ಡ್ರೈ ಶೇವಿಂಗ್ ಮಾಡ್ತೀರಾ ? ಹಾಗಾದರೆ ಇದನ್ನು ಗಮನಿಸಿ

ಯಾರಿಗೆ ತಾನೇ ಕೈ ಕಾಲಿನಲ್ಲಿ ಕೂದಲಿದ್ದರೆ ಇಷ್ಟವಾಗುತ್ತೆ ? ಪ್ರತಿಯೊಬ್ಬರು ನುಣುಪಾದ, ಬಿಳುಪಾದ ಕೈ ಕಾಲುಗಳನ್ನು ಹೊಂದಲು ಇಷ್ಟ ಪಡುತ್ತಾರೆ. ಹಾಗಾಗಿ ಕ್ಲೀನ್ ಶೇವ್ ಮಾಡುವುದು ಮಾಮೂಲು.

ಪೂರ್ತಿ ಶೇವ್ ಮಾಡಿದ್ದರೆ ಮಾತ್ರ ಹೈಜಿನ್ ಆಗಿ ಕಾಣೋದು, ಜೊತೆಗೆ ಸ್ಟೈಲಿಶ್ ಆಗಿ ಕಾಣೋದು. ಅವಸರದಲ್ಲೇನಾದರೂ ಡ್ರೈ ಶೇವ್ ಮಾಡೋದ್ರಿಂದ ಚರ್ಮದ ಮೇಲೆ ಪರಿಣಾಮ ಬೀರುತ್ತೆ ಅನ್ನೋದು ಗೊತ್ತಾ?

ಅನಗತ್ಯ ಚರ್ಮದ ಕೂದಲನ್ನು ತೆಗೆದುಹಾಕಲು ಅನೇಕ ಜನರು ಡ್ರೈ ಶೇವಿಂಗ್ ಮಾಡಲು ಬಯಸುತ್ತಾರೆ. ಕೂದಲನ್ನು ತೆಗೆದು ಹಾಕಲು ಡ್ರೈ ಶೇವಿಂಗ್ ಅಗ್ಗದ ಮತ್ತು ಸುಲಭ ಮಾರ್ಗ ಅನ್ನೋದು ಎಲ್ಲರ ನಂಬಿಕೆ. ಆದರೆ, ಡ್ರೈ ಶೇವಿಂಗ್ ಮಾಡೋದ್ರಿಂದ ಕೆಲವೊಂದು ಅಡ್ಡಪರಿಣಾಮಗಳು ಚರ್ಮದ ಮೇಲೆಯೂ ಉಂಟಾಗಬಹುದು, ಇದರ ಬಗ್ಗೆ ನೀವು ತಿಳ್ಕೊಳ್ಳೋದು ಮುಖ್ಯ.

ದೇಹದಿಂದ ಅನಗತ್ಯ ಕೂದಲನ್ನು ತೆಗೆದುಹಾಕಲು ಜನರು ಅನೇಕ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ, ಮಾರ್ಕೆಟ್ ನಲ್ಲಿ ಬೇರೆ ಬೇರೆ ಉತ್ಪನ್ನಗಳು ಸಿಗುತ್ತವೆ. ಪಾರ್ಲರ್ ಗಳಲ್ಲಿ ವ್ಯಾಕ್ಸಿಂಗ್ ನಿಂದ ಹಿಡಿದು ಎಪಿಲೇಟರ್ ಮತ್ತು ಲೇಸರ್ ಲೈಟ್ ಚಿಕಿತ್ಸೆಯವರೆಗೆ, ಅನಗತ್ಯ ಕೂದಲನ್ನು ತೆಗೆದುಹಾಕಲು ಅನೇಕ ರೀತಿಯ ಪ್ರಾಡಕ್ಟ್ ಗಳು ಲಭ್ಯವಿದೆ.

ಕೂದಲನ್ನು ತೆಗೆಯಲು ಎಲ್ಲರಿಗೂ ಮೊದಲು ಹೊಳೆಯುವ ಮಾರ್ಗ ಶೇವಿಂಗ್. ಇದನ್ನು ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರು ಟ್ರೈ ಮಾಡುತ್ತಾರೆ. ಅನೇಕ ಜನರು ಆಗಾಗ್ಗೆ ಡ್ರೈ ಶೇವಿಂಗ್ ಮಾಡುತ್ತಾರೆ. ಈ ಕಾರಣದಿಂದಾಗಿ ಚರ್ಮದ ಮೇಲೆ ದದ್ದುಗಳು, ಮೊಡವೆಗಳಂತಹ ಸಮಸ್ಯೆಗಳನ್ನು ಸಹ ಕಾಣಬಹುದು.

ಅವಸರದ ಕಾರಣದಿಂದ ಅಥವಾ ವಸ್ತುಗಳು ಲಭ್ಯವಿಲ್ಲದ ಕಾರಣ, ಜನರು ಆಗಾಗ್ಗೆ ರೇಜರ್ ಸಹಾಯದಿಂದ ಅನಗತ್ಯ ಚರ್ಮದ ಕೂದಲನ್ನು ತೆಗೆಯುತ್ತಾರೆ, ಆದರೆ ಡ್ರೈ ಶೇವಿಂಗ್ ನಿಂದ ಅನೇಕ ಅಡ್ಡಪರಿಣಾಮಗಳು ಉಂಟಾಗಬಹುದು. ಡ್ರೈ ಶೇವಿಂಗ್ ನ ಅಡ್ಡಪರಿಣಾಮಗಳು ಯಾವುವು ಎಂದು ತಿಳಿಯೋಣ.

ಕೆಲವರು ಚರ್ಮದ ಮೇಲೆ ಶೇವಿಂಗ್ ಕ್ರೀಮ್ ಅಥವಾ ಸಾಬೂನ್ ಹಚ್ಚದೆ ಡ್ರೈ ಶೇವಿಂಗ್ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಚರ್ಮದ ಮೇಲೆ ಕಿರಿಕಿರಿ ಮತ್ತು ತುರಿಕೆಯ ಅಪಾಯ ಉಂಟಾಗುತ್ತದೆ, ಆದ್ದರಿಂದ ಡ್ರೈ ಶೇವಿಂಗ್ ಮಾಡುವಾಗ ಶೇವಿಂಗ್ ಕ್ರೀಮ್ ಬಳಸಿ. ಅಲ್ಲದೆ, ಶೇವಿಂಗ್ ಮಾಡಿದ ನಂತರ ಚರ್ಮದ ಮೇಲೆ ಮಾಯಿಶ್ಚರೈಸರ್ ಹಚ್ಚಲು ಮರೆಯಬೇಡಿ.

ಡ್ರೈ ಶೇವಿಂಗ್ ಮಾಡುವುದರಿಂದ, ಚರ್ಮವು ಶುಷ್ಕ ಮತ್ತು ನಿರ್ಜೀವವಾಗಿ ಕಾಣಲು ಪ್ರಾರಂಭಿಸುತ್ತದೆ, ಇದರಿಂದಾಗಿ ನಿಮ್ಮ ಚರ್ಮದ ಮೇಲೆ ಡ್ರೈನೆಸ್ ಅಥವಾ ಕೆಂಪಾಗುವಿಕೆ ಕಾಣಬಹುದು. ಪ್ರತಿ ಬಾರಿ ನೀವು ಶೇವಿಂಗ್ ಮಾಡುವ ಮೊದಲು, ಚರ್ಮದ ಮೇಲೆ ಕ್ರೀಮ್, ಸಾಬೂನು ಅಥವಾ ಜೆಲ್ ಬಳಸಿ, ಇದು ಲ್ಯೂಬ್ರಿಕೆಂಟ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಇದು ಚರ್ಮದ ಮಾಯಿಶ್ಚರೈಸರ್ ಹಾಗೆಯೇ ಉಳಿಸುತ್ತದೆ ಮತ್ತು ಡ್ರೈನೆಸ್ ಸಹ ಹೋಗುತ್ತದೆ.

ಡ್ರೈ ಶೇವಿಂಗ್ ಕೂಡ ಚರ್ಮದ ಮೇಲೆ ಗೀರುಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಡ್ರೈನೆಸ್ ನಿಂದಾಗಿ, ರೇಜರ್ ಸಂಪರ್ಕಕ್ಕೆ ಬಂದ ತಕ್ಷಣ ಚರ್ಮವು ಗೀಚಲ್ಪಡುತ್ತದೆ ಮತ್ತು ಬ್ಲೀಡಿಂಗ್ ಪ್ರಾರಂಭವಾಗಬಹುದು. ಆದ್ದರಿಂದ ಶೇವಿಂಗ್ ಮಾಡುವಾಗ ಕ್ರೀಮ್ ಬಳಸಲು ಮರೆಯಬೇಡಿ. ಅಲ್ಲದೆ, ಶೇವಿಂಗ್ ಮಾಡಿದ ನಂತರವೂ ಚರ್ಮವನ್ನು ಮಾಯಿಶ್ಚರೈಸ್ ಮಾಡಲು ಲೋಷನ್ ಅಥವಾ ಎಣ್ಣೆ ಹಚ್ಚುವುದನ್ನು ಮರೆಯಬೇಡಿ.

Leave A Reply

Your email address will not be published.