ಆರೆಸೆಸ್ ಟೀಕಿಸಿದ ಪರಿಣಾಮ ತಿರುಗಿ ಬಿದ್ದ ಶಿವಸೈನಿಕ!

ಬಿಜೆಪಿಯ ಆಕ್ರಮಣಕಾರಿ ಆವೃತ್ತಿಯ ಎದುರು ಮೃದು ಹಿಂದುತ್ವದ ಆವೃತ್ತಿಯ ಮುಖವಾಡ ಧರಿಸಲು ಹೋದ ಶಿವ ಸೇನಾ ಮುಖ್ಯಸ್ಥ  ಉದ್ಧವ್ ಠಾಕ್ರೆ ವಿಫಲರಾಗಿದ್ದಾರೆ ಎಂಬುದನ್ನು ಶಿವಸೇನೆಯಲ್ಲಿ ಈಗ ನಡೆಯುತ್ತಿರುವ ಆಂತರಿಕ ದಂಗೆ ಎತ್ತಿ ತೋರಿಸುತ್ತದೆ. ಹಿಂದುತ್ವದ ಎದುರು ಉದ್ದವ್ ತಾಕ್ರೆ ಸೋಲು ಕಂಡಿದ್ದಾರೆ. ಸೋಲು ಹೊರಗಿನಿಂದ ಆಗಿಲ್ಲ ಅವರ ಪಕ್ಷದ ಒಳಗಿನಿಂದಲೇ ಮತ್ತು ಆತನ ನಿಷ್ಠಾವಂತ ಶಿವ ಸೈನಿಕರಿಂದಲೇ ಆಗಿರುವುದು ಎನ್ನುವುದು ಮಹತ್ವದ ವಿಚಾರ.

ಶಿವಸೇನೆಯಲ್ಲಿಿಜೆಪಿಯ ಎದುರು ನಿಲ್ಲಿಸಿದರೆ 10 ಪಟ್ಟು ಕಟ್ಟರ್ ಹಿಂದುತ್ವದ ಸಿದ್ಧಾಂತದ ಪಕ್ಷ. ಆದರೆ ಕಳೆದ 2019 ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಆಗುವ ಆತುರದಲ್ಲಿ ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಇರಾದೆಯಲ್ಲಿ, ಠಾಕ್ರೆ 2019 ರ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಮಹಾರಾಷ್ಟ್ರದ ಜಾತ್ಯತೀತ ಎನ್ನುವ ಶಕ್ತಿಗಳೊಂದಿಗೆ ಸೇರಿಕೊಂಡರು. ತಮ್ಮ ಭದ್ರ ದೇಶಪ್ರೇಮಿ ಮರಾಠಿ ಮತದಾರರ ಬಗ್ಗೆ ಕಿಂಚಿತ್ ಕೂಡಾ ಯೋಚಿಸದೆ, ಮೂರು ದಶಕಗಳಿಂದ ಬಾಳಾಸಾಹೇಬ್ ಠಾಕ್ರೆಯವರು ಕಟ್ಟಿ ಬೆಳೆಸಿದ  ಹಿಂದುತ್ವದ ಪ್ರತಿಪಾದನೆಯಿಂದ ಹಿಂದೆ ಸರಿದರು. ವ್ಯಂಗ್ಯ ಚಿತ್ರಕಾರ, ಅಲ್ಲಿಂದ ಮದ್ರಾಸಿ ಹಟಾವೋ ಚಳವಳಿಗಾರ, ಕೊನೆಗೆ ಹಿಂದುತ್ವವಾದಿಯಾಗಿ ಬದಲಾಗಿ ಒಂದು ಕರೆಕೊಟ್ಟರು ಸಾಕು ಹಿಂದುತ್ವದ ಸಪೋರ್ಟ್ ಗೆ ಲಕ್ಷಗಟ್ಟಲೆ ಜನರು ಬೀದಿಗಿಳಿವಂತೆ ಮಾಡುತ್ತಿದ್ದ ಅಪ್ಪ ಬಾಳಾಸಾಹೇಬ್ ಠಾಕ್ರೆಯವರ ದಾರಿಯಿಂದಲೆ ಬದಿಗೆ ಸರಿದರು ಮಗ ಉದ್ದವ್.

ಎನ್‌ಸಿಪಿ-ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವ ಮೂಲಕ ತನ್ನ ಸೈದ್ಧಾಂತಿಕ ನೆಲೆಗಟ್ಟನ್ನು ಕಳೆದುಕೊಂಡಿತು. ಅಧಿಕಾರದ ಅಗತ್ಯದಲ್ಲಿ ಉದ್ಧವ್ ಠಾಕ್ರೆಗೆ ಅದು ಗೋಚರವಾಗಲೇ ಇಲ್ಲ. ಇತ್ತೀಚಿಗೆ ಅದು ಆತನಿಗೆ ಗೊತ್ತಾಗಿದ್ದರೂ, ಅಷ್ಟರಲ್ಲಿ ಕಾಲ ಮಿಂಚಿತ್ತು.

ಶಿವ ಸೇನಾ-ಎನ್‌ಸಿಪಿ-ಕಾಂಗ್ರೆಸ್ ದೋಸ್ತಿ ಪ್ರಯೋಗವು ಪಕ್ಷದ ನೀತಿ ರಿವಾಜುಗಳ ಜತೆ ಚೆನ್ನಾಗಿ ಮ್ಯಾಚ್ ಆಗಲ್ಲ ಎಂದು ಠಾಕ್ರೆ ಅರಿತುಕೊಳ್ಳಲು ವಿಫಲರಾಗಿದ್ದಾರೆ. ಅಥವಾ, ಸಿಎಂ ತಮ್ಮ ಅನುಯಾಯಿಗಳನ್ನು ಲಘುವಾಗಿ ತೆಗೆದುಕೊಂಡು, ‘ಏನಾಗಲ್ಲ ಬಿಡ್ರಿ, ಆಮೇಲೆ ನೋಡ್ಕೊಳ್ಳೋಣ’ ಎಂದು ತೆಗೆದುಕೊಂಡಿದ್ದಾರೆ. ಆದರೆ ಈಗ ಅದೇ ಅವರನ್ನು ಅಧಿಕಾರ ಕಳಕೊಳ್ಳುವ  ಅಂಚಿಗೆ ತಂದು ನಿಲ್ಲಿಸಿದೆ. ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಆಡಳಿತದ ಮುಖ್ಯಸ್ಥರಾಗಿ, ಠಾಕ್ರೆ ಅವರು ಬಿಜೆಪಿಯನ್ನು ಮತ್ತು ಅದ್ರಾ ಮಾತೃ ಸಂಸ್ಥೆ ಆರ್‌ಎಸ್‌ಎಸ್ ಅನ್ನು ಅವಮಾನಿಸುತ್ತಲೆ ಬಂದರು ಉದ್ದವ್. 

ಸಂದರ್ಶನಗಳಲ್ಲಿ ಉದ್ದವ್ ಅವರು ಉದ್ಧಟತನದಿಂದ ಅವೆರಡೂ ಸಂಘಟನೆಗಳನ್ನು ಅಪಹಾಸ್ಯ ಮಾಡಿದರು ಮತ್ತು ಶಿವಸೇನಾ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ನಿರಂತರವಾಗಿ ಟೀಕಿಸಿದರು.
ಅಲ್ಲದೆ ಆರ್ಟಿಕಲ್ 370 ರ ರದ್ದತಿಯನ್ನು ಸಾಮ್ನಾ ವಿರೋಧಿಸಿದಾಗ ಮತ್ತು 1990 ರ ದಶಕದಲ್ಲಿ ಕಾಶ್ಮೀರಿ  ಚಲನಚಿತ್ರವಾದ ‘ಕಾಶ್ಮೀರ್ ಫೈಲ್ಸ್’ ಅನ್ನು ಟೀಕಿಸಿದಾಗ ಸೈನಿಕರು ಬೀದಿಯಲ್ಲಿ ನಿಂತು ಯೋಚಿಸಲು ಪ್ರಾರಂಭಿಸಿದರು. ಮಹಾ ಅಖಾಡ ಅನ್ನು ಮೆಚ್ಚಿಸುವ ಬಲಿಪೀಠದಲ್ಲಿ ಠಾಕ್ರೆ ಸೇನೆಯ ಕಾರ್ಯಸೂಚಿಯನ್ನು ತರಾತುರಿಯಲ್ಲಿ ತ್ಯಾಗ ಮಾಡಿದರು. ಅವರ ರಾಜಕೀಯ ಪಲ್ಟಿಯು ಪಕ್ಷದ ಸದಸ್ಯರ ನೈತಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರಿಗೆ ಆಗ ತಿಳಿದಿರಲಿಲ್ಲ. ಬಾಳಾಸಾಹೇಬ್ ಟಾಕ್ರೆ ಅವರ ಕೇಸರಿ ಪರಂಪರೆಯನ್ನು ಮಗ ಉದ್ದವ್ ಠಾಕ್ರೆ ಅವರು ಬಿಟ್ಟು ಕೊಟ್ಟರು. ಇತ್ತೀಚೆಗೆ ಈ ವಿಷಯದ ಬಗ್ಗೆ ಮಹಾರಾಷ್ಟ್ರದಲ್ಲಿ ಗುಸುಗುಸು ಪ್ರಾರಂಭವಾಗಿತ್ತು. ಆಗ ಎಚ್ಚೆತ್ತುಕೊಂಡ ಉದ್ಧವ್ ಠಾಕ್ರೆ ಅವರು ಡ್ಯಾಮೇಜ್ ಕಂಟ್ರೋಲ್ ಗೆ ಇಳಿದಿದ್ದರು.
ಹಿಂದುತ್ವದ ವಿಚಾರದಲ್ಲಿ ಸೇನೆಯ ಕಳೆದುಕೊಂಡ ನೆಲೆಯನ್ನು ಮರಳಿ ಪಡೆಯಲು ಅಯೋಧ್ಯ ಭೇಟಿ ಕೊಟ್ಟರು. ಆದರೆ ಹಿಂದುತ್ವದ ವಿರುದ್ಧವಾಗಿ ಮಾತನಾಡಿದ ಅವರ ಬಗ್ಗೆ ಶಿವಸೈನಿಕರು ಕರಗಲಿಲ್ಲ.

