಟ್ ತೀರ್ಪು
ನೀಡಿದೆ.

Leave A Reply

Your email address will not be published.