ಹತ್ತನೇ ತರಗತಿ ಪೂರಕ ಪರೀಕ್ಷೆಗೆ ಶುಲ್ಕ ವಿನಾಯಿತಿ !! | ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲು ರಾಜ್ಯ ಸರ್ಕಾರ ನಿರ್ಧಾರ

ಹತ್ತನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಸುಧಾರಿತ ಪೂರಕ ಪರೀಕ್ಷೆಗಳಿಗೆ ಶುಲ್ಕ ಪಡೆಯದಿರಲು ಆಂಧ್ರ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತಾವನೆಗೆ ಮುಖ್ಯಮಂತ್ರಿಗಳ ಕಚೇರಿ ಅನುಮೋದನೆ ನೀಡಿದೆ.

ಯಾವುದೇ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕವನ್ನು ಪಡೆಯುವುದಿಲ್ಲ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಲಾಗುವುದು ಎಂದು ಪರೀಕ್ಷಾಂಗ ನಿರ್ದೇಶಕ ಡಿ.ದೇವಾನಂದ ರೆಡ್ಡಿ ತಿಳಿಸಿದ್ದಾರೆ. ಪ್ರಕಟಣೆಯ ಮೊದಲು ಪರೀಕ್ಷಾ ಶುಲ್ಕವನ್ನು ಪಾವತಿಸಿದವರಿಗೆ ಹಣವನ್ನು ಮರುಪಾವತಿಸಲಾಗುತ್ತದೆ.

ಸುಮಾರು ಶೇಕಡಾ 33ರಷ್ಟು ವಿದ್ಯಾರ್ಥಿಗಳು SSLC 2022ನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಹತ್ತನೇ ತರಗತಿ ತೇರ್ಗಡೆ ಪ್ರಮಾಣವು 2019 ರಲ್ಲಿ ಶೇಕಡಾ 94.88 ರಿಂದ 2022 ರಲ್ಲಿ ಶೇಕಡಾ 67.26 ಕ್ಕೆ ಕುಸಿತವನ್ನು ಕಂಡಿದೆ. ಪರೀಕ್ಷೆಗಳಿಗೆ ಹಾಜರಾದ 6,15,908 ವಿದ್ಯಾರ್ಥಿಗಳಲ್ಲಿ ಒಟ್ಟು 4,14,281 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಅಡ್ವಾನ್ಸ್ಡ್ ಸಪ್ಲಿಮೆಂಟರಿ ಪರೀಕ್ಷೆಯನ್ನು ಒಂದು ತಿಂಗಳಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಅಡ್ವಾನ್ಸ್ಡ್ ಸಪ್ಲಿಮೆಂಟರಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಾಮಾನ್ಯ ಪಾಸ್ ಎಂದು ಪರಿಗಣಿಸಲಾಗುತ್ತದೆ.

ಸರ್ಕಾರ ಪೂರಕ ಪರೀಕ್ಷೆಗಳಿಗೆ ಶುಲ್ಕ ವಿನಾಯಿತಿ ನೀಡಿರುವುದನ್ನು ಪೋಷಕರು ಮತ್ತು ವಿದ್ಯಾರ್ಥಿಗಳು ಸ್ವಾಗತಿಸಿದ್ದಾರೆ.

Leave A Reply

Your email address will not be published.