“ಶಿಂಧೆಯವರ ದಂಗೆಯ ನಂತರದ ಟ್ವೀಟ್‌ನಲ್ಲಿ ಅವರು ಮುಖ್ಯಮಂತ್ರಿಯ ಹಿಂದುತ್ವದ ಬದ್ಧತೆಯನ್ನು ಪ್ರಶ್ನಿಸಿದ್ದಾರೆ, ಇದು ಸೈನಿಕರ ದೊಡ್ಡ ಮಟ್ಟಿಗಿನ ಅಭಿಪ್ರಾಯ ಕೂಡಾ ಆಗಿದೆ.
ಅಲ್ಲದೆ, ಕುಟುಂಬದ ಸದಸ್ಯರ ಮೇಲಿನ ಅತಿಯಾದ ವಾತ್ಸಲ್ಯವು ಮುಖ್ಯಮಂತ್ರಿಗೆ ವಿಷಯಗಳನ್ನು ಸಂಕೀರ್ಣಗೊಳಿಸಿತು. ಅಪಾಯದ ಅಂಚಿಗೆ ಬಂದು ನಿಂತಿದ್ದಾರೆ ಉದ್ಧವ್ ಠಾಕ್ರೆ. ಬಿರುಗಾಳಿಯಲ್ಲಿ ಅವರು ಅಧಿಕಾರ ಉಳಿಸಿಕೊಂಡರೂ, ಆರೆಸ್ಸೆಸ್ ಮತ್ತು ಮೋದಿಯನ್ನು ತೆಗಳಿದ ಶಿವಸೇನೆಯನ್ನು ಹಿಂದೂ ವಿರೋಧಿ ಎನ್ನುವಂತೆ ಬಿಂಬಿಸುವಲ್ಲಿ ಬಿಜೆಪಿ ಸಫಲವಾಗಿದೆ. ಆ ಮೂಲಕ ಹಿಂದುತ್ವ ಅಪಾರ ವೋಟುಗಳನ್ನು ಖಚಿತವಾಗಿಯೂ ಶಿವಸೇನೆ ಕಳೆದುಕೊಳ್ಳಲಿದೆ. ಮೂರು ವರ್ಷ ಹೊಂಚಿ ಹಾಕಿ ಕಾದು, ಬಿಜೆಪಿ ಶಿವಸೇನೆಯನ್ನು ಮಹಾರಾಷ್ಟ್ರದಲ್ಲಿ ರಾಜಕೀಯವಾಗಿ ಮತ್ತು ಹಿಂದುತ್ವದ ನೆಲೆಗಟ್ಟಿನಲ್ಲಿ ಪಕ್ಕಕ್ಕೆ ಸರಿಸುವ ಬಿಜೆಪಿ ಸಫಲವಾಗಿದೆ.

Leave A Reply

Your email address will not be published.