ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿಲ್ಲ ಎಂದು ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವ ವೇಗಿ !!

ಯುವ ಕ್ರಿಕೆಟಿಗನೊಬ್ಬ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಇಂಟರ್-ಸಿಟಿ ಚಾಂಪಿಯನ್‌ಶಿಪ್‌ನಲ್ಲಿ ತನ್ನ ತವರು ತಂಡಕ್ಕೆ ಆಯ್ಕೆಯಾಗಲಿಲ್ಲ ಎಂಬ ಕಾರಣಕ್ಕೆ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ಸಿಂಧ್ ಪ್ರಾಂತ್ಯದ ಹೈದರಾಬಾದ್‌ನ ನಡೆದಿದೆ.

ವೇಗದ ಬೌಲರ್ ಶೋಯೆಬ್ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡಿದ್ದು, ಅವರ ಕುಟುಂಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ. ಇಂಟರ್-ಸಿಟಿ ಚಾಂಪಿಯನ್‌ಶಿಪ್‌ಗಾಗಿ ಟ್ರಯಲ್ಸ್ ನಲ್ಲಿ ತನ್ನ ತರಬೇತುದಾರರಿಂದ ಆಯ್ಕೆಯಾಗದ ನಂತರ ಶೋಯೆಬ್ ಖಿನ್ನತೆಯಿಂದ ಕೋಣೆ ಸೇರಿದ್ದು, ಹೊರಗೆ ಬರ್ತಿರಲಿಲ್ಲ ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಶೋಯೆಬ್ ಕೋಣೆಯ ಬಾತ್ ರೂಂನಲ್ಲಿ ಮಣಿಕಟ್ಟು ಕತ್ತರಿಸಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಇದನ್ನು ಗಮನಿಸಿದ ತಕ್ಷಣವೇ ಆಸ್ಪತ್ರೆಗೆ ಸೇರಿಸಿದೆವು. ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಫೆಬ್ರವರಿ 2018 ರಲ್ಲಿ ಕರಾಚಿಯ ಅಂಡರ್-19 ಕ್ರಿಕೆಟಿಗ ಮುಹಮ್ಮದ್ ಜರಿಯಾಬ್ ಅವರು ನಗರದ ಅಂಡರ್-19 ತಂಡದಿಂದ ಕೈಬಿಡಲ್ಪಟ್ಟ ನಂತರ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Leave a Reply

error: Content is protected !!
Scroll to Top
%d bloggers like this: