6 ವರ್ಷಗಳ ಹಿಂದೆ ಮದುವೆಯಾಗಿದ್ದ ನಾಲ್ಕನೇ ಪತ್ನಿಗೂ ವಿಚ್ಛೇದನ ನೀಡಿದ 91 ರ ಮಾಧ್ಯಮ ದಿಗ್ಗಜ !!

ಪ್ರಪಂಚದ ಅನೇಕ ಜನಪ್ರಿಯ ವ್ಯಕ್ತಿಗಳು ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ವಿಷಯದಲ್ಲಿ ಸುದ್ದಿಯಾಗುತ್ತಿದ್ದಾರೆ. ಅಂತೆಯೇ 6 ವರ್ಷದ ಹಿಂದೆ ಮದುವೆಯಾಗಿದ್ದ ಮಾಧ್ಯಮ ದಿಗ್ಗಜ ರೂಪರ್ಟ್ ಮುರ್ಡೋಕ್ ಇದೀಗ ತಮ್ಮ 4ನೇ ಪತ್ನಿ ನಟಿ ಜೆರ್ರಿ ಹಾಲ್‍ಗೆ ವಿಚ್ಛೇದನ ನೀಡುವ ಮೂಲಕ ಮತ್ತೊಮ್ಮೆ ಸುದ್ದಿ ಆಗಿದ್ದಾರೆ.

2016ರ ಮಾರ್ಚ್‍ನಲ್ಲಿ ಮಧ್ಯ ಲಂಡನ್‍ನಲ್ಲಿ ನಡೆದ ಸಮಾರಂಭದಲ್ಲಿ 91 ವರ್ಷದ ರೂಪರ್ಟ್ ಮುರ್ಡೋಕ್ 65 ವರ್ಷದ ಜೆರ್ರಿ ಹಾಲ್ ಅವರನ್ನು ಮದುವೆ ಆಗಿದ್ದರು. ಹಿಂದಿನ ವರ್ಷವಷ್ಟೇ ರೂಪರ್ಟ್ ಮುರ್ಡೋಕ್‍ 90ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ ಇದೀಗ ಜೆರ್ರಿಗೆ ವಿಚ್ಛೇದನವನ್ನು ನೀಡಿದ್ದಾರೆ. ಯಾವ ಕಾರಣಕ್ಕಾಗಿ ವಿಚ್ಛೇದನ ನೀಡಿದ್ದಾರೆ ಎನ್ನುವ ವಿಷಯ ಇನ್ನೂ ಬಹಿರಂಗವಾಗಿಲ್ಲ. ಈ ವಿಚ್ಛೇದನದ ಬಗ್ಗೆ ಮುರ್ಡೋಕ್‍ನ ವಕ್ತಾರ ಬ್ರೈಸ್ ಟಾಮ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ರೂಪರ್ಟ್ ಮುರ್ಡೋಕ್ ಫ್ಯಾಕ್ಸ್ ನ್ಯೂಸ್ ಚಾನೆಲ್ ಹಾಗೂ ವಾಲ್ ಸ್ಟ್ರೀಟ್ ಜರ್ನಲ್‍ನ ನ್ಯೂಸ್ ಕಾರ್ಪ್ ಮಾಲೀಕತ್ವವನ್ನು ಹೊಂದಿದ್ದಾರೆ. ಮುರ್ಡೋಕ್ ನ್ಯೂಸ್ ಕಾರ್ಪ್ ಮತ್ತು ಫಾಕ್ಸ್ ಕಾರ್ಪ್ ಅನ್ನು ರೆನೋ, ನೆವಾಡಾ ಮೂಲದ ಫ್ಯಾಮಿಲಿ ಟ್ರಸ್ಟ್ ಮೂಲಕ ನಡೆಸುತ್ತಿದ್ದಾರೆ. ಅದರಲ್ಲಿ ಶೇ. 40 ರಷ್ಟು ಷೇರನ್ನು ಹೊಂದಿದ್ದಾರೆ.

ಮುರ್ಡೋಕ್ ಈವರೆಗೆ 3 ಪತ್ನಿಯರಿಗೆ ವಿಚ್ಛೇದನ ನೀಡಿದ್ದಾರೆ. ಅವರಲ್ಲಿ ಮುರ್ಡೋಕ್ ಈ ಹಿಂದೆ ಉದ್ಯಮಿ ವೆಂಡಿ ಡೆಂಗ್ ಅವರನ್ನು ವಿವಾಹವಾದರು. ಅವರೊಂದಿಗೂ ಮದುವೆಯಾಗಿ 14 ವರ್ಷಗಳ ನಂತರ ಅಂದರೆ 2014ರಲ್ಲಿ ವಿಚ್ಛೇದನ ಪಡೆದಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಹಾಗೇ 1999ರಲ್ಲಿ ತಮ್ಮ ಎರಡನೇ ಪತ್ನಿ ಅನ್ನಾ ಮುರ್ಡೋಕ್ ಮಾನ್, ಸ್ಕಾಟಿಷ್ ಪತ್ರಕರ್ತೆಯಿಂದ ಬೇರ್ಪಟ್ಟಿದ್ದರು. ಅವರಿಗೂ 3 ಮಕ್ಕಳಿದ್ದಾರೆ. ಮೊದಲ ಪತ್ನಿ ಪೆಟ್ರೀಷಿಯಾ ಬೂಕರ್, ಮಾಜಿ ಫ್ಲೈಟ್ ಅಟೆಂಡೆಂಟ್‍ಗೆ ಮಗಳಿದ್ದು, 1966ರಲ್ಲಿ ವಿಚ್ಛೇದನ ಪಡೆದರು. ಇದೀಗ ನಾಲ್ಕನೇ ಬಾರಿಯೂ ವಿಚ್ಛೇದನ ನೀಡಿ ಸುದ್ದಿಯಾಗಿದ್ದಾರೆ.

Leave a Reply

error: Content is protected !!
Scroll to Top
%d bloggers like this: