SBI ಗ್ರಾಹಕರಿಗೆ ಇನ್ನು ಮುಂದೆ ಔಷಧಿಗಳ ಖರೀದಿ, ವೈದ್ಯರ ಭೇಟಿ ಎರಡೂ ಅಗ್ಗ !! | ಹೇಗೆ ಅಂತೀರಾ?? ಮುಂದೆ ಓದಿ..

SBI ಗ್ರಾಹಕರಿಗೊಂದು ಸಿಹಿ ಸುದ್ದಿ ಇದೆ. ಎಸ್ ಬಿಐ ಇದೀಗ ತನ್ನ ಗ್ರಾಹಕರಿಗೆ ವೈದ್ಯರು ಮತ್ತು ಮೆಡಿಕಲ್ ಸ್ಟೋರ್‌ಗಳಿಗೆ ಸಂಬಂಧಿಸಿದ ಸೌಲಭ್ಯವನ್ನು ಯೋನೋ (YONO) ಆಪ್‌ನಲ್ಲಿ ಒದಗಿಸುತ್ತದೆ. ಹಾಗಾಗಿ ಇನ್ನು ಮುಂದೆ ಆನ್ ಲೈನ್ ನಲ್ಲಿ ಡಾಕ್ಟರ್ ಹಾಗೂ ಮೆಡಿಕಲ್ ಅನ್ನು ಸಂಪರ್ಕಿಸುವ ಸೇವೆ ಜನಸಾಮಾನ್ಯರಿಗೆ ಸಿಗಲಿದೆ.

ಹೌದು. ಯೋನೋ ಅಪ್ ಮೂಲಕ ಅಪೋಲೋ, ಫಾರ್ಮ್ ಈಸಿ, ಡಾ. ಲಾಲ್ ಪಾಥ್‌ಲ್ಯಾಬ್‌ಗಳಿಗೆ ಸಂಬಂಧಿಸಿದ ಅನೇಕ ಆನ್‌ಲೈನ್ ಮೆಡಿಕಲ್ ಪ್ಲಾಟ್ ಫಾರಂಗಳ ಸಹಾಯದಿಂದ ಆನ್‌ಲೈನ್‌ನಲ್ಲಿ ಔಷಧಿಗಳನ್ನು ಖರೀದಿಸುವುದು ಮತ್ತು ವೈದ್ಯರೊಂದಿಗೆ ಸಮಾಲೋಚಿಸುವುದು ಇನ್ನು ಮುಂದೆ ಸುಲಭವಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಔಷಧ ಖರೀದಿ ಮತ್ತು ಮೆಡಿಕಲ್ ಕನ್ಸಲ್ ಟೇಶನ್ ಬುಕ್ ಮಾಡಬಹುದು. ಇದಕ್ಕಾಗಿ SBI YONO ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಹೇಳಿದೆ.

YONO SBI ಹೆಲ್ತ್ ಅಂಡ್ ವೆಲ್ ನೆಸ್ ಬ್ರಾಂಡ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತಿದೆ. ಗ್ರಾಹಕರು ತಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಔಷಧಿಗಳನ್ನು ಖರೀದಿಸಬಹುದು ಮಾತ್ರವಲ್ಲ, ಮೆಡಿಕಲ್ ಕನ್ಸಲ್ ಟೇಶನ್ ಕೂಡಾ ಬುಕ್ ಮಾಡಬಹುದು.

ಸಿಗುವ ರಿಯಾಯಿತಿ ಎಷ್ಟು?

*ಅಪೊಲೊ 24*7- ಔಷಧಿಗಳು ಮತ್ತು  ಮೆಡಿಕಲ್ ಕನ್ಸಲ್ ಟೆಶನ್ ಮೇಲೆ 18% ವರೆಗೆ ರಿಯಾಯಿತಿ ಪಡೆಯಬಹುದು.
*PharmEasy- ಈ ಔಷಧಿಗಳನ್ನು ಇಲ್ಲಿ ಖರೀದಿಸಲು ನೀವು ಸುಮಾರು 25% ರಿಯಾಯಿತಿ ಸಿಗುತ್ತದೆ.
*ಡಾ.ಲಾಲ್ ಪಾಥ್‌ಲ್ಯಾಬ್ಸ್- ಪ್ಯಾಥೋಲಜಿ ಟೆಸ್ಟ್ ಮಾಡಿಸಿಕೊಂಡರೆ 15% ರಿಯಾಯಿತಿ.
*ಇಂಡಸ್ ಹೆಲ್ತ್ – ಪ್ರೈವೇಟ್ ಚೆಕ್ ಅಪ್ ಮೇಲೆ 13%  ರಿಯಾಯಿತಿ.
*ಟಾಟಾ 1 mg- ಇಲ್ಲಿ ನೀವು ಪ್ರಿಸ್ಕ್ರಿಪ್ಷನ್ ಮೂಲಕ ಔಷಧಿಗಳ ಮೇಲೆ ಸುಮಾರು 25% ರಿಯಾಯಿತಿಯನ್ನು ಪಡೆಯಬಹುದು.

ಪಡೆಯುವುದು ಹೇಗೆ ?

*ಈ ರಿಯಾಯಿತಿ ಪಡೆಯಬೇಕಾದರೆ ಮೊದಲು SBI YONO ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.
*ನಂತರ ಶಾಪ್ & ಆರ್ಡರ್ ಆಯ್ಕೆಯನ್ನು ಕ್ಲಿಕ್ ಮಾಡಿ.
*ನಂತರ Heath & Wellness ಗೆ ಹೋಗಿ.
*ಇಲ್ಲಿ ಮೆಡಿಕಲ್ ಪ್ಲಾಟ್ ಫಾರ್ಮರ್ಸ್ ಅನ್ನು ಆಯ್ಕೆ ಮಾಡಬಹುದು.
*ನಂತರ ಔಷಧಿ ಖರೀದಿಸಬಹುದು.

ಎಸ್ ಬಿಐ ಗ್ರಾಹಕರಿಗಾಗಿ ಪ್ರಕಟಿಸಿರುವ ಈ ನೂತನ ಸೌಲಭ್ಯವನ್ನು ಎಲ್ಲಾ ಗ್ರಾಹಕರು ಉಪಯೋಗಿಸಿಕೊಳ್ಳುವುದು ಒಳಿತು. ಅದು ಕೂಡ ರಿಯಾಯಿತಿ ದರದಲ್ಲಿ ಔಷಧಿಗಳು ಸಿಗುತ್ತಿರುವಾಗ ಯೋಚಿಸುವುದೇಕೆ, ಈಗಲೇ ಯೋನೋ ಅಪ್ ಡೌನ್ಲೋಡ್ ಮಾಡಿಕೊಂಡು ಈ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಿ.

Leave A Reply

Your email address will not be published.