ಚಿನ್ನದ ಮರುಬಳಕೆ, ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ!

ಚಿನ್ನದ ಮರು ಬಳಕೆ ಅಂದರೆ ರೀ-ಸೈಕ್ಲಿಂಗ್ ನಲ್ಲಿ ಭಾರತವು ವಿಶ್ವದಲ್ಲಿ ನಾಲ್ಕನೇ ದೊಡ್ಡ ದೇಶವಾಗಿ ಹೊರಹೊಮ್ಮಿದೆ. ವ ಗೋಲ್ಡ್ ಕೌನ್ಸಿಲ್ (ಡಬ್ಲ್ಯುಜಿಸಿ) ವರದಿ ಪ್ರಕಾರ, ಭಾರತದಲ್ಲಿ 2021 ರಲ್ಲಿ 75 ಟನ್ ಚಿನ್ನವು ಮರು ಬಳಕೆಯಾಗಿದೆ.

ಭಾರತೀಯ ಚಿನ್ನದ ಮಾರುಕಟ್ಟೆಯ ಆಳವಾದ ವಿಶ್ಲೇಷಣೆಯ ಭಾಗವಾಗಿ ‘ಚಿನ್ನದ ಶುದ್ದೀಕರಣ ಮತ್ತು ಮರುಬಳಕೆ’ ಶೀರ್ಷಿಕೆಯ ವರದಿಯನ್ನು ಡಬ್ಲ್ಯುಜಿಸಿ ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ, ಭಾರತದಲ್ಲಿ ಚಿನ್ನದ ಬೇಡಿಕೆ ಹೇಗೆ ಹೆಚ್ಚಳತೆ ಪಡೆದುಕೊಂಡಿದೆಯೋ ಅದೇ ರೀತಿಯಲ್ಲಿ, ಮರುಬಳಕೆ ಕೂಡ ಏರಿಕೆಯಾಗಿದೆ. ಭಾರತದಲ್ಲಿನ ಚಿನ್ನದ ಸಂಸ್ಕರಣಾ ಉದ್ಯಮವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ.

ಜಾಗತಿಕ ಚಿನ್ನದ ಮರು ಬಳಕೆಯಲ್ಲಿ ದೇಶವು ನಾಲ್ಕನೇ ಸ್ಥಾನದಲ್ಲಿದೆ. 2013 ರಿಂದ 2021 ರವರೆಗೆ, ಭಾರತದ ಚಿನ್ನದ ಸಂಸ್ಕರಣಾ ಸಾಮರ್ಥ್ಯವು 1,500 ಟನ್ ಅಂದರೆ ಶೇ.500ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ದೇಶದ ಚಿನ್ನದ ಪೂರೈಕೆಯ ಶೇ.11ರಷ್ಟು ಭಾಗವು ‘ಹಳೆಯ ಚಿನ್ನ’ದಿಂದ ಬಂದಿದೆ. ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಡಬ್ಲ್ಯುಜಿಸಿ ಭಾರತದ ಪ್ರಾದೇಶಿಕ ಸಿಇಒಓ ಸೋಮಸುಂದರಂ ಪಿ.ಆರ್, ‘ಮುಂದಿನ ಹಂತದ ಮಾರುಕಟ್ಟೆ ಸುಧಾರಣೆ, ಜವಾಬ್ದಾರಿಯುತ ಸಂಪನ್ಮೂಲಗಳ ಶೇಖರಣೆ, ಚಿನ್ನದ ಗಟ್ಟಿಗಳ ರಫ್ತು ಸ್ಕ್ರ್ಯಾ ಪ್‌ನ ಸ್ಥಿರ ಪೂರೈಕೆಯನ್ನು ಉತ್ತೇಜಿಸಿದರೆ ಭಾರತವು ಸ್ಪರ್ಧಾತ್ಮಕ ಸಂಸ್ಕರಣಾ ಕೇಂದ್ರವಾಗಿ ಹೊರ ಹೊಮ್ಮುವ ಸಾಮರ್ಥ್ಯ ಹೊಂದಿದೆ’ ಎಂದಿದ್ದಾರೆ.

Leave A Reply

Your email address will not be published.